• search
 • Live TV
ಪಟ್ನಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಟ್ರಕ್ ಚಾಲಕನ ಮಗಳು ಬಿಹಾರದ ಅತಿ ಶ್ರೀಮಂತ ಅಭ್ಯರ್ಥಿ

|

ಪಾಟ್ನಾ, ಅ. 19: ಆಡಳಿತಾರೂಢ ಜೆಡಿಯು ಪಕ್ಷದಿಂದ ಇದೇ ಮೊದಲ ಬಾರಿಗೆ ಸ್ಪರ್ಧಿಸಿರುವ ಮನೋರಮಾ ದೇವಿ ಅವರು ಅತಿ ಶ್ರೀಮಂತ ಅಭ್ಯರ್ಥಿ ಎನಿಸಿಕೊಂಡಿದ್ದಾರೆ. ನಿತೀಶ್ ಕುಮಾರ್ ಅವರೇ ಖುದ್ದು ಟಿಕೆಟ್ ನೀಡಿದ್ದು, ಗಯಾದ ಆತ್ರಿ ಕ್ಷೇತ್ರದ ಜೆಡಿಯು ಅಭ್ಯರ್ಥಿಯಾಗಿದ್ದಾರೆ. ಟ್ರಕ್ ಚಾಲಕರೊಬ್ಬರ ಮಗಳಾಗಿರುವ ಮನೋರಮಾ ಘೋಷಿತ ಆಸ್ತಿ ಮೌಲ್ಯ 89.77 ಕೋಟಿ ರು.

ಒಂದು ಕಾಲದಲ್ಲಿ ಮನೋರಮಾ ಅವರ ತಂದೆ ಟ್ರಕ್ ಚಾಲಕರಾಗಿದ್ದರು. ಗರಡಿಯಾಳಾಗಿದ್ದ ಪತಿ ಕೂಡಾ ರಾಜಕಾರಣಿ. ಮನೋರಮಾ ಅವರ ಪುತ್ರ ಕೊಲೆ ಕೇಸಿನಲ್ಲಿ ಜೈಲಿನಲ್ಲಿ ಜೀವಮಾನ ಶಿಕ್ಷೆ ಅನುಭವಿಸುತ್ತಿದ್ದಾರೆ.

ಮೈತ್ರಿಕೂಟಗಳಿಗೆ ಬೇಡವಾದ LJD, ಬಿಹಾರ ರಣಕಣದಲ್ಲಿ ಏಕಾಂಗಿಮೈತ್ರಿಕೂಟಗಳಿಗೆ ಬೇಡವಾದ LJD, ಬಿಹಾರ ರಣಕಣದಲ್ಲಿ ಏಕಾಂಗಿ

ಜೆಡಿಯು ಅಭ್ಯರ್ಥಿ ಮನೋರಮಾ ಘೋಷಿಸಿದಂತೆ ಆಕೆ ಬಳಿ 53.19 ಕೋಟಿ ರು ಆಸ್ತಿ ಇದೆ. ಆಕೆ ಕುಟುಂಬದ ಆಸ್ತಿ ಸೇರಿಸಿದರೆ 89 ಕೋಟಿ ರುಗೂ ಅಧಿಕ ಮೌಲ್ಯದ ಆಸ್ತಿ ಲೆಕ್ಕಕ್ಕೆ ಸಿಗುತ್ತದೆ. ಆಕೆ ಪತಿ ಬಿಂಡಿ ಯಾದವ್ ಅವರು ಕೊರೊನಾವೈರಸ್ ಸೋಂಕಿಗೆ ಸಿಲುಕಿ ಚೇತರಿಸಿಕೊಳ್ಳದೆ ಜುಲೈ ತಿಂಗಳಿನಲ್ಲಿ ಅಸುನೀಗಿದರು.

30 ವರ್ಷಗಳ ಹಿಂದೆ ಆರ್ ಜೆಡಿಯಲ್ಲಿದ್ದಾಗ ಬಿಂಡಿ ಯಾದವ್ ಅವರ ಜೊತೆ ಮನೋರಮಾ ಮದುವೆಯಾಗಿದ್ದರು. ನಂತರ ಇಬ್ಬರೂ ಜೆಡಿಯು ಕಡೆ ವಾಲಿದರು. ಈ ದಂಪತಿ ಪುತ್ರ ರಾಕಿ 2016ರಲ್ಲಿ ಗಯಾದಲ್ಲಿ 12ನೇ ತರಗತಿ ಹುಡುಗ ಆದಿತ್ಯ ಸಚದೇವ ಎಂಬಾತನನ್ನು ಕೊಲೆ ಮಾಡಿದ ಆರೋಪ ಸಾಬೀತಾಗಿದ್ದರಿಂದ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ.

ಬಿಹಾರ ಚುನಾವಣೆ: ಬಿಜೆಪಿ ರೆಬೆಲ್‌ಗಳ ಆಶ್ರಯತಾಣವಾದ ಎಲ್‌ಜೆಪಿಬಿಹಾರ ಚುನಾವಣೆ: ಬಿಜೆಪಿ ರೆಬೆಲ್‌ಗಳ ಆಶ್ರಯತಾಣವಾದ ಎಲ್‌ಜೆಪಿ

   Political Popcorn with Lavanya : Dr BL Shankar, ಈಗ ಆಗಿರೋದೆ ಸಾಕು ಇನ್ಮೇಲೆ ಚುನಾವಣೆಗೆ ನಿಲ್ಲಲ್ಲಾ!?! Part2

   ಬಿಹಾರ ಕಣದಲ್ಲಿ ನರೇಶ್ ದಾಸ್ (ಎಸ್ ಯು ಸಿಐ-ಸಿ) ಆರ್ಥಿಕವಾಗಿ ಅತ್ಯಂತ ಬಡ ಅಭ್ಯರ್ಥಿ ಎನಿಸಿಕೊಂಡಿದ್ದಾರೆ. ಅವರ ಘೋಷಿತ ಆಸ್ತಿ ಮೌಲ್ಯ 3,500 ರು ದಾಟುವುದಿಲ್ಲ. ಜೆಎಪಿಯ ಅನಿಲ್ ಕುಮಾರ್ ಆಸ್ತಿ 7,000 ರು ಇದೆ. ಮನೋರಮಾ ಘೋಷಿತ ಆಸ್ತಿ 89.77 ಕೋಟಿ ರು ಇದ್ದರೆ ಕಾಂಗ್ರೆಸ್ಸಿನ ರಾಜೇಶ್ ಕುಮಾರ್ 33.65 ಕೋಟಿ ರು ನೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.

   English summary
   Manorama Devi, the JD(U) candidate from Atri in Gaya is contesting the elections for the first time as Nitish Kumar's nominee. However she is in the limelight for her assets which are worth Rs 89.77 crore.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X