ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಮ್ಮೆ ಮೇಲೆ ಕುಳಿತು ಚುನಾವಣೆ ಪ್ರಚಾರಕ್ಕೆ ಬಂದ ಅಭ್ಯರ್ಥಿ

|
Google Oneindia Kannada News

ಪಾಟ್ನಾ, ಅ.20: ಬಿಹಾರದ ವಿಧಾನಸಭೆ ಚುನಾವಣೆಯಲ್ಲಿ ದೊಡ್ಡ ದೊಡ್ಡ ಪಕ್ಷಗಳ ಅಭ್ಯರ್ಥಿಗಳು ವರ್ಚ್ಯುಯಲ್ ಸಮಾವೇಶ, ಮೊಬೈಲ್, ವಾಟ್ಸಾಪ್, ಇ ಪ್ರಚಾರಕ್ಕೆ ಮುಂದಾಗಿದ್ದಾರೆ. ಸಣ್ಣ ಪಕ್ಷದವರು ಮನೆ ಮನೆ ಪ್ರಚಾರದ ಹಾದಿ ಹಿಡಿದಿದ್ದಾರೆ. ಆದರೆ, ಗಯಾ ಕ್ಷೇತ್ರ ಅಭ್ಯರ್ಥಿಯೊಬ್ಬರು ಎಮ್ಮೆ ಸವಾರಿ ಮಾಡಿ ಪ್ರಚಾರ ನಡೆಸಿದ್ದಾರೆ.

ಗಯಾ ಕ್ಷೇತ್ರದ ರಾಷ್ಟ್ರೀಯ ಉಲೆಮಾ ಕೌನ್ಸಿಲ್ ಪಕ್ಷದ ಅಭ್ಯರ್ಥಿ 45 ವರ್ಷ ವಯಸ್ಸಿನ ಮೊಹಮ್ಮದ್ ಪರ್ವೇಜ್ ಮನ್ಸೂರಿ ಎಂಬುವರು ಎಮ್ಮೆ ಸವಾರಿ ಮಾಡಿ, ಬೀದಿ ಬೀದಿಗಳಿಗೆ ತೆರಳಿ ಮತಯಾಚಿಸಿದ್ದಾರೆ. ಮೊಹಮ್ಮದ್ ಪರ್ವೇಜ್ ವಿರುದ್ಧ ಪ್ರಾಣಿಗಳ ವಿರುದ್ಧ ಹಿಂಸೆ ನಿಯಂತ್ರಣ ಕಾಯ್ದೆ, ಕೊವಿಡ್ 19 ಕಾಯ್ದೆ ಉಲ್ಲಂಘನೆ, ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಮೈತ್ರಿಕೂಟಗಳಿಗೆ ಬೇಡವಾದ LJD, ಬಿಹಾರ ರಣಕಣದಲ್ಲಿ ಏಕಾಂಗಿಮೈತ್ರಿಕೂಟಗಳಿಗೆ ಬೇಡವಾದ LJD, ಬಿಹಾರ ರಣಕಣದಲ್ಲಿ ಏಕಾಂಗಿ

ಚುನಾವಣಾ ಪ್ರಚಾರ ಮಾಡುತ್ತಾ ಸ್ವರಾಜ್ ಪುರಿ ರಸ್ತೆಯ ಗಾಂಧಿ ಮೈದಾನ ಬಳಿ ಬಂದ ಅಭ್ಯರ್ಥಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮೊಹಮ್ಮದ್ ವಿರುದ್ಧ ಐಪಿಸಿ ಸೆಕ್ಷನ್ 269, 270 ಹಾಗೂ ಪ್ರಾಣಿಗಳ ವಿರುದ್ಧ ಹಿಂಸೆ ನಿಯಂತ್ರಣ ಕಾಯ್ದೆ ಉಲ್ಲಂಘನೆ ಅನ್ವಯ ಪ್ರಕರಣ ದಾಖಲಿಸಿಕೊಂಡು ಸಿಟಿ ಲೇನ್ ಠಾಣೆಯಲ್ಲಿ ಎಫ್ಐಆರ್ ಹಾಕಲಾಗಿದೆ. ಆದರೆ, ನಿನ್ನೆ ಸಂಜೆ ಜಾಮೀನು ಪಡೆದು ಠಾಣೆಯಿಂದ ಆತ ಹೊರ ಬಂದಿರುವ ಸುದ್ದಿ ಬಂದಿದೆ.

Bihar Elections 2020: Candidate booked for campaign riding Buffalo

''ಗಯಾ ಕ್ಷೇತ್ರ ಮಾಲಿನ್ಯಯುಕ್ತವಾಗಿದೆ, ರಾಜಕೀಯದಿಂದ ಕ್ಷೇತ್ರದ ಹೊಲಸು ತುಂಬಿದೆ. ಇದನ್ನು ತೊಗಲಿಸಲು ನಾನು ಈ ರೀತಿ ಪ್ರಚಾರ ಕೈಗೊಂಡೆ'' ಎಂದು ಮನ್ಸೂರಿ ಹೇಳಿದ್ದಾರೆ. 30 ವರ್ಷಗಳಿಂದ ಶಾಸಕರಾಗಿರುವ ಪ್ರೇಮ್ ಕುಮಾರ್, 15 ವರ್ಷಗಳಿಂದ ಮೇಯರ್ ಆಗಿರುವ ಕಾಂಗ್ರೆಸ್ ಅಭ್ಯರ್ಥಿ ಮೋಹನ್ ಶ್ರೀವಾಸ್ತವ ಅವರು ಗಯಾ ಕ್ಷೇತ್ರ ಅಭಿವೃದ್ಧಿಯಲ್ಲಿ ಸೋತಿದ್ದಾರೆ ಎಂದು ಮನ್ಸೂರಿ ಪ್ರತಿಪಾದಿಸಿದ್ದಾರೆ.

ಟ್ರಕ್ ಚಾಲಕನ ಮಗಳು ಬಿಹಾರದ ಅತಿ ಶ್ರೀಮಂತ ಅಭ್ಯರ್ಥಿಟ್ರಕ್ ಚಾಲಕನ ಮಗಳು ಬಿಹಾರದ ಅತಿ ಶ್ರೀಮಂತ ಅಭ್ಯರ್ಥಿ

Recommended Video

ಲಸಿಕೆ ಸಿಗತ್ತೋ ಇಲ್ವೋ ಗೊತ್ತಿಲ್ಲಾ ! ಆದ್ರೆ ಇದು ಮಾತ್ರ Ready ಇರ್ಬೇಕು | Oneindia Kannada

ಚುನಾವಣಾ ನೀತಿ ಸಂಹಿತೆ ಪ್ರಕಾರ, ಪ್ರಾಣಿಗಳನ್ನು ಚುನಾವಣಾ ಪ್ರಚಾರಕ್ಕೆ ಬಳಸುವುದು ನಿಷಿದ್ಧ, ಪಕ್ಷದ ಚಿಹ್ನೆಗೆ ಹೋಲಿಕೆ ಬರುವ ಪ್ರಾಣಿಗಳನ್ನು ಬಳಸುವಂತಿಲ್ಲ ಎಂದು ಹೇಳಲಾಗಿದೆ.

English summary
Gaya Candidate Mohammad Parvez Mansoori booked for riding a buffalo for election campaign.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X