ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೋಗ, ಸಾವಿನ ಭೀತಿಯನ್ನು ಮಾರುತ್ತಿರುವ ಬಿಜೆಪಿ: ಉಚಿತ ಲಸಿಕೆ ಭರವಸೆಗೆ ತೇಜಸ್ವಿ ಕಿಡಿ

|
Google Oneindia Kannada News

ಪಟ್ನಾ, ಅಕ್ಟೋಬರ್ 22: ಬಿಹಾರದ ಪ್ರತಿಯೊಬ್ಬರಿಗೂ ಉಚಿತವಾಗಿ ಕೋವಿಡ್ ಲಸಿಕೆಯನ್ನು ಒದಗಿಸುವುದಾಗಿ ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯನ್ನು ನೀಡಿರುವ ಭರವಸೆಯನ್ನು ಆರ್‌ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್ ಟೀಕಿಸಿದ್ದಾರೆ. ಲಸಿಕೆಯು ಇಡೀ ಭಾರತಕ್ಕೆ ಸೇರಿದ್ದೇ ಹೊರತು ಬಿಜೆಪಿಗೆ ಅಲ್ಲ ಎಂದು ಕಿಡಿಕಾರಿದ್ದಾರೆ.

'ಲಸಿಕೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವುದು ಅವರಿಗೆ ರೋಗ ಹಾಗೂ ಸಾವಿನ ಕುರಿತಾದ ಭೀತಿಯನ್ನು ಮಾರಾಟ ಮಾಡುವುದರ ಹೊರತಾಗಿ ಬೇರೆ ಆಯ್ಕೆ ಇಲ್ಲ ಎಂಬುದನ್ನು ತೋರಿಸುತ್ತದೆ. ಬಿಹಾರಿಗಳು ಆತ್ಮಗೌರವ ಉಳ್ಳವರು. ಸಣ್ಣ ಮೊತ್ತದ ಹಣಕ್ಕಾಗಿ ಅವರು ತಮ್ಮ ಮಕ್ಕಳ ಭವಿಷ್ಯವನ್ನು ಮಾರಾಟ ಮಾಡುವುದಿಲ್ಲ' ಎಂದು ತೇಜಸ್ವಿ ಯಾದವ್ ಹೇಳಿದ್ದಾರೆ.

ಭರಪೂರ ಉದ್ಯೋಗ ಭರವಸೆ ಹೊತ್ತ ಬಿಜೆಪಿ ಪ್ರಣಾಳಿಕೆ ಬಿಡುಗಡೆಭರಪೂರ ಉದ್ಯೋಗ ಭರವಸೆ ಹೊತ್ತ ಬಿಜೆಪಿ ಪ್ರಣಾಳಿಕೆ ಬಿಡುಗಡೆ

ಗುರುವಾರ ಬಿಹಾರ ವಿಧಾನಸಭೆ ಚುನಾವಣೆಯ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿರುವ ಬಿಜೆಪಿ, ಅಧಿಕಾರಕ್ಕೆ ಬಂದರೆ ಪ್ರತಿಯೊಬ್ಬರಿಗೂ ಉಚಿತವಾಗಿ ಕೊರೊನಾ ವೈರಸ್ ಲಸಿಕೆ ಪೂರೈಸುವುದಾಗಿ ಹೇಳಿದೆ. ಜತೆಗೆ ಬಿಹಾರದ ಜನೆತೆಗೆ 19 ಲಕ್ಷ ಉದ್ಯೋಗ ಒದಗಿಸುವುದಾಗಿ ಭರವಸೆ ನೀಡಿದೆ.

Bihar Election: Tejashwi Yadav Slams BJP For Poll Promise Of Free Covid-19 Vaccine

10 ಲಕ್ಷ ಉದ್ಯೋಗ ಸೃಷ್ಟಿಯ ಲೆಕ್ಕ ಕೊಟ್ಟ ತೇಜಸ್ವಿ ಯಾದವ್10 ಲಕ್ಷ ಉದ್ಯೋಗ ಸೃಷ್ಟಿಯ ಲೆಕ್ಕ ಕೊಟ್ಟ ತೇಜಸ್ವಿ ಯಾದವ್

Recommended Video

ಇದನ್ನು ಬಳಸಿ corona ಇಂದ ದೂರ ಇರಿ | Oneindia Kannada

'ಕೋವಿಡ್ 19 ಲಸಿಕೆ ದೊಡ್ಡ ಪ್ರಮಾಣದಲ್ಲಿ ಉತ್ಪಾದನೆಗೆ ಸಿಗುತ್ತಿದ್ದಂತೆಯೇ ಬಿಹಾರದ ಪ್ರತಿ ವ್ಯಕ್ತಿಯೂ ಉಚಿತವಾಗಿ ಲಸಿಕೆ ಪಡೆದುಕೊಳ್ಳಲಿದ್ದಾರೆ. ಇದು ನಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಮಾಡಿರುವ ಮೊದಲ ಭರವಸೆ' ಎಂದು ಪ್ರಣಾಳಿಕೆ ಬಿಡುಗಡೆ ಮಾಡಿದ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದರು.

English summary
Bihar Assembly Election 2020: BJP is selling fear of disease and death, RJD chief Tejashwi Yadav slams poll manifesto.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X