ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣಾ ಫಲಿತಾಂಶಕ್ಕೂ ಕೊರೊನಾ ವೈರಸ್ ಕಾಟ

|
Google Oneindia Kannada News

ಪಾಟ್ನಾ, ನವೆಂಬರ್ 10:ಮತ ಎಣಿಕೆ ಆರಂಭಿಕ ಹಂತದಲ್ಲಿ ಬಿಜೆಪಿ ಹಾಗೂ ಎನ್‌ಡಿಎ ಬಿಹಾರದಲ್ಲಿ ಮುನ್ನಡೆ ಸಾಧಿಸಿದ್ದರೂ ನಾಯಕರು ಎಚ್ಚರಿಕೆ ಹೆಜ್ಜೆ ಇಡುತ್ತಿದ್ದಾರೆ.

Recommended Video

BiharElectionResult : ತಮ್ಮನ ಪರವಾಗಿ ಟ್ವೀಟ್ ಮಾಡಿದ ತೇಜ್ | Oneindia Kannada

ಮಧ್ಯಪ್ರದೇಶ ಚುನಾವಣೆ ಫಲಿತಾಂಶ ಗಮನದಲ್ಲಿಟ್ಟುಕೊಂಡು ಯಾವುದೇ ಆತುರದ ಮಾತುಗಳನ್ನಾಡದೆ ಫಲಿತಾಂಶಕ್ಕೆ ಕಾಯುವಂತೆ ನಾಯಕರಿಗೆ ಬಿಜೆಪಿ ವರಿಷ್ಠರು ಸೂಚಿಸಿದ್ದಾರೆ.

Live Updates: ಬಿಹಾರದಲ್ಲಿ ಮಹಾಘಟಬಂಧನ್ ವಿರುದ್ಧ ಎನ್ ಡಿಎ ಮುನ್ನಡೆLive Updates: ಬಿಹಾರದಲ್ಲಿ ಮಹಾಘಟಬಂಧನ್ ವಿರುದ್ಧ ಎನ್ ಡಿಎ ಮುನ್ನಡೆ

ಇದಕ್ಕೆ ಕಾರಣವೂ ಇದೆ. ಸಾಮಾನ್ಯವಾಗಿ ವಿಧಾನಸಭಾ ಚುನಾವಣೆಗಳಲ್ಲಿ ಮಧ್ಯಾಹ್ನ 1 ಗಂಟೆ ವೇಳೆಗೆ ಫಲಿತಾಂಶದ ದಿಕ್ಕು ತಿಳಿಯುತ್ತಿತ್ತು, ಈಗ ಫಲಿತಾಂಶಕ್ಕೂ ಕೊರೊನಾ ಕಾಟ ಶುರುವಾಗಿದೆ.

Bihar Election Results: Why BJP Was Extremely Cautious

ಕೊವಿಡ್ 19 ಹಿನ್ನೆಲೆಯಲ್ಲಿ ಈ ಬಾರಿ ಬಿಹಾರದಲ್ಲಿ ಮತಗಟ್ಟೆಗಳನ್ನು 70723ರಿಂದ 1,06,615ಕ್ಕೆ ಏರಿಸಲಾಗಿತ್ತು. ಹೀಗಾಗಿ ಮತ ಎಣಿಕೆಯು 35 ಹಂತಗಳನ್ನು ತಲುಪುವ ಸಾಧ್ಯತೆಯ ಇದೆ ಎನ್ನಲಾಗಿದೆ.

ಹೀಗಾಗಿ ಮಧ್ಯಾಹ್ನದ ವೇಳೆಗೆ ಅರ್ಧಕ್ಕೂ ಹೆಚ್ಚು ಮತ ಎಣಿಕೆಯಾಗಬೇಕಿದ್ದರೂ ಈಗ ಶೇ.20-25ರಷ್ಟು ಮಾತ್ರ ಮತ ಎಣಿಕೆಯಾಗಿದೆ. ಮಧ್ಯಾಹ್ನ 3-4 ಗಂಟೆ ವೇಳೆಗೆ ಬಿಹಾರ ಚುನಾವಣೆಯ ಸ್ಪಷ್ಟ ಚಿತ್ರಣ ದೊರೆಯುವ ಸಾಧ್ಯತೆ ಇದೆ.

ಇನ್ನೊಂದೆಡೆ 243 ಕ್ಷೇತ್ರಗಳ ಪೈಕಿ 7 ವಿಧಾನಸಭಾ ಕ್ಷೇತ್ರಗಳಲ್ಲಿ ಮುನ್ನಡೆಯಲಿರುವ ಅಭ್ಯರ್ಥಿಗಳು ಕೇವಲ ಸಾವಿರ ಮತಕ್ಕೂ ಕಡಿಮೆ ಅಂತರದಲ್ಲಿ ಮುನ್ನಡೆ ಇರಲಿದೆ.

ಇದರಲ್ಲಿ ಬಿಜೆಪಿ ಎನ್‌ಡಿಎ ಪಾಲು 39 ಕ್ಷೇತ್ರಗಳದ್ದಾಗಿದೆ. ಹೀಗಾಗಿ ಫಲಿತಾಂಶದ ಬಗ್ಗೆ ಏನನ್ನೂ ಹೇಳುವಂತಿಲ್ಲ.

English summary
Bihar Election Results 2020: As leads from the counting of votes Bihar showed the ruling National Democratic Alliance (NDA) ahead and widening the gap with the opposition, the BJP held off on the victory celebrations that usually start when it crosses the majority mark in leads, or when it is at least in striking distance of power.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X