ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಹಾರದಲ್ಲಿ ಆರಂಭಿಕ ಟ್ರೆಂಡ್ ನಂತೆ ತೇಜಸ್ವಿ ಮುಂದೆ, ನಿತೀಶ್ ಹಿಂದೆ

|
Google Oneindia Kannada News

ಪಾಟ್ನಾ, ನ.10: ಕೊರೊನಾವೈರಸ್ ಸೋಂಕು ಹರಡುವಿಕೆ ಆತಂಕದ ನಡುವೆಯೂ ಬಿಹಾರದಲ್ಲಿ 243 ವಿಧಾನಸಭಾ ಸ್ಥಾನಗಳಿಗಾಗಿ ಮೂರು ಹಂತಗಳಲ್ಲಿ ಚುನಾವಣೆ ನಡೆಸಲಾಗಿದ್ದು, ನವೆಂಬರ್ 10ರಂದು ಅಂತಿಮ ಫಲಿತಾಂಶ ಹೊರಬರಲಿದೆ. ಬಿಹಾರದ 38 ಜಿಲ್ಲೆಗಳಲ್ಲಿ 55 ಮತ ಎಣಿಕೆ ಕೇಂದ್ರಗಳಲ್ಲಿ ಮತ ಎಣಿಕೆ ಕಾರ್ಯ ಆರಂಭವಾಗಿದೆ. ಆರಂಭಿಕ ಟ್ರೆಂಡ್ ನಂತೆ ನಿತೀಶ್ ಕುಮಾರ್ ಬಣ ಹಿನ್ನಡೆ ಅನುಭವಿಸಿದ್ದು, ತೇಜಸ್ವಿ ಅವರ ಮಹಾಘಟಬಂಧನ್ ಮುನ್ನಡೆ ಸಾಧಿಸಿದೆ.

ಇವಿಎಂ ಮತ ಎಣಿಕೆ ಸ್ವಲ್ಪ ವಿಳಂಬವಾಗಲಿದ್ದು, ಕೊವಿಡ್ 19 ಸುರಕ್ಷತೆಗೆ ಅನುಸಾರವಾಗಿ ನಿಗಾವಹಿಸಲಾಗಿದೆ. 9 ಗಂಟೆ ನಂತರ ಎಲೆಕ್ಟ್ರಾನಿಕ್ ಮತ ಯಂತ್ರದ ಎಣಿಕೆ ಆರಂಭವಾಗಲಿದೆ, ಕೆಲವೆಡೆ ವಿಳಂಬವಾಗಬಹುದು ಎಂದು ಆಯೋಗ ತಿಳಿಸಿದೆ

''ಬಿಹಾರದ ಭಾವಿ ಮುಖ್ಯಮಂತ್ರಿ ತೇಜಸ್ವಿಗೆ ಶುಭವಾಗಲಿ'' ಪೋಸ್ಟರ್ ಪ್ರಕಟ ''ಬಿಹಾರದ ಭಾವಿ ಮುಖ್ಯಮಂತ್ರಿ ತೇಜಸ್ವಿಗೆ ಶುಭವಾಗಲಿ'' ಪೋಸ್ಟರ್ ಪ್ರಕಟ

ಸಮಯ 8.30ರಂತೆ ಅಂಚೆ ಎಣಿಕೆಯಂತೆ ಟ್ರೆಂಡ್ ಮುನ್ನಡೆ
ಎನ್ಡಿಎ 27, ಮಹಾಘಟಬಂಧನ್ 35
ಬಿಜೆಪಿ 35, ಆರ್ ಜೆಡಿ 44, ಜೆಡಿಯು 18, ಎಲ್ ಜೆಪಿ 2, ಕಾಂಗ್ರೆಸ್ 18, ಸಿಪಿಐ (ಎಂಎಲ್) 7

Bihar Election results: Early trends show Tejashwi- RJD leading

ಪ್ರಮುಖ ಅಭ್ಯರ್ಥಿಗಳಾದ ತೇಜಸ್ವಿ ಯಾದವ್ ಹಾಗೂ ಅಣ್ಣ ತೇಜ್ ಪ್ರತಾಪ್ ಇಬ್ಬರು ಮುನ್ನಡೆ ಕಾಯ್ದುಕೊಂಡಿದ್ದಾರೆ. ತೇಜಸ್ವಿ ಯಾದವ್ ವೈಶಾಲಿ ಜಿಲ್ಲೆಯ ರಘೋ ಪುರ್ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಅವರ ಅಣ್ಣ ತೇಜ್ ಪ್ರತಾಪ್ ಸಮಸ್ಟಿಪುರ್ ಜಿಲ್ಲೆಯ ಹಸನ್ ಪುರ್ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ.

ಎಕ್ಸಿಟ್ ಪೋಲ್ ಗಳ ಸಮೀಕ್ಷೆಗಳ ಸಮೀಕ್ಷೆಯಲ್ಲಿ ತೇಜಸ್ವಿ ಬಣಕ್ಕೆ ಗೆಲುವು ಸಾಧಿಸಲಿದ್ದು, ಆರ್ ಜೆ ಡಿ-ಕಾಂಗ್ರೆಸ್ ಬಣ 133 ಸ್ಥಾನ ಪಡೆಯಲಿದ್ದು, ಎನ್ಡಿಎ 100 ಸ್ಥಾನ ಹಾಗೂ ಇತರೆ 11 ಪಡೆಯಲಿದೆ ಎಂದು ಫಲಿತಾಂಶ ಬಂದಿದೆ.

English summary
Bihar Election results: Early trends show the RJD-led Mahagathbandhan is leading in over 35 seats while the Nitish Kumar-led NDA is behind with leads in about 18 seats.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X