ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಹಾರ: ಎನ್‌ಡಿಎ ಮುನ್ನಡೆ, ನಿತೀಶ್ ಕುಮಾರ್‌ಗೆ ಅಮಿತ್‌ ಶಾ ಕರೆ

|
Google Oneindia Kannada News

ಪಾಟ್ನಾ, ನವೆಂಬರ್ 10: ಬಿಹಾರ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ನಡೆಯುತ್ತಿದ್ದು, ಎನ್‌ಡಿಎ ಮುನ್ನಡೆ ಕಾಯ್ದುಕೊಂಡಿರುವ ಕಾರಣ ಅಮಿತ್ ಶಾ ನಿತೀಶ್ ಕುಮಾರ್‌ಗೆ ಕರೆ ಮಾಡಿದ್ದಾರೆ.

Recommended Video

Bihar Election Results 2020 : Modiಯ ಗೆಲುವು ಮೋಸದ ಗೆಲುವು!! | EVM Hack | Oneindia Kannada

ಮೂಲಗಳ ಮಾಹಿತಿ ಪ್ರಕಾರ ಚುನಾವಣಾ ಫಲಿತಾಂಶದ ಕುರಿತು ಅವರಿಬ್ಬರು ಚರ್ಚೆ ನಡೆಸಿದ್ದಾರೆ. ಆದರೆ ಏನೇನು ಚರ್ಚೆ ನಡೆದಿದೆ ಎನ್ನುವ ಕುರಿತು ಮಾಹಿತಿ ಲಭ್ಯವಾಗಿಲ್ಲ.

ಬಿಹಾರ: ಮೋದಿ ಪ್ರಚಾರ ನಡೆಸಿದ್ದ ಕಡೆಗಳಲ್ಲಿ ಎನ್‌ಡಿಎಗೆ ಭಾರಿ ಮುನ್ನಡೆಬಿಹಾರ: ಮೋದಿ ಪ್ರಚಾರ ನಡೆಸಿದ್ದ ಕಡೆಗಳಲ್ಲಿ ಎನ್‌ಡಿಎಗೆ ಭಾರಿ ಮುನ್ನಡೆ

ಎನ್‌ಡಿಎ ಗೆಲುವಿನ ನಂತರ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮುವ ಎನ್‌ಡಿಎ ನಿತೀಶ್ ಕುಮಾರ್ ಅವರನ್ನೇ ಮುಖ್ಯಮಂತ್ರಿಯನ್ನಾಗಿ ಮಾಡುಲಾಗುತ್ತದೆ ಎನ್ನುವ ಯಾವ ಭರವಸೆಯೂ ಇದ್ದಂತೆ ಕಾಣುತ್ತಿಲ್ಲ.

 Bihar Election Results :Amit Shah, Nitish Kumar Talk As NDA Keeps Lead In Bihar

ಚುನಾವಣೆಗೂ ಮುನ್ನ ಒಂದೊಮ್ಮೆ ಚುನಾವಣೆಯಲ್ಲಿ ಬಹುಮತ ಪಡೆದರೆ ನಿತೀಶ್ ಕುಮಾರ್ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ ಎಂದು ಬಿಜೆಪಿ ಹೇಳಿತ್ತು. ನಾವು ಕಡಿಮೆ ಅಥವಾ ಹೆಚ್ಚು ಮತಗಳನ್ನು ಪಡೆಯಲಿ ಏನೇ ಇರಲಿ ನಿತೀಶ್ ಕುಮಾರ್ ಮುಂದುವರೆಯುತ್ತಾರೆ ಎಂದು ಬಿಜೆಪಿ ಹೇಳಿಕೆ ನೀಡಿತ್ತು.

ಅಮಿತ್ ಶಾ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಲಿಲ್ಲ, ಆದರೆ ಪ್ರಧಾನಿ ನರೇಂದ್ರಮೋದಿ ಚುನಾವಣಾ ಪ್ರಚಾರ ನಡೆಸಿದ್ದರು. ಪ್ರಧಾನಿ ನರೇಂದ್ರ ಮೋದಿಯವರು ಪ್ರಚಾರ ನಡೆಸಿದ್ದ ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆಯಲ್ಲಿದ್ದು, ಉತ್ತಮ ಫಲಿತಾಂಶ ಬರುವ ನಿರೀಕ್ಷೆ ಇದೆ.

Live Updates: ಬಿಹಾರದಲ್ಲಿ ಮಹಾಘಟಬಂಧನ್ ವಿರುದ್ಧ ಎನ್ ಡಿಎ ಮುನ್ನಡೆLive Updates: ಬಿಹಾರದಲ್ಲಿ ಮಹಾಘಟಬಂಧನ್ ವಿರುದ್ಧ ಎನ್ ಡಿಎ ಮುನ್ನಡೆ

ನರೇಂದ್ರ ಮೋದಿಯವರು ಸಹಾರಾ, ಗಯಾ, ಭಾಗಲ್‌ಪುರ್, ದರ್ಭಾಂಗಾ, ಮುಜಾಫರ್‌ಪುರ್, ಪಾಟ್ನಾ, ಛಾಪ್ರಾ, ಈಸ್ಟ್ ಚಂಪಾರಣ್, ಸಮಸ್ತಿಪುರ್, ವೆಸ್ಟ್ ಚಂಪಾರಣ್, ಫಾರ್ಬೆಸ್‌ಗಂಜ್‌ನಲ್ಲಿ ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿದ್ದಾರೆ.

ದರ್ಭಾಂಗಾದಲ್ಲಿ 10 ಮತಗಳಲ್ಲಿ 9 ಮತಗಳನ್ನು ಎನ್‌ಡಿಎ ಪಡೆದಿದೆ ಎಂದು ಕೇಂದ್ರ ಚುನಾವಣಾ ಆಯೋಗ ಹೇಳಿದೆ.

English summary
Bihar Election Results 2020: As the National Democratic Alliance (NDA) kept up a slim lead in the counting of votes in Bihar, Chief Minister Nitish Kumar received a call from Home Minister Amit Shah this evening.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X