ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರ್‌ಜೆಡಿ ಕೈ ಹಿಡಿಯದ 10 ಲಕ್ಷ ಉದ್ಯೋಗದ ಭರವಸೆ, ಆಡಳಿತ ವಿರೋಧಿ ಅಲೆ

|
Google Oneindia Kannada News

ಪಟ್ನಾ, ನವೆಂಬರ್ 10: ನಿತೀಶ್ ಕುಮಾರ್ ಅವರ 15 ವರ್ಷದ ಆಡಳಿತದ ವಿರುದ್ಧ ಸಹಜವಾಗಿಯೇ ರೂಪುಗೊಂಡಿರುವ ಅಸಮಾಧಾನವನ್ನು ಬಳಸಿಕೊಳ್ಳುವುದರ ಜತೆಗೆ, 10 ಲಕ್ಷ ಉದ್ಯೋಗದ ಭರವಸೆಯನ್ನು ನೀಡುವ ಮೂಲಕ ಅಧಿಕಾರಕ್ಕೆ ಏರುವ ಕನಸು ಕಂಡಿರುವ ಮಹಾಘಟಬಂಧನವು ಆರಂಭಿಕ ಸುತ್ತಿನ ಮತ ಎಣಿಕೆಗಳಲ್ಲಿ ತೀವ್ರ ಹಿನ್ನಡೆ ಅನುಭವಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ.

Recommended Video

RR ನಗರದಲ್ಲಿ ನಾವು ಗೆಲ್ಲೋಕ್ಕೆ chance ಇಲ್ಲಾ | Oneindia Kannada

ಆರ್‌ಜೆಡಿಯ ಹೀನಾಯ ಪ್ರದರ್ಶನವು ಅದಕ್ಕೆ ತೀವ್ರ ಹಿನ್ನಡೆಯುಂಟುಮಾಡಿದೆ. ಮೊದಲ ಹಂತದ ಚುನಾವಣೆ ನಡೆದ ಭೋಜಪುರ ಪ್ರದೇಶದ ಸಿವಾನ್, ಗೋಪಾಲಗುಂಜ್ ಮತ್ತು ಮಹಾರಾಜ್‌ ಗುಂಜ್ ನಂತರ ತನ್ನ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ಮಾತ್ರವಲ್ಲದೆ ಆರ್‌ಜೆಡಿ ಉತ್ತಮ ಪ್ರದರ್ಶನ ನೀಡುವ ಅಗತ್ಯವಿತ್ತು. ಗ್ರಾಮೀಣ ಭಾಗಗಳಲ್ಲಿ ಕನಿಷ್ಠ ಶೇ 60ರಷ್ಟು ಮತಗಳ ಪ್ರಮಾಣದೊಂದಿಗೆ ತೇಜಸ್ವಿ ಯಾದವ್ ನೇತೃತ್ವದ ಪಕ್ಷ ಮುನ್ನಡೆ ಸಾಧಿಸಿದ್ದರೆ ಅದಕ್ಕೆ ಅಧಿಕಾರಕ್ಕೆ ಏರುವ ಅವಕಾಶವಿದೆ.

Live Updates: ಬಿಹಾರದಲ್ಲಿ ಮಹಾಘಟಬಂಧನ್ ವಿರುದ್ಧ ಎನ್ ಡಿಎ ಮುನ್ನಡೆLive Updates: ಬಿಹಾರದಲ್ಲಿ ಮಹಾಘಟಬಂಧನ್ ವಿರುದ್ಧ ಎನ್ ಡಿಎ ಮುನ್ನಡೆ

144 ಸೀಟುಗಳಲ್ಲಿ ಸ್ಪರ್ಧಿಸಿರುವ ಆರ್‌ಜೆಡಿ 80-90 ಸೀಟುಗಳನ್ನು ಪಡೆದರೆ 29 ಸೀಟುಗಳಲ್ಲಿ ಸ್ಪರ್ಧಿಸಿರುವ ಎಡಪಕ್ಷಗಳು ಮತ್ತು 70 ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ಕಾಂಗ್ರೆಸ್ ಜತೆಗೂಡಿ ಸರ್ಕಾರ ರಚಿಸಲು ಸಾಧ್ಯವಾಗಲಿದೆ. ಈ ಮೂರೂ ಪಕ್ಷಗಳು ನಿರೀಕ್ಷಿತ ಫಲಿತಾಂಶ ಪಡೆದುಕೊಂಡರೆ ಮ್ಯಾಜಿಕ್ ಸಂಖ್ಯೆಯನ್ನು ಕ್ರಮಿಸಬಹುದು.

 Bihar Election Results 2020: Why RJDs Show Is Poor Despite Assuring 10 Lakh Jobs

ಜೆಡಿಯು ಅಧಿಕಾರ ವಿರೋಧಿ ಅಲೆ ಎದುರಿಸುತ್ತಿರುವಾಗ ಮತ್ತು ಕಾಂಗ್ರೆಸ್ ಪ್ರಮುಖ ಪ್ರಾದೇಶಿಕ ಪ್ರಭಾವ ಹೊಂದಿರದ ಸಂದರ್ಭದಲ್ಲಿ ಇಲ್ಲಿನ ಹಣಾಹಣಿಯು ನೇರವಾಗಿ ಆರ್‌ಜೆಡಿ ಮತ್ತು ಬಿಜೆಪಿ ನಡುವೆ ಇದೆ. ಈ ಆಸಕ್ತಿಕ ಸ್ಪರ್ಧೆಯಲ್ಲಿ ಇದುವರೆಗಿನ ಟ್ರೆಂಡ್ ಪ್ರಕಾರ ಆರ್‌ಜೆಡಿಗಿಂತಲೂ ಬಿಜೆಪಿ ಉತ್ತಮ ಸರಾಸರಿಯ ಮುನ್ನಡೆ ಪಡೆದುಕೊಂಡಿದೆ.

ಉದಾಹರಣೆಗೆ ಭೋಜ್‌ಪುರ ಪ್ರದೇಶದಲ್ಲಿ 46ರಲ್ಲಿ ಬಿಜೆಪಿ 12ರಲ್ಲಿ ಮುನ್ನಡೆ ಪಡೆದಿದ್ದರೆ, ಆರ್‌ಜೆಡಿ 16 ಕ್ಷೇತ್ರಗಳಲ್ಲಿ ಮುಂದಿದೆ. ಇದು ಸಿಪಿಎಂ ಪ್ರಭಾವಳಿ ಕೂಡ ಹೆಚ್ಚಿರುವ ಪ್ರದೇಶ. ಗ್ರಾಮೀಣ ಭಾಗಗಳಲ್ಲಿನ 213 ಕ್ಷೇತ್ರಗಳಲ್ಲಿ ಬಿಜೆಪಿ 54ರಲ್ಲಿ ಮುಂದಿದ್ದರೆ, ಆರ್‌ಜೆಡಿ 53 ಕಡೆ ಮುನ್ನಡೆ ಸಾಧಿಸಿದೆ. ಉಪ ನಗರ ಪ್ರದೇಶಗಳಲ್ಲಿ ಬಿಜೆಪಿ 11 ಸೀಟುಗಳಲ್ಲಿ ಮತ್ತು ಆರ್‌ಜೆಡಿ ಐದು ಸೀಟುಗಳಲ್ಲಿ ಮುಂದಿವೆ. ಇದೇ ರೀತಿ ಪರಿಶಿಷ್ಟ ಮೀಸಲು ಕ್ಷೇತ್ರಗಳಲ್ಲಿ ಬಿಜೆಪಿ 11ರಲ್ಲಿ ಮತ್ತು ಆರ್‌ಜೆಡಿ 9ರಲ್ಲಿ ಮುಂದಿದೆ.

ಮುಸ್ಲಿಮರು ಅಧಿಕ ಸಂಖ್ಯೆಯಲ್ಲಿರುವ ಸೀಮಾಂಚಲದಲ್ಲಿ ಕೂಡ ಬಿಜೆಪಿ ಗಮನಾರ್ಹ ಸಾಧನೆ ಮಾಡಿದೆ. 41 ಸೀಟುಗಳಲ್ಲಿ ಬಿಜೆಪಿ, 32ರಲ್ಲಿ ಜೆಡಿಯು ಮತ್ತು 19 ಕ್ಷೇತ್ರಗಳಲ್ಲಿ ಆರ್‌ಜೆಡಿ ಮುನ್ನಡೆ ಸಾಧಿಸಿದೆ. ಸಾಮಾನ್ಯ ವರ್ಗದ ಸೀಟುಗಳಲ್ಲಿ ಬಿಜೆಪಿ 60ರಲ್ಲಿ ಮುಂದಿದ್ದರೆ, ಆರ್‌ಜೆಡಿ 50 ಮತ್ತು ಜೆಡಿಯು 42ರಲ್ಲಿ ಮುನ್ನಡೆದಿದೆ. ಒಟ್ಟಾರೆ 98 ಸೀಟುಗಳಲ್ಲಿ ಜೆಡಿಯು ಮತ್ತು ಬಿಜೆಪಿ 44ರಲ್ಲಿ ಮುನ್ನಡೆ ಪಡೆದಿದ್ದರೆ, ಆರ್‌ಜೆಡಿ-ಕಾಂಗ್ರೆಸ್ 39ರಲ್ಲಿ ಮಾತ್ರ ಮುನ್ನಡೆ ಸಾಧಿಸಿವೆ. ಈ ವಿಭಾಗಗಳಲ್ಲಿ ಮಹಿಳಾ ಮತದಾರರ ಅನುಪಾತ ಹೆಚ್ಚಿದೆ. ನಿರುದ್ಯೋಗ ಮತ್ತು ಬಡತನವು ಎನ್‌ಡಿಎ ವಿರುದ್ಧ ಮಹಿಳೆಯರು ಸಿಡಿದೇಳಲು ಕಾರಣವಾಗಲಿದೆ ಎಂದು ಭಾವಿಸಲಾಗಿತ್ತು. ಆದರೆ ಎನ್‌ಡಿಎ ಬಗ್ಗೆ ಜನರು ಒಲವು ಪ್ರದರ್ಶಿಸಿದ್ದಾರೆ.

English summary
Bihar Assembly Election Results 2020 Updates in Kannada: RJD is trailng in many seats than BJP and JDU despite assuring 10 lakh jobs and anti incumbency against Nitish Kumar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X