ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇವಲ 12 ಮತಗಳ ಅಂತರದಿಂದ ಗೆದ್ದ ನಿತೀಶ್ ಕುಮಾರ್ ಪಕ್ಷ

|
Google Oneindia Kannada News

ಪಟ್ನಾ, ನವೆಂಬರ್ 11: ಬಿಹಾರ ವಿಧಾನಸಭೆ ಚುನಾವಣೆಯ ಅಂತಿಮ ಫಲಿತಾಂಶ ಹೊರಬಿದ್ದಿದೆ. ಆಡಳಿತಾರೂಢ ಎನ್‌ಡಿಎ ಮತ್ತೆ ಅಧಿಕಾರ ಹಿಡಿಯಲು ಸಿದ್ಧತೆ ನಡೆಸಿದೆ. ಈ ಬಾರಿಯ ಚುನಾವಣೆ ಅತ್ಯಂತ ನಿಕಟ ಪೈಪೋಟಿಗೆ ಸಾಕ್ಷಿಯಾಗಿದೆ. ಹೆಚ್ಚಿನ ಅಭ್ಯರ್ಥಿಗಳು ಕಡಿಮೆ ಅಂತರದ ಮತಗಳಿಂದ ಗೆಲುವು ಕಂಡು ನಿಟ್ಟುಸಿರುಬಿಟ್ಟರೆ, ತೀವ್ರ ಪೈಪೋಟಿ ನೀಡಿ ಸೋಲು ಕಂಡವರು ನಿರಾಶರಾಗಿದ್ದಾರೆ.

ಹಿಲ್ಸಾ ವಿಧಾನಸಭೆ ಕ್ಷೇತ್ರದಿಂದ ಆಡಳಿತಾರೂಢ ಜೆಡಿಯು ಪಕ್ಷದ ಅಭ್ಯರ್ಥಿ ಕೇವಲ 12 ಮತಗಳಿಂದ ಜಯಗಳಿಸಿದ್ದಾರೆ. ಚುನಾವಣಾ ಆಯೋಗದ ವೆಬ್‌ಸೈಟ್‌ನ ಇದುವರೆಗಿನ ಅಂಕಿ ಅಂಶಗಳ ಪ್ರಕಾರ ಬಿಹಾರ ಚುನಾವಣೆಯಲ್ಲಿ ಇದು ಅತ್ಯಂತ ಕಡಿಮೆ ಅಂತರದ ಫಲಿತಾಂಶವಾಗಿದೆ.

ಬಿಹಾರ ಸಿಎಂ ಕುರ್ಚಿ ಮೇಲೆ ಯಾರ ಹೆಸರು: ಏನ್ ಆಂತಾರೆ ನಾಯಕರು?ಬಿಹಾರ ಸಿಎಂ ಕುರ್ಚಿ ಮೇಲೆ ಯಾರ ಹೆಸರು: ಏನ್ ಆಂತಾರೆ ನಾಯಕರು?

ಜೆಡಿಯುದ ಕೃಷ್ಣಮುರಾರಿ ಶರಣ್ ಅಲಿಯಾಸ್ ಪ್ರೇಮ್ ಮುಖಿಯಾ ಅವರು 61,848 ಮತಗಳನ್ನು ಪಡೆದರೆ, ಅವರ ಎದುರಾಳಿ ಆರ್‌ಜೆಡಿಯ ಅತ್ರಿ ಮುನಿ ಅಲಿಯಾಸ್ ಶಕ್ತಿ ಸಿಂಗ್ 61,836 ಮತಗಳನ್ನು ಪಡೆದು ಗೆಲುವಿನ ಸಮೀಪದಲ್ಲಿ ಎಡವಿದ್ದಾರೆ.

 Bihar Election Results 2020: Nitish Kumars JDU Wins Hilsa Seat By Just 12 Votes

ಹಿಲ್ಸಾ ಕ್ಷೇತ್ರದ ಫಲಿತಾಂಶವನ್ನು ಮಂಗಳವಾರ ತಡರಾತ್ರಿ ಚುನಾವಣಾ ಆಯೋಗ ಘೋಷಿಸಿದೆ. ಹಿಲ್ಸಾ ಕ್ಷೇತ್ರದ ಕಾಲಂನಲ್ಲಿ 'ಫಲಿತಾಂಶ ಘೋಷಣೆಯಾಗಿದೆ' ಎಂದು ನಮೂದಿಸಿದ್ದ ಆಯೋಗ, ಗೆಲುವಿನ ಅಂತರವನ್ನು 12 ಎಂದು ಪ್ರಕಟಿಸಿದೆ. ರಾತ್ರಿ 10 ಗಂಟೆಯವರೆಗೂ ಹಿಲ್ಸಾ ಕ್ಷೇತ್ರದಲ್ಲಿ ಮತ ಎಣಿಕೆ ಪ್ರಗತಿಯಲ್ಲಿದೆ ಎಂದು ಆಯೋಗದ ವೆಬ್‌ಸೈಟ್ ತೋರಿಸುತ್ತಿತ್ತು.

ಪ್ರಧಾನಿ OK, ನಿತೀಶ್ Not OK: ಚಿರಾಗ್ ಪಾಸ್ವಾನ್ ಹೊಸ ವರಸೆ!ಪ್ರಧಾನಿ OK, ನಿತೀಶ್ Not OK: ಚಿರಾಗ್ ಪಾಸ್ವಾನ್ ಹೊಸ ವರಸೆ!

ಮಂಗಳವಾರ ಸಂಜೆಯಿಂದಲೂ ಆರ್‌ಜೆಡಿ ಮತ ಎಣಿಕೆ ಪ್ರಕ್ರಿಯೆಲ್ಲಿ ವಂಚನೆ ನಡೆದಿದೆ ಎಂದು ಆರೋಪಿಸಿತ್ತು. ಎನ್‌ಡಿಎ ಸರ್ಕಾರ ನಾಯಕರು ತಮ್ಮ ಪ್ರಭಾವ ಬಳಸಿ ಆಯೋಗದ ಅಧಿಕಾರಿಗಳು ಮತ್ತು ಸ್ಥಳೀಯ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಆರೋಪ ಮಾಡಿತ್ತು.

ಶಕ್ತಿ ಸಿಂಗ್ ಅವರು 547 ಮತಗಳಿಂದ ಗೆದ್ದಿದ್ದಾರೆ ಎಂದು ರಿಟರ್ನಿಂಗ್ ಆಫೀಸರ್ ಘೋಷಿಸಿದ್ದರು. ಆದರೆ ಗೆಲುವಿನ ಪ್ರಮಾಣ ಪತ್ರ ನೀಡದೆ ಕೆಲವು ಸಮಯ ಕಾಯುವಂತೆ ಅವರಿಗೆ ತಿಳಿಸಲಾಗಿತ್ತು. ಆದರೆ ರಿಟರ್ನಿಂಗ್ ಆಫೀಸರ್‌ಗೆ ಮುಖ್ಯಮಂತ್ರಿ ಕಚೇರಿಯಿಂದ ಫೋನ್ ಬಂದಿತ್ತು. ನಂತರ ದಿಢೀರನೆ ಹೇಳಿಕೆ ಬದಲಿಸಿದ ಅವರು, ಅಂಚೆಮತಗಳನ್ನು ರದ್ದುಗೊಳಿಸಿದ ಕಾರಣ ನಮ್ಮ ಅಭ್ಯರ್ಥಿ ಸೋತಿದ್ದಾರೆ ಎಂದು ತಿಳಿಸಿದ್ದರು ಎಂದು ಆರ್‌ಜೆಡಿ ಹೇಳಿದೆ.

Recommended Video

Bihar Election : ಊಹೆ ಮಾಡಿರಲಿಲ್ಲ ಎಂದ ತೇಜಸ್ವಿ!! | Oneindia Kannada

ಚುನಾವಣಾ ಆಯೋಗದ ಮಾಹಿತಿ ಪ್ರಕಾರ ಜೆಡಿಯು ಅಭ್ಯರ್ಥಿ ಕೃಷ್ಣಮುರಾರಿ ಅವರು 232 ಅಂಚೆ ಮತಗಳನ್ನು ಪಡೆದಿದ್ದರೆ, ಆರ್‌ಜೆಡಿಯ ಶಕ್ತಿ ಸಿಂಗ್ ಯಾದವ್ 233 ಮತಗಳನ್ನು ಪಡೆದಿದ್ದರು.

English summary
Bihar Assembly Election Results 2020 Updates in Kannada: Nitish Kumar's JDU party candidate Krishnamurari Sharan has won the Hilsa assembly seat just by 12 votes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X