ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಲ್ಪಸಂಖ್ಯಾತರ ಪ್ರಾಬಲ್ಯ ಇರುವ ಸೀಮಾಂಚಲದಲ್ಲಿಯೂ ಎನ್‌ಡಿಎ ಮುನ್ನಡೆ

|
Google Oneindia Kannada News

ಪಟ್ನಾ, ನವೆಂಬರ್ 10: ಬಿಹಾರ ವಿಧಾನಸಭೆ ಚುನಾವಣೆಯ ಮತ ಎಣಿಕೆ ಮಂಗಳವಾರ ನಡೆಯುತ್ತಿದ್ದು, ಎಕ್ಸಿಟ್ ಪೋಲ್ ಸಮೀಕ್ಷೆಗಳಿಗೆ ವಿರುದ್ಧವಾಗಿ ಎನ್‌ಡಿಎ ಮುನ್ನಡೆ ಪಡೆದುಕೊಂಡಿದೆ. ಅದರಲ್ಲಿಯೂ ಬಿಜೆಪಿಗೆ ಸೈದ್ಧಾಂತಿಕ ವಿರೋಧ ಹೆಚ್ಚಿರುವ ಅಲ್ಪಸಂಖ್ಯಾತರೇ ಅಧಿಕ ಸಂಖ್ಯೆಯಲ್ಲಿ ಇರುವ ಸೀಮಾಂಚಲ ಪ್ರದೇಶಗಳಲ್ಲಿಯೂ ಎನ್‌ಡಿಎ ಮುನ್ನಡೆ ಸಾಧಿಸಿರುವುದು ಅಚ್ಚರಿ ಮೂಡಿಸಿದೆ. ಇಲ್ಲಿ ತಮ್ಮ ಅಭ್ಯರ್ಥಿಗಳನ್ನು ಇಳಿಸುವ ಮೂಲಕ ಎಐಎಂಐಎಂನ ಅಸಾದುದ್ದೀನ್ ಓವೈಸಿ ಎನ್‌ಡಿಎ ಮುನ್ನಡೆಗೆ ನೆರವಾಗಿದ್ದಾರೆ.

Recommended Video

ಎಲ್ಲಾಕಡೆ ಅರಳಿದ ಕಮಲ!! | BJP | Oneindia Kannada

ಸೀಮಾಂಚಲ ಪ್ರದೇಶದ ನಾಲ್ಕು ಹಾಗೂ ಕೋಸಿಯ ಮೂರು ಜಿಲ್ಲೆಗಳಲ್ಲಿನ 37 ಸೀಟುಗಳಲ್ಲಿ ಆಡಳಿತಾರೂಢ ಎನ್‌ಡಿಎ ಎದುರಾಳಿ ಮಹಾಘಟಬಂಧನಕ್ಕಿಂತ ಕೊಂಚ ಮುನ್ನಡೆ ಸಾಧಿಸಿದೆ. ಕೋಸಿಯಲ್ಲಿ ಜೆಡಿಯು ಮುನ್ನಡೆ ಪಡೆದಿದ್ದರೆ, ಸೀಮಾಂಚಲದಲ್ಲಿ ಬಿಜೆಪಿ ಮುಂಚೂಣಿಯಲ್ಲಿದೆ.

ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶ: ಇಲ್ಲಿದೆ ಕ್ಷಣಕ್ಷಣದ ಮಾಹಿತಿಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶ: ಇಲ್ಲಿದೆ ಕ್ಷಣಕ್ಷಣದ ಮಾಹಿತಿ

ಕೋಸಿಯ ಸುಪೌಲ್, ಸಹರ್ಸಾ ಮತ್ತು ಮಾಧೇಪುರ ಜಿಲ್ಲೆಗಳಲ್ಲಿ 13 ವಿಧಾನಸಭೆ ಕ್ಷೇತ್ರಗಳಿದ್ದರೆ, ಸೀಮಾಂಚಲದ ಪೂರ್ನಿಯಾ, ಕಟಿಹಾರ್, ಮಾಧೇಪುರ ಮತ್ತು ಅರಾರಿಯಾ ಜಿಲ್ಲೆಗಳಲ್ಲಿ 24 ವಿಧಾನಸಭೆ ಕ್ಷೇತ್ರಗಳಿವೆ.

Bihar Election Results 2020: NDA Ahead In Minority Dominated Seemanchal

ಮಾಧೇಪುರದಲ್ಲಿ ನಿತೀಶ್ ಕುಮಾರ್ ಅವರ ಜೆಡಿಯು ಮಾಧೇಪುರ, ಸಿಂಘೇಶ್ವರ್ ಮತ್ತು ಸುಪೌಲ್‌ನಲ್ಲಿ ಮುನ್ನಡೆ ಸಾಧಿಸಿದೆ. ಸೀಮಾಂಚಲದಲ್ಲಿ ಧಂದಾಹ ಮತ್ತು ರುಪೌಲಿ ಕ್ಷೇತ್ರಗಳಲ್ಲಿ ಜೆಡಿಯು ಮುನ್ನಡೆ ಪಡೆದುಕೊಂಡಿದೆ. ಪೂರ್ನಿಯಾ, ಪ್ರಾಣ್ಪುರ, ಕಟಿಹಾರ್ ಮತ್ತು ಸಿಕ್ತಿಯಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ.

ಆರ್. ಆರ್. ನಗರ, ಶಿರಾ ಉಪ ಚುನಾವಣೆ ಫಲಿತಾಂಶಆರ್. ಆರ್. ನಗರ, ಶಿರಾ ಉಪ ಚುನಾವಣೆ ಫಲಿತಾಂಶ

ಕೋಸಿಯಲ್ಲಿ ಜೆಡಿಯು 10 ಅಭ್ಯರ್ಥಿಗಳನ್ನು, ಬಿಜೆಪಿ ಎರಡು ಮತ್ತು ವಿಐಪಿ ಒಂದು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು. ಸೀಮಾಂಚಲದಲ್ಲಿ ಜೆಡಿಯು 11, ಬಿಜೆಪಿ 10, ವಿಐಪಿ 2 ಮತ್ತು ಎಚ್‌ಎಎಂ-ಎಸ್ ಒಂದು ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದವು.

ಅಲ್ಪಸಂಖ್ಯಾತ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿರುವ ಇಲ್ಲಿ ಆರ್‌ಜೆಡಿ, ಕಾಂಗ್ರೆಸ್ ಹಾಗೂ ಎಡಪಕ್ಷಗಳನ್ನು ಒಳಗೊಂಡ ಮಹಾಘಟಬಂಧನಕ್ಕೆ ಹೆಚ್ಚಿನ ಅವಕಾಶವಿತ್ತು. ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ 14 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವುದು ಮಹಾಘಟಬಂಧನಕ್ಕೆ ಹಿನ್ನಡೆಯುಂಟುಮಾಡಿದೆ. ಅಲ್ಪಸಂಖ್ಯಾತ ಮತಗಳು ಹರಿದುಹಂಚಿಹೋಗಿರುವುದರಿಂದ ಎನ್‌ಡಿಎ ಮೈತ್ರಿಕೂಟಕ್ಕೆ ಇಲ್ಲಿ ಲಾಭ ಸಿಕ್ಕಿದೆ.

English summary
Bihar Assembly Election Results 2020 Updates in Kannada: JDU and BJP's NDA is leading in minority dominated Seemanchal and Kosi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X