ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಹಾರದಲ್ಲಿ ಮಹಾಘಟಬಂಧನ್ ಸರ್ಕಾರ ರಚನೆ ಖಚಿತ: ಆರ್‌ಜೆಡಿ

|
Google Oneindia Kannada News

ಪಾಟ್ನಾ, ನವೆಂಬರ್ 10: ಬಿಹಾರ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗುತ್ತಿದ್ದು, ಈಗಾಗಲೇ ಶೇ.80 ರಷ್ಟು ಮತಗಳ ಎಣಿಕೆ ಪ್ರಕ್ರಿಯೆ ಮುಗಿದಿದೆ. ಎನ್‌ಡಿಎ ಹಾಗೂ ಮಹಾಘಟಬಂಧನ್ ನಡುವೆ ತೀವ್ರ ಪೈಪೋಟಿಯು ನಡೆಯುತ್ತಿದೆ.

Recommended Video

Bihar Election : ಊಹೆ ಮಾಡಿರಲಿಲ್ಲ ಎಂದ ತೇಜಸ್ವಿ!! | Oneindia Kannada

ಬಿಹಾರದ ಹಲವು ಕ್ಷೇತ್ರಗಳಲ್ಲಿ ನೆಕ್ ಟು ನೆಕ್ ಫೈಟ್ ನಡೆಯುತ್ತಿದ್ದು, ಅತ್ಯಂತ ಕಡಿಮೆ ಮತಗಳ ಅಂತರದೊಂದಿಗೆ ಹಲವು ಸ್ಥಾನಗಳಲ್ಲಿ ಗೆಲುವಿನ ಹಾವು-ಏಣಿ ಆಟ ಮುಂದುವರೆದಿದೆ.

ಬಿಹಾರದಲ್ಲಿ ಎನ್‌ಡಿಎ ಸರ್ಕಾರ ರಚಿಸಲಿದೆ: ಶರದ್ ಪವಾರ್ಬಿಹಾರದಲ್ಲಿ ಎನ್‌ಡಿಎ ಸರ್ಕಾರ ರಚಿಸಲಿದೆ: ಶರದ್ ಪವಾರ್

ಈ ಕುರಿತು ಟ್ವೀಟ್ ಮಾಡಿರುವ ಬಿಹಾರದ ಆರ್‌ಜೆಡಿ, ""ನಾವು ಎಲ್ಲಾ ಕ್ಷೇತ್ರಗಳ ಅಭ್ಯರ್ಥಿಗಳು ಮತ್ತು ಕಾರ್ಯಕರ್ತರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ ಮತ್ತು ಎಲ್ಲಾ ಜಿಲ್ಲೆಗಳಿಂದ ಪಡೆದ ಮಾಹಿತಿಯು ನಮ್ಮ ಪರವಾಗಿದೆ'' ಎಂದು ಹೇಳಿದೆ.

Bihar Election Results 2020: Mahathtabandan Government Is Formation In Bihar: RJD

ತಡರಾತ್ರಿಯವರೆಗೂ ಎಣಿಕೆ ಕಾರ್ಯ ನಡೆಯಲಿದ್ದು, ಮಹಾಘಟಬಂಧನ್ ಸರ್ಕಾರ ರಚನೆ ಖಚಿತವಾಗಿದೆ. ಬಿಹಾರ ಈಗ ಬದಲಾಗಿದೆ. ಮತಗಳ ಎಣಿಕೆ ಪೂರ್ಣಗೊಳ್ಳುವವರೆಗೆ ಎಲ್ಲಾ ಅಭ್ಯರ್ಥಿಗಳು ಮತ್ತು ಎಣಿಕೆಯ ಏಜೆಂಟ್‌ಗಳು ಎಣಿಕೆಯ ಸಭಾಂಗಣದಲ್ಲಿಯೇ ಇರುತ್ತಾರೆ ಎಂದು ತಿಳಿಸಿದೆ.

ಫಲಿತಾಂಶಗಳ ಎಣಿಕೆಯಲ್ಲಿ ಫೌಲ್ ಪ್ಲೇ ನಡೆಯುತ್ತಿದೆ. ನಾವು ಗೆದ್ದ ಸ್ಥಾನಗಳೇ ಹಲವು ಸ್ಥಾನಗಳಲ್ಲಿ ಮರುಕಳಿಸಬಹುದು ಎಂದು ಆರ್‌ಜೆಡಿ ನಾಯಕ ಮನೋಜ್ ಝಾ ಹೇಳಿದ್ದಾರೆ.

ಸದ್ಯದ ಚುನಾವಣಾ ಆಯೋಗದ ಟ್ರೆಂಡ್ ಪ್ರಕಾರ, ಬಿಜೆಪಿ 28 ಸ್ಥಾನಗಳಲ್ಲಿ ಜಯಿಸಿದ್ದರೆ, ಆರ್‌ಜೆಡಿ-25 ಸ್ಥಾನಗಳಲ್ಲಿ ಗೆಲುವಿನ ನಗೆ ಬೀರಿದೆ. ಇನ್ನು ಜೆಡಿ(ಯು) -17 ಸ್ಥಾನ ಗೆದ್ದಿದ್ದರೆ, ಕಾಂಗ್ರೆಸ್- 7 ಸ್ಥಾನಗಳಲ್ಲಿ ಜಯಿಸಿದೆ,

ಅದೇ ರೀತಿ ಎಡಪಕ್ಷಗಳಾದ ಸಿಪಿಐ(ಎಂಎಲ್) - 6 ಸ್ಥಾನ, ವಿಐಪಿ-2, ಎಐಎಂಐಎಂ-2, ಮತ್ತು ಸಿಪಿಐ, ಸಿಪಿಐ (ಎಂ), ಎಚ್‌ಎಎಂ (ಎಸ್) ಮತ್ತು ಸ್ವತಂತ್ರ 1 ಸ್ಥಾನದಲ್ಲಿ ಗೆದ್ದಿದ್ದಾರೆ. ಒಟ್ಟಾರೆ ಫಲಿತಾಂಶ ರಾತ್ರಿ ಗಂಟೆಯ ನಂತರ ಪ್ರಕಟವಾಗಲಿದೆ.

English summary
In Bihar, there is fierce rivalry between NDA and Mahaghatbandan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X