ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫಲಿತಾಂಶ ಪ್ರಕಟ ರಾತ್ರಿಯಾಗಬಹುದು: ಚುನಾವಣಾ ಆಯೋಗ

|
Google Oneindia Kannada News

ಪಟ್ನಾ, ನವೆಂಬರ್ 10: ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಇದುವರೆಗೂ ಒಂದು ಕೋಟಿಯಷ್ಟು ಮತಗಳನ್ನು ಮಾತ್ರ ಎಣಿಕೆ ಮಾಡಲಾಗಿದೆ. ಅಪಾರ ಪ್ರಮಾಣದಲ್ಲಿ ಮತ ಎಣಿಕೆ ಇನ್ನೂ ಬಾಕಿ ಇದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

Recommended Video

ಎಲ್ಲಾಕಡೆ ಅರಳಿದ ಕಮಲ!! | BJP | Oneindia Kannada

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಹಾರದ ಮುಖ್ಯ ಚುನಾವಣಾ ಆಯುಕ್ತ ಎಚ್ ಆರ್ ಶ್ರೀನಿವಾಸ್, '50 ಸುತ್ತುಗಳಷ್ಟು ಮತ ಎಣಿಕೆ ಮಾಡಬೇಕಾದ ಅನೇಕ ಕ್ಷೇತ್ರಗಳಿವೆ. 4 ಕೋಟಿ 10 ಲಕ್ಷ ಮಂದಿ ಮತಚಲಾಯಿಸಿದ್ದಾರೆ. ನಾವು ಇದುವರೆಗೂ 95 ಲಕ್ಷ ಮತಗಳನ್ನು ಎಣಿಕೆ ಮಾಡಿದ್ದೇವೆ. ನಮ್ಮ ಮತ ಎಣಿಕೆಯು ಸಂಜೆಯ ಬಳಿಕವೂ ಮುಂದುವರಿಯಲಿದೆ' ಎಂದು ತಿಳಿಸಿದರು.

Live Updates: ಬಿಹಾರದಲ್ಲಿ ಮಹಾಘಟಬಂಧನ್ ವಿರುದ್ಧ ಎನ್ ಡಿಎ ಮುನ್ನಡೆ

ಇದುವರೆಗೂ ಮತ ಎಣಿಕೆ ಯಾವುದೇ ಅಡೆತಡೆಗಳಿಲ್ಲದೆ ಸುಗಮವಾಗಿ ನಡೆದಿದೆ. ಒಟ್ಟು 30 ರಿಂದ 35 ಸುತ್ತುಗಳಲ್ಲಿ ಮತ ಎಣಿಕೆ ನಡೆಯಲಿದೆ. 20-25 ಸುತ್ತುಗಳ ಮತ ಎಣಿಕೆ ಇನ್ನೂ ಬಾಕಿ ಇದೆ. ಸುಮಾರು 166 ಕ್ಷೇತ್ರಗಳಲ್ಲಿ ಮತಗಳ ಅಂತರ 5000ಕ್ಕೂ ಕಡಿಮೆ ಇದೆ ಎಂದರು.

Bihar Election Results 2020: Election Commission Updates About Counting

ಕಾನೂನಿಗೆ ಅನುಗುಣವಾಗಿ ಇಂದು ಬೆಳಿಗ್ಗೆ 8 ಗಂಟೆಯವೆರೆಗೆ ಸ್ವೀಕರಿಸಿದ ಎಲ್ಲ ಅಂಚೆ ಮತಪತ್ರಗಳನ್ನು ಮತ ಎಣಿಕೆಗೆ ಪರಿಗಣಿಸಲಾಗಿದೆ. ಇದರ ಅರ್ಥ ಬೆಳಿಗ್ಗೆ 8 ಗಂಟೆಯವರೆಗೆ ಎಲ್ಲ ಮತ ಎಣಿಕೆ ಕೇಂದ್ರಗಳಿಗೆ ಬಂದ ಅಂಚೆ ಮತಪತ್ರಗಳನ್ನು ಇಂದು ಎಣಿಕೆಗೆ ತೆಗೆದುಕೊಳ್ಳಬೇಕಿದೆ ಎಂದು ತಿಳಿಸಿದರು.

60ಕ್ಕೂ ಹೆಚ್ಚಿ ಕ್ಷೇತ್ರಗಳಲ್ಲಿ ಇಬ್ಬರು ಅಭ್ಯರ್ಥಿಗಳ ನಡುವಿನ ಅಂತರ 500 ಮತಗಳಿಗೂ ಕಡಿಮೆ ಇದೆ. ಈ ಮುಂಚೆ 25-26 ಸುತ್ತುಗಳಲ್ಲಿ ಎಣಿಕೆ ಮುಗಿಯುತ್ತಿತ್ತು. ಈಗ ಸುಮಾರು 35 ಸುತ್ತುಗಳಿಗೆ ಹೋಗಿದೆ. ಹೀಗಾಗಿ ರಾತ್ರಿಯವರೆಗೂ ಮತ ಎಣಿಕೆ ಮುಂದುವರಿಯಲಿದೆ ಎಂದರು.

ಇವಿಎಂ ಹ್ಯಾಕ್ ಕುರಿತಾದ ಆರೋಪವನ್ನು ನಿರಾಕರಿಸಿದರು. ಇವಿಎಂಗಳನ್ನು ಹ್ಯಾಕ್ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು. ಇವಿಎಂಗಳನ್ನು ಟ್ಯಾಂಪರ್ ಮಾಡಲಾಗದು. ಇವಿಎಂಗಳ ಗುಣಮಟ್ಟವನ್ನು ಸುಪ್ರೀಂಕೋರ್ಟ್ ಹಲವು ಬಾರಿ ಎತ್ತಿ ಹಿಡಿದಿದೆ. 2017ರಲ್ಲಿ ಇವಿಎಂ ಚಾಲೆಂಜ್ ಅನ್ನು ಕೂಡ ಚುನಾವಣಾ ಆಯೋಗ ಇರಿಸಿತ್ತು ಎಂದು ಸ್ಪಷ್ಟಪಡಿಸಿದರು.

English summary
Bihar Assembly Election Results 2020 Updates in Kannada: Election Commission of India explained the details about counting so far.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X