ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಹಾರ: ಸಿಎಂ ಆಕಾಂಕ್ಷಿಗೆ 'ನೋಟಾ'ಕ್ಕಿಂತಲೂ ಕಡಿಮೆ ಮತ!

|
Google Oneindia Kannada News

ಪಟ್ನಾ, ನವೆಂಬರ್ 11: ತಮ್ಮದೇ ರಾಜಕೀಯ ಸಂಘಟನೆ 'ಪ್ಲೂರಲ್ಸ್ ಪಾರ್ಟಿ' ಎಂಬ ಪಕ್ಷ ಸ್ಥಾಪಿಸಿ ಬಿಹಾರ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿಕೊಂಡಿದ್ದ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನ ಮಾಜಿ ವಿದ್ಯಾರ್ಥಿ ಪುಷ್ಪಮ್ ಪ್ರಿಯಾ ಚೌಧರಿ (28) ತಾವು ಸ್ಪರ್ಧಿಸಿದ್ದ ಎರಡೂ ಕ್ಷೇತ್ರಗಳಲ್ಲಿ ಹೀನಾಯ ಸೋಲು ಅನುಭವಿಸಿದ್ದಾರೆ.

ಪುಷ್ಪಮ್ ಪ್ರಿಯಾ ಅವರು ಪಟ್ನಾ ಜಿಲ್ಲೆಯ ಬಂಕಿಪುರ ವಿಧಾನಸಭೆ ಕ್ಷೇತ್ರ ಮತ್ತು ಮಧುಬನಿ ಜಿಲ್ಲೆಯ ಬಿಸ್ಫಿ ವಿಧಾನಸಭೆ ಕ್ಷೇತ್ರಗಳಿಂದ ಸ್ಪರ್ಧಿಸಿದ್ದರು. ಆದರೆ ಅವರು ಈ ಎರಡೂ ಕ್ಷೇತ್ರಗಳಲ್ಲಿ ಕೆಲವೇ ಮತಗಳನ್ನು ಪಡೆದುಕೊಂಡಿದ್ದಾರೆ. ಬಿಸ್ಫಿ ವಿಧಾನಸಭೆ ಕ್ಷೇತ್ರದಲ್ಲಿ 'ನೋಟಾ' ಆಯ್ಕೆಯಲ್ಲಿ ಬಿದ್ದ ಮತಗಳಿಗಿಂತಲೂ ಕಡಿಮೆ ಮತಗಳನ್ನು ಪಡೆದಿದ್ದಾರೆ.

ಜಗತ್ತಿಗೆ ಪ್ರಜಾಪ್ರಭುತ್ವದ ಪಾಠ ಮಾಡಿದ ಬಿಹಾರದ ಜನತೆ: ಪ್ರಧಾನಿ ಮೋದಿಜಗತ್ತಿಗೆ ಪ್ರಜಾಪ್ರಭುತ್ವದ ಪಾಠ ಮಾಡಿದ ಬಿಹಾರದ ಜನತೆ: ಪ್ರಧಾನಿ ಮೋದಿ

ಬಂಕಿಪುರ ಕ್ಷೇತ್ರದಲ್ಲಿ ಮೂರು ಬಾರಿ ಶಾಸಕರಾಗಿದ್ದ ಬಿಜೆಪಿಯ ನಿತಿನ್ ನವೀನ್ ಮತ್ತು ನಟ, ರಾಜಕಾರಣಿ ಶತ್ರುಘ್ನನ್ ಸಿನ್ಹಾ ಮಗ, ಕಾಂಗ್ರೆಸ್ ಅಭ್ಯರ್ಥಿ ಲವ್ ಸಿನ್ಹಾ ಕಣಕ್ಕಿಳಿದಿದ್ದರು. ನಿತಿನ್ ನವೀನ್ ಸುಲಭದ ಗೆಲುವು ಸಾಧಿಸಿದ್ದಾರೆ.

Bihar Election Results 2020: CM Aspirant Pushpam Priya Gets Less Votes Than NOTA

ಬಿಸ್ಫಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಹರಿಭೂಷಣ್ ಠಾಕೂರ್ ಮತ್ತು ಆರ್‌ಜೆಡಿ ಶಾಸಕ ಡಾ ಫಯಾಜ್ ಅಹಮದ್ ಹಾಗೂ ಇತರರು ಕಣದಲ್ಲಿದ್ದರು. ಇಲ್ಲಿ 'ನೋಟಾ' ಮತಗಳಿಗಿಂತಲೂ ಕಡಿಮೆ ಮತಗಳನ್ನು ಪುಷ್ಪಮ್ ಪ್ರಿಯಾ ಪಡೆದಿದ್ದಾರೆ.

ಇವಿಎಂ ಹ್ಯಾಕ್ ಆಗಿದೆ ಎಂದ ಲಂಡನ್ನಿನಿಂದ ಬಂದ ಬಿಹಾರಿ ಪುಷ್ಪಂಇವಿಎಂ ಹ್ಯಾಕ್ ಆಗಿದೆ ಎಂದ ಲಂಡನ್ನಿನಿಂದ ಬಂದ ಬಿಹಾರಿ ಪುಷ್ಪಂ

ಪುಷ್ಪಮ್ ಪ್ರಿಯಾ ಅವರು ಜೆಡಿಯುದ ಮಾಜಿ ಎಂಎಲ್‌ಸಿ ವಿನೋದ್ ಚೌಧರಿ ಅವರ ಮಗಳು. ಬಿಹಾರ ಚುನಾವಣೆಗೂ ಮುನ್ನ ತಾವು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಪತ್ರಿಕೆಗಳ ಮೂಲಕ ಘೋಷಿಸಿಕೊಳ್ಳುವ ಮೂಲಕ ಅವರು ಕುತೂಹಲ ಮೂಡಿಸಿದ್ದರು. 'ಪ್ಲೂರಲ್ಸ್' ಎಂಬ ಪಕ್ಷ ಸ್ಥಾಪಿಸಿದ್ದ ಅವರು, ಎಂಜಿನಿಯರ್‌ಗಳು, ವೈದ್ಯರು, ಸಾಮಾಜಿಕ ಕಾರ್ಯಕರ್ತರು, ಶಿಕ್ಷಕರು, ಪ್ರೊಫೆಸರ್‌ಗಳನ್ನು ತಮ್ಮ ಅಭ್ಯರ್ಥಿಗಳನ್ನಾಗಿ ವಿವಿಧ ಕ್ಷೇತ್ರಗಳಲ್ಲಿ ಕಣಕ್ಕಿಳಿಸಿದ್ದರು. ಅವರೂ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರು.

ಪ್ರಧಾನಿ OK, ನಿತೀಶ್ Not OK: ಚಿರಾಗ್ ಪಾಸ್ವಾನ್ ಹೊಸ ವರಸೆ! ಪ್ರಧಾನಿ OK, ನಿತೀಶ್ Not OK: ಚಿರಾಗ್ ಪಾಸ್ವಾನ್ ಹೊಸ ವರಸೆ!

Recommended Video

Bihar Election Results 2020 : Modiಯ ಗೆಲುವು ಮೋಸದ ಗೆಲುವು!! | EVM Hack | Oneindia Kannada

ಚುನಾವಣೆಯಲ್ಲಿ ತಮಗೆ ಹಿನ್ನಡೆಯಾಗುತ್ತಿದ್ದಂತೆಯೇ ಪುಷ್ಪಮ್ ಅವರು ವಿದ್ಯುನ್ಮಾನ ಮತ ಯಂತ್ರಗಳಲ್ಲಿ ದೋಷವಿದೆ ಎಂದು ಆರೋಪಿಸಿದ್ದರು.

English summary
Bihar Assembly Election Results 2020 Updates in Kannada: Pushpam Priya Chaudhary who had created her own Pulrals Party and declared CM Post contender lost in both seats and gets less votes than NOTA.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X