• search
  • Live TV
ಪಟ್ನಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಿಹಾರ ಪ್ರಣಾಳಿಕೆ: ಹುಡುಗರಿಗೆ ಬೈಕು, ಹುಡುಗಿಯರಿಗೆ ಸ್ಕೂಟಿ

|

ಪಾಟ್ನಾ, ಸೆ. 24: ಜನ ಅಧಿಕಾರ್ ಪಾರ್ಟಿ ಮುಖ್ಯಸ್ಥ ಪಪ್ಪು ಯಾದವ್ ಅವರು ಬಿಹಾರ ಚುನಾವಣೆಗಾಗಿ ಪ್ರಣಾಳಿಕೆಯನ್ನು ಪ್ರಕಟಿಸಿದ್ದಾರೆ. ಹುಡುಗರಿಗೆ ಬೈಕು, ಹುಡುಗಿಯರಿಗೆ ಸ್ಕೂಟಿ ನೀಡುವುದಾಗಿ ಆಶ್ವಾಸನೆ ನೀಡಿದ್ದಾರೆ.

ಇದೇ ಮೊದಲ ಬಾರಿಗೆ ಆಶ್ವಾಸನೆಗಳ ಅಫಿಡವಿಟ್ ಜನರ ಮುಂದಿಡುತ್ತಿದ್ದೇವೆ. ಅಫಿಡವಿಟ್ ಸೋಷಿಯಾಲಾಜಿ ಮಾದರಿಯಲ್ಲಿದೆ ಪೊಲೊಟಿಕಲ್ ಸೈನ್ಸ್ ನಂತಿಲ್ಲ. ಕಳೆದ 30 ವರ್ಷಗಳಲ್ಲಿ ಇಬ್ಬರು ಸೋದರರು ಲೂಟಿ ಮಾಡಿದ್ದಾರೆ ಎಂದಿದ್ದಾರೆ.

ಸೀಟು ಹಂಚಿಕೆ: ನಡ್ಡಾಗೆ ಮಹತ್ವದ ಸಲಹೆ ಕೊಟ್ಟ ಪಾಸ್ವಾನ್

"ಬಿಹಾರದ ಸದ್ಯದ ಪರಿಸ್ಥಿತಿಯನ್ನು ನಮ್ಮ ಪಕ್ಷ ಬದಲಾಯಿಸಲಿದೆ. ಬಿಹಾರದ ಸೇವಕ, ಮನೆಮಗನಾಗಿ ನಾನು ನಿಮ್ಮ ಮುಂದೆ ನಿಂತಿದ್ದೇನೆ. ಮುಂದುವರೆದ, ಹಿಂದುಳಿದ, ಹಿಂದು, ಮುಸ್ಲಿಂ, ದಲಿತ, ಮಹಾ ದಲಿತ ಮುಂತಾದ ಕಾರ್ಡ್ ಮುಂದಿಡದೆ ಎಲ್ಲಾ ಸಮುದಾಯಕ್ಕೂ ಸಮಾನದ ಹಕ್ಕು ಹಾಗೂ ಗೌರವ ಒದಗಿಸುವ ಆಶ್ವಾಸನೆ ನೀಡುತ್ತಿದ್ದೇನೆ. ಪ್ರತಿ ಸಮುದಾಯಕ್ಕೂ ಒಬ್ಬ ಉಪ ಮುಖ್ಯಮಂತ್ರಿಯನ್ನು ನೇಮಿಸಲಾಗುತ್ತದೆ, ಎಲ್ಲಾ ವರ್ಗಗಳ ಕಷ್ಟಗಳನ್ನು ಆಲಿಸಿ, ಪರಿಹರಿಸಲಾಗುತ್ತದೆ. ಇಂಟರ್ ಮೀಡಿಯೇಟ್ ನಲ್ಲಿ ಪ್ರಥಮ ಶ್ರೇಣಿಯಲ್ಲಿ ಪಾಸ್ ಆದ ಹುಡುಗರಿಗೆ ಮೋಟರ್ ಸೈಕಲ್ ಹಾಗೂ ಹುಡುಗಿಯರಿಗೆ ಸ್ಕೂಟರ್ ನೀಡಲಾಗುತ್ತದೆ ಎಂದಿದ್ದಾರೆ.

ಬಿಸಿಯೂಟ ತಯಾರಕರು, ವಿಕಾಸ್ ಮಿತ್ರ, ತೋಲಾ ಸೇವಕರು, ತಲಿಮಿ ಮರ್ಕಾಜ್ ಹಾಗೂ ಅಂಗನವಾಡಿ ಸಹಾಯಕರು ಮುಂತಾದ ಶ್ರಮಿಕ ವರ್ಗಕ್ಕೂ ಸೂಕ್ತ ಪ್ರಾತಿನಿಧ್ಯ, ಸೌಲಭ್ಯ ಒದಗಿಸಲಾಗುವುದು. ಇದಲ್ಲದೆ, ವೃದ್ಧಾಪ್ಯ ಹಾಗೂ ವಿಧವಾ ಪಿಂಚಣಿ ಮೊತ್ತವನ್ನು 500 ರು ನಿಂದ 3,000 ರು ಪ್ರತಿ ತಿಂಗಳಿಗೆ ಏರಿಕೆ ಮಾಡುವುದಾಗಿ ಆಶ್ವಾಸನೆ ನೀಡಿದ್ದಾರೆ.

English summary
The Jan Adhikar Party (Jap) party chief Pappu Yadav has made its manifesto before the Bihar Assembly elections promising bike to boys and scooty to girls students.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X