ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಚುನಾವಣೆಗಳ ಖರ್ಚಿನ ಮಿತಿ ಶೇ.10ರಷ್ಟು ಹೆಚ್ಚಳ

|
Google Oneindia Kannada News

ಪಾಟ್ನಾ, ಅಕ್ಟೋಬರ್.19: ಬಿಹಾರ ವಿಧಾನಸಭಾ ಚುನಾವಣೆ ಹೊಸ್ತಿಲಿನಲ್ಲೇ ರಾಜಕೀಯ ಪಕ್ಷಗಳಿಗೆ ಮತ್ತು ನಾಯಕರಿಗೆ ಕೇಂದ್ರ ಸರ್ಕಾರವು ಸಿಹಿಸುದ್ದಿ ನೀಡಿದೆ. ಮುಂಬರುವ ಎಲ್ಲಾ ಚುನಾವಣೆ ಮತ್ತು ಉಪ ಚುನಾವಣೆಗಳಲ್ಲಿ ಪ್ರಚಾರದ ವೆಚ್ಚವನ್ನು ಶೇ.10ರಷ್ಟು ಹೆಚ್ಚಿಸಿದೆ.

ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ರೋಗದಿಂದ ಉಂಟಾದ ನಿರ್ಬಂಧಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಚುನಾವಣಾ ಆಯೋಗ ಈ ಬಗ್ಗೆ ಪ್ರಸ್ತಾಪಿಸಿತ್ತು. 2014ರ ಲೋಕಸಭಾ ಚುನಾವಣೆ ಬಳಿಕ ಚುನಾವಣೆ ವೆಚ್ಚದಲ್ಲಿ ಯಾವುದೇ ರೀತಿ ಹೆಚ್ಚಳ ಆಗಿರಲಿಲ್ಲ. ಈ ಹಿನ್ನೆಲೆ ಸಲ್ಲಿಸಿದ ಪ್ರಸ್ತಾಪಕ್ಕೆ ಒಂದು ತಿಂಗಳ ನಂತರ ಕೇಂದ್ರ ಸರ್ಕಾರವು ಅನುಮತಿ ನೀಡಿದ್ದು, ಅಧಿಸೂಚನೆ ಹೊರಡಿಸಿದೆ.

ಬಿಹಾರ ಚುನಾವಣೆ: ಬಿಹಾರ ಚುನಾವಣೆ: "ಬಿಹಾರಿ ಪುತ್ರ"ನಿಗಾಗಿ ಮತ ಕೇಳಿದ ಶತ್ರುಜ್ಞ ಸಿನ್ಹಾ

Bihar Election: Govt Increases Poll Expenditure Limit By 10 Percent

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳಿಗೆ ಮೊದಲು ಈ ನಿಯಮ ಅನ್ವಯವಾಗಲಿದೆ. ಮೊದಲು ಅಭ್ಯರ್ಥಿಗಳ ಚುನಾವಣಾ ಖರ್ಚು ವೆಚ್ಚದ ಮಿತಿಯು 28 ಲಕ್ಷ ರೂಪಾಯಿಗೆ ಸೀಮಿತವಾಗಿತ್ತು. ಇದೀಗ ಅದನ್ನು 30.80 ಲಕ್ಷಕ್ಕೆ ಹೆಚ್ಚಿಸಲಾಗಿದೆ.

Recommended Video

ಲಸಿಕೆ ಸಿಗತ್ತೋ ಇಲ್ವೋ ಗೊತ್ತಿಲ್ಲಾ ! ಆದ್ರೆ ಇದು ಮಾತ್ರ Ready ಇರ್ಬೇಕು | Oneindia Kannada

ಸಾಂಕ್ರಾಮಿಕ ಪಿಡುಗಿನ ನಡುವೆ ಪ್ರಚಾರದ ಸವಾಲು:
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ನಡುವೆ ಅಭ್ಯರ್ಥಿಗಳಿಗೆ ಪ್ರಚಾರ ಮಾಡುವುದು ಸವಾಲಿನ ಕಾರ್ಯವಾಗಿದೆ. ಕೊವಿಡ್-19 ನಿಯಂತ್ರಣ ಕ್ರಮಗಳೊಂದಿಗೆ ಪ್ರಚಾರ ನಡೆಸಬೇಕಿದೆ. ಅಭ್ಯರ್ಥಿಗಳು ಸಭೆ, ಸಮಾರಂಭ ಮತ್ತು ಕನಿಷ್ಠ ಮಿತಿಯಲ್ಲಿ ಕಾರ್ಯಕರ್ತರ ಜೊತೆಗಿನ ಚರ್ಚೆಗೆ ಹೆಚ್ಚಿನ ಹಣ ಖರ್ಚಾಗಲಿದೆ. ಹೀಗಾಗಿ ಚುನಾವಣಾ ವೆಚ್ಚವನ್ನು ಹೆಚ್ಚಿಸುವಂತೆ ಕಾನೂನು ಸಚಿವಾಲಯಕ್ಕೆ ಚುನಾವಣಾ ಆಯೋಗವು ಅಕ್ಟೋಬರ್.10ರಂದು ಪ್ರಸ್ತಾವನೆ ಸಲ್ಲಿಸಿತ್ತು.
ಚುನಾವಣೆ ವೆಚ್ಚ ತಾತ್ಕಾಲಿಕವಾಗಿ ಹೆಚ್ಚಳ:
ಕೇಂದ್ರದ ಕಾನೂನು ಸಚಿವಾಲಯವು ಚುನಾವಣಾ ವೆಚ್ಚವನ್ನು ಹೆಚ್ಚಿಸುವುದಕ್ಕೆ ಅನುಮತಿ ನೀಡಿದೆ. ಆದರೆ ಒಂದು ಬಾರಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ನಿಯಂತ್ರಣಕ್ಕೆ ಬಂದ ಮೇಲೆ ಹೆಚ್ಚಿಸಲಾಗಿರುವ ಶೇ.10ರಷ್ಟು ಚುನಾವಣಾ ವೆಚ್ಚದ ಪ್ರಮಾಣವನ್ನು ಮತ್ತೆ ತಗ್ಗಿಸಲಾಗುತ್ತದೆ ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.
ಕಳೆದ ತಿಂಗಳಷ್ಟೇ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹಿನ್ನೆಲೆ ಚುನಾವಣಾ ಪ್ರಚಾರಕ್ಕೆ ವಿಶೇಷ ಮಾರ್ಗಸೂಚಿಯನ್ನು ಬಿಡುಗಡೆಗೊಳಿಸಲಾಗಿತ್ತು. ಅಭ್ಯರ್ಥಿಗಳು ಮನೆ ಮನೆ ಪ್ರಚಾರಕ್ಕೆ ಕೇವಲ ಮೂವರ ಜೊತೆಗಷ್ಟೇ ತೆರಳಬೇಕು. ರ್ಯಾಲಿ ನಡೆಸುವ ಸಮಯಗಳಲ್ಲಿ ಗರಿಷ್ಠ 10ರ ಬದಲಿಗೆ ಐದು ಕಾರುಗಳನ್ನು ಮಾತ್ರ ಬಳಸಬೇಕು. ಇನ್ನು, ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಕೇವಲ ಇಬ್ಬರು ಸಹಪಾಟಿಗಳ ಜೊತೆಗೆ ತೆರಳುವಂತೆ ಸೂಚನೆ ನೀಡಲಾಗಿತ್ತು.

English summary
Bihar Election: Govt Increases Poll Expenditure Limit By 10 Percent
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X