• search
 • Live TV
ಪಟ್ನಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಿಹಾರದಲ್ಲಿ ಪ್ರಚಾರ ನಡೆಸಿದ ಬಿಜೆಪಿಯ ಶಹನವಾಜ್ ರಿಗೆ ಕೊವಿಡ್-19 ದೃಢ

|

ಪಾಟ್ನಾ, ಅಕ್ಟೋಬರ್.21: ಬಿಹಾರ ವಿಧಾನಸಭಾ ಚುನಾವಣೆ ಹೊಸ್ತಿಲಿನಲ್ಲಿ ಕೇಂದ್ರದ ಮಾಜಿ ಸಚಿವ, ಬಿಜೆಪಿ ಹಿರಿಯ ಮುಖಂಡ ಶಹನವಾಜ್ ಹುಸೇನ್ ರಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ.

"ಕೊವಿಡ್-19 ಸೋಂಕು ತಗುಲಿರುವ ಕೆಲವು ಜನರು ನನ್ನ ಸಂಪರ್ಕಕ್ಕೆ ಬಂದಿರುವುದು ನನ್ನ ಗಮನಕ್ಕೆ ಬಂದಿತ್ತು. ಈ ಹಿನ್ನೆಲೆ ನಾನು ಕೊರೊನಾವೈರಸ್ ಸೋಂಕಿನ ತಪಾಸಣೆ ನಡೆಸಿದ ಸಂದರ್ಭದಲ್ಲಿ ನನಗೂ ಸೋಂಕು ತಗುಲಿರುವುದು ದೃಢಪಟ್ಟಿದೆ" ಎಂದು ಶಹನವಾಜ್ ಹುಸೇನ್ ಟ್ವೀಟ್ ಮಾಡಿದ್ದಾರೆ.

ಬಿಹಾರ ಚುನಾವಣಾ ಸಮೀಕ್ಷೆ; ನಿತೀಶ್‌ಗೆ ಮತ್ತೊಂದು ಅವಕಾಶ ಬೇಕೆ?

ತಮಗೆ ಕೊರೊನಾವೈರಸ್ ಸೋಂಕು ಖಾತ್ರಿಯಾಗಿರುವ ಬೆನ್ನಲ್ಲೇ ತಮ್ಮ ಸಂಪರ್ಕಕ್ಕೆ ಬಂದಿರುವ ಎಲ್ಲ ಬೆಂಬಲಿಗರು ಮತ್ತು ಕಾರ್ಯಕರ್ತರು ಕೊವಿಡ್-19 ಸೋಂಕಿತ ತಪಾಸಣೆ ಮಾಡಿಸಿಕೊಳ್ಳುವಂತೆ ಶಹನವಾಜ್ ಹುಸೇನ್ ಅವರು ಮನವಿ ಮಾಡಿಕೊಂಡಿದ್ದಾರೆ.

ಬಿಹಾರದ ಹಲವೆಡೆ ಶಹನಾಜ್ ಹುಸೇನ್ ಪ್ರಚಾರ:

ಬಿಹಾರ ವಿಧಾನಸಭಾ ಚುನಾವಣೆ ಹಿನ್ನೆಲೆ ಫೋರ್ಬೆಸ್ ಗಂಜ್, ನರಪತ್ ಗಂಜ್, ಪುರ್ನಿಯಾ ಸಾದರ್ ಮತ್ತು ಕಟಿಹಾರ್ ನಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಶಹನವಾಜ್ ಹುಸೇನ್ ಪ್ರಚಾರ ಮಾಡಿದ್ದರು. ಈ ವೇಳೆ ಬಿಹಾರ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಕೂಡಾ ಇವರ ಜೊತೆಗಿದ್ದರು.

ಕಳೆದ ಅಕ್ಟೋಬರ್.17ರಂದಷ್ಟೇ ಭಾರತೀಯ ಜನತಾ ಪಕ್ಷವು ಎರಡನೇ ಬಾರಿ 30 ನಾಯಕರುಳ್ಳ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಡುಗಡೆಗೊಳಿಸಿತ್ತು. ಮೊದಲ ಪಟ್ಟಿಯಲ್ಲಿ ಬಿಟ್ಟು ಹೋಗಿದ್ದ ಬಿಹಾರದ ಚಿರ ಪರಿಚಿತ ನಾಯಕರಾದ ಶಹನವಾಜ್ ಹುಸೇನ್ ಹೆಸರನ್ನು ಎರಡನೇ ಪಟ್ಟಿಯಲ್ಲಿ ಸೇರಿಸಲಾಗಿತ್ತು.

   ಇದನ್ನು ಬಳಸಿ corona ಇಂದ ದೂರ ಇರಿ | Oneindia Kannada

   English summary
   Bihar Election: BJP Leader Shahnawaz Hussain Tests Coronavirus Positive After 2 Days Marathon Rally.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X