ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣೆ ಪ್ರಚಾರದಲ್ಲಿ ಭಾಗವಹಿಸಿದ್ದ ಬಿಹಾರ ಡಿಸಿಎಂ ಸುಶೀಲ್ ಮೋದಿಗೆ ಕೊರೊನಾ ವೈರಸ್

|
Google Oneindia Kannada News

ಪಟ್ನಾ, ಅಕ್ಟೋಬರ್ 22: ಬಿಹಾರ ವಿಧಾನಸಭೆ ಚುನಾವಣೆಯ ಪ್ರಚಾರದಲ್ಲಿ ಭಾಗವಹಿಸಿದ್ದ ಕೇಂದ್ರದ ಮಾಜಿ ಸಚಿವ, ಬಿಜೆಪಿ ಹಿರಿಯ ಮುಖಂಡ ಶಹನವಾಜ್ ಹುಸೇನ್ ಅವರಿಗೆ ಕೋವಿಡ್ ಸೋಂಕು ದೃಢಪಟ್ಟ ಬೆನ್ನಲ್ಲೇ ಪಕ್ಷಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಚುನಾವಣೆಯ ಸಮೀಪದಲ್ಲಿಯೇ ಉಪ ಮುಖ್ಯಮಂತ್ರಿ, ಬಿಜೆಪಿ ನಾಯಕ ಸುಶೀಲ್ ಮೋದಿ ತಾವು ಕೊರೊನಾ ವೈರಸ್ ಸೋಂಕಿಗೆ ತುತ್ತಾಗಿರುವುದಾಗಿ ತಿಳಿಸಿದ್ದಾರೆ.

ತಮಗೆ ಕೊರೊನಾ ವೈರಸ್ ಸೋಂಕು ಪಾಸಿಟಿವ್ ಬಂದಿದ್ದು, ಪಟ್ನಾದ ಏಮ್ಸ್‌ಗೆ ದಾಖಲಾಗಿರುವುದಾಗಿ ಸುಶೀಲ್ ಮೋದಿ ಮಾಹಿತಿ ನೀಡಿದ್ದಾರೆ. ಮೂರು ಹಂತದ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಒಂದು ವಾರ ಬಾಕಿ ಇರುವಾಗಲೇ ಸುಶೀಲ್ ಮೋದಿ ಸೋಂಕಿಗೆ ತುತ್ತಾಗಿರುವುದು ಬಿಜೆಪಿಯ ಪ್ರಚಾರ ಕಾರ್ಯಕ್ಕೆ ಹಿನ್ನಡೆ ಉಂಟುಮಾಡಿದೆ.

ಬಿಹಾರದಲ್ಲಿ ಪ್ರಚಾರ ನಡೆಸಿದ ಬಿಜೆಪಿಯ ಶಹನವಾಜ್ ರಿಗೆ ಕೊವಿಡ್-19 ದೃಢಬಿಹಾರದಲ್ಲಿ ಪ್ರಚಾರ ನಡೆಸಿದ ಬಿಜೆಪಿಯ ಶಹನವಾಜ್ ರಿಗೆ ಕೊವಿಡ್-19 ದೃಢ

ಬುಕ್ಸರ್ ಮತ್ತು ಭೋಜ್ಪುರ ವಿಧಾನಸಭೆ ಕ್ಷೇತ್ರದಲ್ಲಿ 69 ವರ್ಷದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೊಂದಿಗೆ 68 ವರ್ಷದ ಸುಶೀಲ್ ಮೋದಿ ಭಾನುವಾರವಷ್ಟೇ ಜಂಟಿ ಪ್ರಚಾರ ನಡೆಸಿದ್ದರು. ಅವರಿಬ್ಬರೂ ಜತೆಯಾಗಿ ನಾಲ್ಕು ಪ್ರಚಾರ ಸಭೆಗಳಲ್ಲಿ ಭಾಗಿಯಾಗಿದ್ದರು. ಹಿರಿಯ ಮುಖಂಡ ಶಹನವಾಜ್ ಹುಸೇನ್ ಸೋಮವಾರ ಭಾಗವಹಿಸಿದ್ದ ಸಭೆಯಲ್ಲಿ ಸುಶೀಲ್ ಕೂಡ ಪಾಲ್ಗೊಂಡಿದ್ದರು.

Bihar Deputy Chief Minister Sushil Modi Test Positive For Coronavirus

'ಕೊರೊನಾ ವೈರಸ್ ಪಾಸಿಟಿವ್‌ಗೆ ಒಳಗಾಗಿದ್ದೇನೆ. ಎಲ್ಲ ಆರೋಗ್ಯ ಮಾನದಂಡಗಳೂ ಸರಿಯಾಗಿ ಸಹಜ ಸ್ಥಿತಿಯಲ್ಲಿವೆ. ಸಣ್ಣದಾಗಿ ಜ್ವರವಿತ್ತು. ಕಳೆದ ಎರಡು ದಿನಗಳಿಂದ ಯಾವ ಸಮಸ್ಯೆ ಇಲ್ಲ. ಹೆಚ್ಚಿನ ನಿಗಾವಹಿಸಲು ಪಟ್ನಾದ ಏಮ್ಸ್‌ಗೆ ದಾಖಲಾಗಿದ್ದೇನೆ. ಶ್ವಾಸಕೋಶದ ಸಿ.ಟಿ ಸ್ಕ್ಯಾನ್ ಸಹಜವಾಗಿದೆ. ಶೀಘ್ರದಲ್ಲಿಯೇ ಪ್ರಚಾರಕ್ಕೆ ಮರಳಲಿದ್ದೇನೆ' ಎಂದು ಅವರು ಟ್ವೀಟ್ ಮಾಡಿದ್ದಾರೆ.

Recommended Video

Electric Bus ನ ವಿಶೇಷತೆ ಏನು ಅಂತೀರಾ?!! | Oneindia Kannada

English summary
Bihar Assembly Election 2020: Bihar deputy chief minister Sushil Modi has tested positive for coronavirus and admitted to AIIMS, Patna.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X