ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಪಿಎಲ್ ಮುಗಿದ್ಮೇಲೆ ದೇಶಿ ಕ್ರಿಕೆಟ್ ಶುರು ಮಾಡಲು ಬೇಡಿಕೆ!

|
Google Oneindia Kannada News

ಪಾಟ್ನಾ, ಸೇ. 20: ಕೊರೊನಾವೈರಸ್ ಭೀತಿಯ ನಡುವೆ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್ ನ 13ನೇ ಆವೃತ್ತಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಆಯೋಜಿಸಿದೆ. ಯುಎಇಯಲ್ಲಿ ಐಪಿಎಲ್ 2020 ನಡೆಯುತ್ತಿರುವ ವೇಳೆಯಲ್ಲಿ ಭಾರತದಲ್ಲಿ ದೇಶಿ ಕ್ರಿಕೆಟ್ ಟೂರ್ನಮೆಂಟ್ ಆಯೋಜನೆ ಬಗ್ಗೆ ಚರ್ಚೆ ನಡೆದಿದೆ.

ಬಿಹಾರ ಕ್ರಿಕೆಟ್ ಮಂಡಳಿ ಸಾಮಾನ್ಯ ಸಭೆಯಲ್ಲಿ ಇಂದು ಐಪಿಎಲ್ ಯಶಸ್ವಿಯಾಗಿ ಆಯೋಜನೆ ಮಾಡಿರುವ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಕಾರ್ಯದರ್ಶಿ ಜಾಯ್ ಶಾ, ಖಚಾಂಚಿ ಅರುಣ್ ಧುಮಾಲ್, ಐಪಿಎಲ್ ಚೇರ್ಮನ್ ಬ್ರಿಜೇಶ್ ಪಟೇಲ್ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು. ಐಪಿಎಲ್ ಬಳಿಕ ಭಾರತದಲ್ಲಿ ದೇಶಿ ಕ್ರಿಕೆಟ್ ಟೂರ್ನಮೆಂಟ್ ಗಳನ್ನು ಆಯೋಜಿಸುವಂತೆ ಬಿಸಿಸಿಐಗೆ ಮನವಿ ಸಲ್ಲಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಐಪಿಎಲ್ 2020: ಬುಕ್ಕಿಗಳ ಪ್ರಕಾರ ಕಪ್ ಗೆಲ್ಲೋ ಫೇವರಿಟ್ ತಂಡ?ಐಪಿಎಲ್ 2020: ಬುಕ್ಕಿಗಳ ಪ್ರಕಾರ ಕಪ್ ಗೆಲ್ಲೋ ಫೇವರಿಟ್ ತಂಡ?

ಈ ಬಗ್ಗೆ ಪ್ರತಿಕ್ರಿಯಿಸಿದ ಬಿಸಿಎ ಕಾರ್ಯದರ್ಶಿ ಆದಿತ್ಯ ವರ್ಮಾ, ದೇಶಿ ಕ್ರಿಕೆಟ್ ಆಟಗಾರರಿಗೆ ಇನ್ನೂ ಹೆಚ್ಚಿನ ಅವಕಾಶ ಸಿಗಬೇಕಿದೆ. ಬಿಹಾರ ಆಟಗಾರರಿಗೆ ಸಿಗಬೇಕಿರುವ ಟಿಎ/ ಡಿಎ ಬಾಕಿಯನ್ನು ದೊರಕಿಸಿಕೊಡಬೇಕಿದೆ. ಕಾನೂನು ಸಮಸ್ಯೆಯಿಂದಾಗಿ ಬಿಹಾರ ಕ್ರಿಕೆಟ್ ಮಂಡಳಿ ಮಾನ್ಯತೆ ಕಳೆದುಕೊಂಡಿದ್ದು, ಕೋರ್ಟ್ ನಿಂದ ಮಾನ್ಯತೆಗಾಗಿ ಕಾನೂನು ಸಮರ ಒಂದು ಕಡೆ ನಡೆಯುತ್ತಿದ್ದರೆ ಇನ್ನೊಂದೆಡೆ ಬಿಸಿಸಿಐಯಿಂದ ಸಿಗಬೇಕಿರುವ ಅಧಿಕೃತ ಮುದ್ರೆ ಸಿಕ್ಕರೆ ಸ್ಥಳೀಯ ಆಟಗಾರರನ್ನು ಬೆಳೆಸಲು ಸಾಧ್ಯವಾಗುತ್ತದೆ ಎಂದಿದ್ದಾರೆ.

Bihar crickdet associations demands domestic tournaments after IPL

ಬಿಹಾರ ಕ್ರಿಕೆಟ್ ಮಂಡಳಿಗೆ ನೋಂದಣಿಯನ್ನು ಐಜಿ ರಿಜಿಸ್ಟ್ರಾರ್ ರದ್ದುಗೊಳಿಸಿದ್ದಾರೆ. ಈ ಹಿಂದಿನ ಉನ್ನತ ಅಧಕಾರಿಗಳ ಮಂಡಳಿಯಿಂದ ಬಿಸಿಎಗೆ ದಕ್ಕಿದ್ದ 10. 8 ಕೋಟಿ ರು ಅನುದಾನ ಕೂಡಾ ಅನಧಿಕೃತ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಹೀಗಾಗಿ, ಗೊಂದಲಗಳ ನಡುವೆ ಬಿಹಾರ ಕ್ರಿಕೆಟ್ ಉತ್ತೇಜನ ನೀಡಲು ಆದಿತ್ಯ ವರ್ಮಾ ಅವರನ್ನು ಪ್ರತಿನಿಧಿಯಾಗಿ ಮಂಡಳಿ ಆಯ್ಕೆ ಮಾಡಿದೆ. ಬಿಸಿಸಿಐಯಿಂದ ಮಾನ್ಯತೆ ಪಡೆದರೆ ಬಿಹಾರದಲ್ಲಿ ಬಿಸಿಎ ಪಂದ್ಯಗಳನ್ನು ಎಂದಿನಂತೆ ಆಯೋಜಿಸಬಹುದಾಗಿದೆ.

English summary
Bihar Cricket Associations(BCA) general body on Sunday urged BCCI to conduct domestic tournaments after completion of the league.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X