• search
  • Live TV
ಪಟ್ನಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅತ್ಯಾಚಾರ ಯತ್ನ: ವ್ಯಕ್ತಿಗೆ ಇಡೀ ಹಳ್ಳಿಯ ಮಹಿಳೆಯರ ಬಟ್ಟೆ ತೊಳೆಯುವ ಶಿಕ್ಷೆ

|
Google Oneindia Kannada News

ಪಾಟ್ನಾ, ಸೆಪ್ಟೆಂಬರ್ 24: ಅತ್ಯಾಚಾರಕ್ಕೆ ಯತ್ನಿಸಿದ ವ್ಯಕ್ತಿಗೆ ಬಿಹಾರ ನ್ಯಾಯಾಲಯವು ಜಾಮೀನು ನೀಡಿದ್ದು, ಮಾಡಿದ ಕೃತ್ಯಕ್ಕೆ ಶಿಕ್ಷೆಯನ್ನೂ ಕೂಡ ವಿಧಿಸಿದೆ.

ಆರೋಪಿ 6 ತಿಂಗಳುಗಳ ಕಾಲ ಇಡೀ ಹಳ್ಳಿಯ ಮಹಿಳೆಯರ ಬಟ್ಟೆಯನ್ನು ತೊಳೆಯುವ ಶಿಕ್ಷೆಯನ್ನು ನೀಡಲಾಗಿದೆ. ಕೇವಲ ಬಟ್ಟೆಯನ್ನು ತೊಳೆಯುವುದಷ್ಟೇ ಅಲ್ಲದೆ ಬಟ್ಟೆಗೆ ಇಸ್ರಿಯನ್ನು ಕೂಡ ಹಾಕುವಂತೆ ನ್ಯಾಯಾಲಯ ಹೇಳಿದೆ.

ನಿರ್ಭಯಾ ರೀತಿ ಅತ್ಯಾಚಾರ: ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಸಾವುನಿರ್ಭಯಾ ರೀತಿ ಅತ್ಯಾಚಾರ: ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಸಾವು

20 ವರ್ಷದ ಲಾಲನ್ ಕುಮಾರ್ ಈ ಷರತ್ತಿನನ್ವಯ ಜಾಮೀನು ಪಡೆದ ಆರೋಪಿ. ಆರು ತಿಂಗಳುಗಳ ಕಾಲ ಬಗ್ಗೆ ಒಗೆಯಬೇಕು, ಅದಕ್ಕೆ ಬೇಕಾದ ಡಿಟರ್ಜೆಂಟ್ ಹಾಗೂ ಇತರೆ ವಸ್ತುಗಳನ್ನು ಸ್ವಯಂ ಖರೀದಿಸಬೇಕು ಎಂದು ಷರತ್ತಿನಲ್ಲಿ ಹೇಳಲಾಗಿದೆ. ಗ್ರಾಮದಲ್ಲಿರುವ ಮಹಿಳೆಯರ ಸಂಖ್ಯೆ ಸುಮಾರು 2 ಸಾವಿರ.

ನಿರ್ಭಯಾ ಪ್ರಕರಣದ ಬಳಿಕ ದೇಶದಲ್ಲಿ ಅತ್ಯಾಚಾರ ಪ್ರಕರಣ ಸಂಬಂಧಿತ ಕಾಯ್ದೆ ಬಿಗಿಗೊಂಡಿವೆ. ಆದರೆ ಕೃತ್ಯಗಳು ಕಡಿಮೆಯಾಗಿಲ್ಲ. 2020ರಲ್ಲಿ 28 ಸಾವಿರಕ್ಕೂ ಅಧಿಕ ಪ್ರರಣಗಳು ದಾಖಲಾಗಿವೆ. ಪೊಲೀಸರು ಇವುಗಳ ತಡೆಗೆ ಮುಂದಾಗಿಲ್ಲ ದೌರ್ಜನ್ಯ ಪ್ರಕರಣಗಳನ್ನು ಕೋರ್ಟ್‌ಗೆ ತರಲೂ ವಿಫಲರಾಗಿದ್ದಾರೆ ಎನ್ನುವ ಆರೋಪಗಳಿವೆ.

ಆದೇಶವು ಸಕಾರಾತ್ಮಕ ಪರಿಣಾಮ ಬೀರಿದೆ, ಮಹಿಳೆಯರ ವಿರುದ್ಧ ದೌರ್ಜನ್ಯವು ಚರ್ಚೆಗೆ ಗ್ರಾಸವಾಗಿದೆ. ಇದು ಗಮನಾರ್ಹ ಹೆಜ್ಜೆ, ಸಮಾಜಕ್ಕೆ ಉತ್ತಮ ಸಂದೇಶ ನೀಡಲಿದೆ ಎಂದು ಅಂಜುಂ ಪರ್ವೀನ್ ಹೇಳಿದ್ದಾರೆ.

ಬಿಹಾರದ ಮಜ್ಹೋರ್ ಗ್ರಾಮದ ಕುಮಾರ್ ವೃತ್ತಿಯಿಂದ ಧೋಬಿ, ಅತ್ಯಾಚಾರ ಯತ್ನ ಸೇರಿ ವಿವಿಧ ಆರೋಪಗಳಡಿ ಈ ವರ್ಷದ ಏಪ್ರಿಲ್ ತಿಂಗಳಿನಲ್ಲಿ ಬಂಧಿಸಲಾಗಿತ್ತು.

ಕೋರ್ಟ್‌ನ ತೀರ್ಮಾನವು ಗ್ರಾಮದ ಎಲ್ಲಾ ಮಹಿಳೆಯರಿಗೆ ಸಂತಸ ತಂದಿದೆ ಎಂದು ಗ್ರಾಮ ಪರಿಷತ್‌ನ ಮುಖ್ಯಸ್ಥೆಯಾಗಿರುವ ನಸೀಮಾ ಖತೂನ್ . ಇದು ಐತಿಹಾಸಿಕ ನಿರ್ಧಾರ. ಮಹಿಳೆಯರ ಬಗೆಗಿನ ಗೌರವ ಹೆಚ್ಚಲಿದೆ ಎಂದು ಹೇಳಿದ್ದಾರೆ.

ಬಟ್ಟೆ ತೊಳೆಯುವ ಹಾಗೂ ಇಸ್ತ್ರಿ ಮಾಡುವ ಶಿಕ್ಷೆಯ ಹೊರತಾಗಿ ತಲಾ 10 ಸಾಚಿರರೂಗಳ ಎರಡು ಶ್ಯೂರಿಟಿಗಳನ್ನು ನೀಡುವಂತೆ ನ್ಯಾಯಾಲಯವು ಆರೋಪಿಯನ್ನು ಕೇಳಿದೆ.

ಆರು ತಿಂಗಳ ಬಳಿಕ ಆರೋಪಿಯು ಹಳ್ಳಿಯ ಸರಪಂಚ್ ಅಥವಾ ಸೇವೆಯ ಯಾವುದೇ ಸರ್ಕಾರಿ ಅಧಿಕಾರಿಯಿಂದ ನೀಡಲಾದ ಪ್ರಮಾಣಪತ್ರವನ್ನು ಹಸ್ತಾಂತರಿಸಬೇಕು.

English summary
A court in Bihar’s Madhubani has come up with a shocking solution to punish a man accused of attempted rape of a woman in his village. While granting him bail, the Madhubani court has ordered that the accused will have to wash and iron the clothes of all women in the village for six months, as punishment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X