ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಹಾರ ಚುನಾವಣೆ: ಮತ್ತೆ ಇವಿಎಂ ಮೇಲೆ ದೋಷ ಹೇರಿದ ಕಾಂಗ್ರೆಸ್

|
Google Oneindia Kannada News

ಕಾಂಗ್ರೆಸ್‌ಗೆ ಇವಿಎಂ ಮೇಲಿನ ಅನುಮಾನ ಇನ್ನೂ ಬಗೆಹರಿದಂತಿಲ್ಲ. ಬಿಹಾರ ಚುನಾವಣೆ ಮತ ಎಣಿಕೆ ಅರ್ಧವೂ ಪೂರ್ಣವಾಗುವ ಮುನ್ನವೇ ಇವಿಎಂ ಮೇಲೆ ಆರೋಪ ಆರಂಭಿಸಿದೆ ಕಾಂಗ್ರೆಸ್.

Recommended Video

ಎಲ್ಲಾಕಡೆ ಅರಳಿದ ಕಮಲ!! | BJP | Oneindia Kannada

ಮಧ್ಯಾಹ್ನ ಒಂದು ಗಂಟೆ ವೇಳೆಗೆ ಬಿಹಾರ ಚುನಾವಣೆಯಲ್ಲಿ ಬಿಜೆಪಿ-ಜೆಡಿಯು ಮೈತ್ರಿಕೂಟವು 130 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಆರ್‌ಜೆಡಿ-ಕಾಂಗ್ರೆಸ್‌ ಮಹಾಘಟಬಂಧನ್ ಹಿನ್ನಡೆ ಅನುಭವಿಸಿದೆ.

Live Updates: ಬಿಹಾರದಲ್ಲಿ ಮಹಾಘಟಬಂಧನ್ ವಿರುದ್ಧ ಎನ್ ಡಿಎ ಮುನ್ನಡೆLive Updates: ಬಿಹಾರದಲ್ಲಿ ಮಹಾಘಟಬಂಧನ್ ವಿರುದ್ಧ ಎನ್ ಡಿಎ ಮುನ್ನಡೆ

ಎನ್‌ಡಿಎ ಮೈತ್ರಿಕೂಟವು ಗೆಲುವಿನ ಮ್ಯಾಜಿಕ್ ನಂಬರ್ 123 ಅನ್ನು ದಾಟಿ ಮುನ್ನಡೆ ಸಾಧಿಸುತ್ತಿದ್ದಂತೆ, ಕಾಂಗ್ರೆಸ್‌ನ ಕನಸು ಮತ್ತೆ ಭಗ್ನವಾಗಿದ್ದು, ಹಳೆಯ ವರಸೆಯನ್ನು ಮತ್ತೆ ತೆಗೆದಿದೆ. ಇವಿಎಂ ಮೇಲೆ ಆರೋಪ ಪ್ರಾರಂಭಿಸಿದ್ದಾರೆ ಕಾಂಗ್ರೆಸ್ ಮುಖಂಡರು.

Bihar Congress Leader Udit Raj Raised Doubt About EVM

ಬಿಹಾರದ ಕಾಂಗ್ರೆಸ್ ಮುಖಂಡ ಉದಿತ್ ರಾಜ್ ಟ್ವೀಟ್ ಮಾಡಿದ್ದು, 'ಮಂಗಳ, ಚಂದ್ರನ ಕಡೆಗೆ ಕಳಿಸಲಾಗುವ ಯಂತ್ರಗಳನ್ನು ಭೂಮಿಯಿಂದಲೇ ನಿಯಂತ್ರಿಸದಬಹುದಾದ ಈ ಕಾಲದಲ್ಲಿ ಇವಿಎಂ ಅನ್ನು ಹ್ಯಾಕ್ ಮಾಡುವುದು ಯಾವ ಲೆಕ್ಕ?' ಎಂದು ಅವರು ಇವಿಎಂ ವಿರುದ್ಧ ಅನುಮಾನ ವ್ಯಕ್ತಪಡಿಸಿದ್ದಾರೆ.

ಮತ್ತೊಂದು ಟ್ವೀಟ್‌ನಲ್ಲಿ, 'ಇವಿಎಂ ನಲ್ಲಿ ಮತ ಚಲಾವಣೆ ಆಗಿದ್ದಿದ್ದರೆ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಸೋಲಲು ಸಾಧ್ಯವಿತ್ತೆ?' ಎಂದು ಸಹ ಅವರು ಪ್ರಶ್ನಿಸಿದ್ದಾರೆ.

ಈ ಹಿಂದೆಯೂ ಸಹ ಕಾಂಗ್ರೆಸ್ ಮುಖಂಡರು ಇವಿಎಂ ವಿರುದ್ಧ ಅನುಮಾನ ವ್ಯಕ್ತಪಡಿಸಿದ್ದರು. ಇದು ಬಿಜೆಪಿ ಹಾಗೂ ಕಾಂಗ್ರೆಸ್ ಮಧ್ಯೆ ಭಾರಿ ದೊಡ್ಡ ಹೇಳಿಕೆ-ಪ್ರತಿಹೇಳಿಕೆಗೆ ಕಾರಣವಾಗಿತ್ತು. ಕರ್ನಾಟಕದಲ್ಲಿಯೂ ಹಲವು ಕಾಂಗ್ರೆಸ್ ನಾಯಕರು ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು.

Bihar Congress Leader Udit Raj Raised Doubt About EVM

ಇವಿಎಂ ಅನ್ನು ಹ್ಯಾಕ್ ಮಾಡಲಾಗುವುದಿಲ್ಲ ಎಂದು ಚುನಾವಣೆ ಆಯೋಗವು ಹಲವು ಬಾರಿ ಸ್ಪಷ್ಟನೆ ನೀಡಿದೆ. ಇವಿಎಂ ಹ್ಯಾಕಥಾನ್ ಅನ್ನು ಸಹ ಆಯೋಜಿಸಿತ್ತು. ಆದರೆ ಈಗ ಮತ್ತೊಮ್ಮೆ ಕಾಂಗ್ರೆಸ್ ಮುಖಂಡರು ಇವಿಎಂ ಬಗ್ಗೆ ಅನುಮಾನ ಹೊರಹಾಕಿದ್ದಾರೆ.

ಮಧ್ಯಾಹ್ನ 1:45 ರ ವೇಳೆಗೆ ಬಿಹಾರ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟವು 126 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಮಹಾಘಟಬಂಧನ್ 105 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.

English summary
Bihar congress leader Udit Raj raised doubt about EVM hacking. In Bihar election Congress-RJD trailing behind. ಬಿಹಾರ ಚುನಾವಣೆ: ಮತ್ತೆ ಇವಿಎಂ ಮೇಲೆ ದೋಷ ಹೇರಿದ ಕಾಂಗ್ರೆಸ್
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X