ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Just in:ಉಪರಾಷ್ಟ್ರಪತಿ ಆಗುವ ಆಸೆ; ಬಿಜೆಪಿ ಹೇಳಿಕೆ ಜೋಕ್ ಎಂದ ನಿತೀಶ್

|
Google Oneindia Kannada News

ಪಾಟ್ನಾ, ಆಗಸ್ಟ್ 11: ನಿತೀಶ್ ಕುಮಾರ್ ಅವರನ್ನು ಉಪರಾಷ್ಟ್ರಪತಿ ಮಾಡದ ಕಾರಣ ಬಿಜೆಪಿ ಮತ್ತು ಜೆಡಿ(ಯು) ನಡುವಿನ ಜಟಾಪಟಿಗೆ ಕಾರಣ ಎಂಬ ಬಿಜೆಪಿ ನಾಯಕ ಸುಶೀಲ್ ಮೋದಿ ಅವರ ಹೇಳಿಕೆಯನ್ನು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಗುರುವಾರ ತಳ್ಳಿಹಾಕಿದ್ದಾರೆ.

ಈ ಹೇಳಿಕೆ ಸಂಪೂರ್ಣ ಬೋಗಸ್ ಎಂದು ಬಣ್ಣಿಸಿದ ನಿತೀಶ್ ಕುಮಾರ್, "ಇದು ತಮಾಷೆಯೇ? ನನಗೆ ಅಂತಹ ಆಸೆ ಇಲ್ಲ. ನಾವು ರಾಷ್ಟ್ರಪತಿ ಮತ್ತು ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಗಳನ್ನು ಬೆಂಬಲಿಸಿದ್ದೇವೆ. ನಾನು ಉಪರಾಷ್ಟ್ರಪತಿಯಾಗಲು ಬಯಸುವುದು ತಮಾಷೆಯಾಗಿದೆ" ಎಂದು ಎಂಟನೇ ಬಾರಿಗೆ ಬಿಹಾರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಒಂದು ದಿನದ ಹೇಳಿದ್ದಾರೆ.

ನಿತೀಶ್ ಕುಮಾರ್ ಅವರನ್ನು ಉಪರಾಷ್ಟ್ರಪತಿ ಮಾಡಬೇಕೆಂದು ಜನತಾ ದಳ (ಯುನೈಟೆಡ್) ನಾಯಕರು ತಮ್ಮ ಬಳಿಗೆ ಬಂದಿದ್ದರು ಎಂದು ಸುಶೀಲ್ ಮೋದಿ ನಿನ್ನೆ ಹೇಳಿದರು. ನಿತೀಶ್ ಕುಮಾರ್ ದೆಹಲಿ ರಾಜಕಾರಣಕ್ಕೆ ಹೋದರೆ ಸುಶೀಲ್ ಮೋದಿ ಬಿಹಾರ ಮುಖ್ಯಮಂತ್ರಿಯಾಗಬಹುದು ಎಂಬ ಯೋಜನೆಯೊಂದಿಗೆ ಬಂದಿದ್ದರು ಎಂದಿದ್ದರು.

Bihar CM Nitish Kumar rejected BJPs Vice Presidents post claims

'ನಿತೀಶ್ ಕುಮಾರ್ ಅವರನ್ನು ಉಪರಾಷ್ಟ್ರಪತಿ ಮಾಡಿ ಮತ್ತು ಬಿಹಾರದಲ್ಲಿ ನೀವೇ ಆಡಳಿತ ನಡೆಸಬೇಕು' ಎಂದು ಕೆಲವು ಜೆಡಿಯು ಜನರು ಹೇಳಲು ಬಂದಿದ್ದರು ಎಂದು ಮೋದಿ ಸುದ್ದಿಗಾರರಿಗೆ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್, 'ನಾವು ಎರಡು ಚುನಾವಣೆ ಮುಗಿಯುವುದನ್ನು ಕಾಯುತ್ತಿದ್ದೆವು. ಬಳಿಕ ನಾವು ಸಭೆ ನಡೆಸಿದ್ದೇವೆ. ಅವರು ನನ್ನ ಬಗ್ಗೆ ಜಾಸ್ತಿ ಮಾತನಾಡಲಿ, ಆಗ ಅವರಿಗೆ ಸ್ಥಾನ ಸಿಗಬಹುದು' ಎಂದು ಹೇಳಿದ್ದಾರೆ.

ಜೆಡಿಯು ರಾಷ್ಟ್ರೀಯ ಅಧ್ಯಕ್ಷ ರಾಜೀವ್ ರಂಜನ್ ಲಾಲನ್ ಸಿಂಗ್ ಕೂಡ ನಿನ್ನೆ ಮೋದಿ ಆರೋಪವನ್ನು ತಳ್ಳಿ ಹಾಕಿದ್ದರು.

Recommended Video

Hubballi ಯ Engineering collegeನ ಕಿರಾತಕರು ಮಾಡಿದ್ದೇನು ಗೊತ್ತಾ...? | OneIndia Kannada

ಎನ್‌ಡಿಎ ಮೈತ್ರಿ ಸರ್ಕಾರದ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಆರ್‌ಜೆಡಿ, ಕಾಂಗ್ರೆಸ್ ಮತ್ತು ಇತರ ಪಕ್ಷಗಳೊಂದಿಗೆ ಹೊಸ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ದಿನದ ನಂತರ ನಿತೀಶ್ ಕುಮಾರ್ ಬುಧವಾರ 8ನೇ ಬಾರಿಗೆ ಬಿಹಾರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಉಪಮುಖ್ಯಮಂತ್ರಿಯಾಗಿದ್ದಾರೆ.

English summary
Bihar Chief Minister Nitish Kumar has rejected claims by BJP MP Sushil Kumar Modi's not made the Vice President. he says It's a joke about me. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X