ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹತ್ವದ ನಡೆ: ವೃದ್ಧ ತಂದೆ-ತಾಯಿಯ ಹೊಣೆ ಹೊರದ ಮಕ್ಕಳಿಗೆ ಜೈಲೇ ಗತಿ!

|
Google Oneindia Kannada News

ಪಾಟ್ನಾ, ಜೂನ್ 12: ಬೇರೆ ಬೇರೆ ಕಾರಣಗಳನ್ನು ನೀಡಿ ವೃದ್ಧ ತಂದೆ-ತಾಯಿಯ ಜವಾಬ್ದಾರಿಯನ್ನು ಹೊರದ ಮಕ್ಕಳಿಗೆ ಜೈಲು ಶಿಕ್ಷೆ ವಿಧಿಸುವಂಥ ಮಹತ್ವದ ಕಾನೂನನ್ನು ಬಿಹಾರ ಸರ್ಕಾರ ಜಾರಿಗೆ ತಂದಿದೆ.

ತಮ್ಮ ತಂದೆ-ತಾಯಿಯನ್ನು ಇಳಿ ವಯಸ್ಸಿನಲ್ಲಿ ಮನೆಯಿಂದ ಆಚೆ ಹಾಕುವ ಅಥವಾ ಮನೆಯಲ್ಲೇ ಇಟ್ಟುಕೊಂಡರೂ ಅವರ ಮೇಲೆ ಸರಿಯಾಗಿ ಕಾಳಜಿ ತೋರದೆ, ಅವರ ಹೊಣೆಯನ್ನು ಹೊತ್ತುಕೊಳ್ಳದ ಮಕ್ಕಳಿಗೆ ಜೈಲು ಶಿಕ್ಷೆಯನ್ನು ವಿಧಿಸಲು ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಬಿಹಾರ ಸರ್ಕಾರ ಮುಂದಾಗಿದೆ.

ಪಾಲಕರನ್ನು ಪೋಷಿಸದ ನೌಕರರ ಸಂಬಳ ಕಡಿತ: ಅಸ್ಸಾಂನಲ್ಲಿ ಹೊಸ ಕಾಯ್ದೆ ಪಾಲಕರನ್ನು ಪೋಷಿಸದ ನೌಕರರ ಸಂಬಳ ಕಡಿತ: ಅಸ್ಸಾಂನಲ್ಲಿ ಹೊಸ ಕಾಯ್ದೆ

"ಮಕ್ಕಳು ತಮ್ಮನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ" ಎಂದು ತಂದೆ-ತಾಯಿ ದೂರು ನೀಡಿದಲ್ಲಿ ಮಕ್ಕಳನ್ನು ಬಂಧಿಸಲು ಈ ನಿಯಮ ಅನುಮತಿ ನೀಡಿದೆ.

Bihar: Children who fail to take care of their elderly parents will be jailed

"ಹಿರಿಯರ ಬಗ್ಗೆ ಕಾಳಜಿ ತೋರುವುದು ಅಥವಾ ಅವರ ಹೊಣೆಯನ್ನು ಹೊತ್ತುಕೊಳ್ಳುವುದನ್ನು ಕಾನೂನಿನ ಮೂಲಕ ಮಾಡುವ ಅಗತ್ಯವಿಲ್ಲ. ಅದು ಸಂಸ್ಕಾರದಿಂದಲೇ ಬರಬೇಕು. ಅದು ನಮ್ಮ ಸಂಸ್ಕೃತಿ ಕೂಡ. ಆದರೆ ಇಂದು ಕಾಲ ಬದಲಾಗಿದ್ದು, ಮಕ್ಕಳು ತಂದೆ-ತಾಯಿಯರ ಬಗ್ಗೆ ಗೌರವ ತೋರದೆ, ಅವರನ್ನು ಹೊರಗಟ್ಟುವ, ಅಥವಾ ಅವರನ್ನು ಸರಿಯಾಗಿ ನೋಡಿಕೊಳ್ಳದಿರುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂಥದೊಂದು ನಿಯಮವನ್ನು ಜಾರಿಗೆ ತರಲು ಬಿಹಾರ ಸರ್ಕಾರ ನಿರ್ಧರಿಸಿದೆ" ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.

English summary
Nitish Kumar-led Bihar government has decided on strict action against those who fail to take care of their elderly parents.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X