ಸಚಿವ ಸಂಪುಟ: ಗೃಹ ಖಾತೆ ನಿತೀಶ್‌ಗೆ, ತಾರ್ ಕಿಶೋರರಿಗೆ ವಿತ್ತ
ಬಿಹಾರದ ನೂತನ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಅವರು 7ನೇ ಬಾರಿಗೆ ಇಂದು ಪ್ರತಿಜ್ಞಾವಿಧಿ ಸ್ವೀಕರಿಸಿದರು. ಸತತ ನಾಲ್ಕನೇ ಅವಧಿಗೆ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ್ದಾರೆ. ಉತ್ತರ ಪ್ರದೇಶ ಮಾದರಿಯಲ್ಲಿ ಇಬ್ಬರು ಉಪ ಮುಖ್ಯಮಂತ್ರಿಗಳನ್ನು ಬಿಹಾರ ಸಚಿವ ಸಂಪುಟ ಹೊಂದಿದೆ. ನಿತೀಶ್ ಅವರ ನಂತರ ತಾರ್ ಕಿಶೋರ್ ಪ್ರಸಾದ್, ರೇಣು ದೇವಿ ಅವರು ಪ್ರಮಾಣ ವಚನ ಸ್ವೀಕರಿಸಿದ್ದು, ಇಬ್ಬರು ಕೂಡಾ ಉಪ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ.
ಜೆಡಿಯು ಕಡಿಮೆ ಸ್ಥಾನ(43)ಗಳನ್ನು ಗಳಿಸಿದ್ದರೂ ಚುನಾವಣಾ ಪೂರ್ವ ಒಪ್ಪಂದದಂತೆ ನಿತೀಶ್ ಕುಮಾರ್ ಅವರಿಗೆ ಸಿಎಂ ಸ್ಥಾನವನ್ನು ಬಿಜೆಪಿ ಬಿಟ್ಟುಕೊಟ್ಟಿದೆ. ಬಿಜೆಪಿ 74 ಸ್ಥಾನ ಗೆದ್ದಿದ್ದು, ಸಚಿವ ಸಂಪುಟದಲ್ಲಿ ಹೆಚ್ಚಿನ ಸ್ಥಾನ ಗಳಿಸಿದೆ. ಒಟ್ಟಾರೆ, ಸಿಎಂ ಸೇರಿ 37 ಮಂದಿ ತನಕ ನಿತೀಶ್ ಸಂಪುಟ ಸಂಖ್ಯೆ ಏರಿಸಬಹುದು.
ಸುಶೀಲ್ ಮೋದಿಗೆ ದಕ್ಕದ ಡಿಸಿಎಂ ಸ್ಥಾನ, ಕೇಂದ್ರಕ್ಕೆ ಬುಲಾವ್?
ನಿತೀಶ್ ಕುಮಾರ್ ಅವರು ಗೃಹ ಖಾತೆ ತಮ್ಮ ಬಳಿ ಇಟ್ಟುಕೊಂಡಿದ್ದರೆ, ಉಪ ಮುಖ್ಯಮಂತ್ರಿ ತಾರ್ ಕಿಶೋರ್ ಪ್ರಸಾದ್ ಅವರಿಗೆ ವಿತ್ತ ಖಾತೆ ಲಭಿಸಿದೆ.
* ನಿತೀಶ್ ಕುಮಾರ್: ಮುಖ್ಯಮಂತ್ರಿ-ಗೃಹ, ಆಡಳಿತ, ಗುಪ್ತಚರ, ಇನ್ನಿತರ ಎಲ್ಲಾ ಖಾತೆಗಳು
* ತಾರ್ ಕಿಶೋರ್ ಪ್ರಸಾದ್: ಉಪ ಮುಖ್ಯಮಂತ್ರಿ -ವಿತ್ತ, ವಾಣಿಜ್ಯ ತೆರಿಗೆ, ಪರಿಸರ ಮತ್ತು ಅರಣ್ಯ, ಐಟಿ, ವಿಪತ್ತು ನಿರ್ವಹಣೆ, ನಗರಾಭಿವೃದ್ಧಿ
* ರೇಣು ದೇವಿ- ಉಪ ಮುಖ್ಯಮಂತ್ರಿ-ಪಂಚಾಯತ್ ರಾಜ್, ಹಿಂದುಳಿದ ಜಾತಿ ಅಭಿವೃದ್ಧಿ, ಅತಿ ಹಿಂದುಳಿದ ವರ್ಗ ಕಲ್ಯಾಣ ಹಾಗೂ ಕಲ್ಯಾಣ
Profile: ಬಿಹಾರದ ನೂತನ ಉಪ ಮುಖ್ಯಮಂತ್ರಿ ರೇಣು ದೇವಿ
* ವಿಜಯ್ ಚೌಧರಿ-ಗ್ರಾಮೀಣ ಇಂಜಿನಿಯರಿಂಗ್, ಗ್ರಾಮೀಣಾಭಿವೃದ್ಧಿ, ಜಲ ಸಂಪನ್ಮೂಲ, ವಾರ್ತಾ ಮತ್ತು ಪ್ರಸರಣ, ಸಂಸದೀಯ ವ್ಯವಹಾರ
* ಶೀಲ ಮಂಡಲ್ (ಜೆಡಿಯು)- ಸಾರಿಗೆ
* ಮಂಗಲ್ ಪಾಂಡೆ- ಆರೋಗ್ಯ, ರಸ್ತೆ, ಕಲೆ ಮತ್ತು ಸಂಸ್ಕೃತಿ
* ರಾಮ್ ಪ್ರೀತ್ ಪಾಸ್ವಾನ್: ಸಾರ್ವಜನಿಕ ಆರೋಗ್ಯ ಇಂಜಿನಿಯರಿಂಗ್ ಇಲಾಖೆ
* ಅಮರೇಂದ್ರ ಪ್ರತಾಪ್ ಸಿಂಗ್: ಕೃಷಿ, ಸಹಕಾರ, ಸಕ್ಕರೆ
* ಜೀವೇಶ್ ಮಿಶ್ರಾ: ಪ್ರವಾಸೋದ್ಯಮ, ಕಾರ್ಮಿಕ, ಗಣಿಗಾರಿಕೆ
* ರಾಮ್ ಸೂರತ್ ರಾಯ್-ಕಂದಾಯ, ಕಾನೂನು
* ಬಿಜೇಂದ್ರ ಯಾದವ್: ಇಂಧನ, ಯೋಜನಾ, ಆಹಾರ ಮತ್ತು ಸಂಸ್ಕರಣಾ
* ಮೆವಾಲಾಲ್ ಚೌಧರಿ: ಶಿಕ್ಷಣ
* ಅಶೋಕ್ ಚೌಧರಿ: ಅಲ್ಪಸಂಖ್ಯಾತ ಹಾಗೂ ಸಮಾಜ ಕಲ್ಯಾಣ ಅಭಿವೃದ್ಧಿ, ಕಟ್ಟಡ ನಿರ್ಮಾಣ ಇಲಾಖೆ
* ಸಂತೋಷ್ ಮಾಂಝಿ: ಸಣ್ಣ ನೀರಾವರಿ ಮತ್ತು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಕಲ್ಯಾಣ.