• search
  • Live TV
ಪಟ್ನಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಿಹಾರ ಸಂಪುಟ ವಿಸ್ತರಣೆ, 17 ಸಚಿವರ ಸೇರ್ಪಡೆ: ಬಿಜೆಪಿಗೆ ಸಂದೇಶ ರವಾನಿಸಿದ ನಿತೀಶ್

|
Google Oneindia Kannada News

ಪಟ್ನಾ, ಫೆಬ್ರವರಿ 9: ನವೆಂಬರ್‌ನಲ್ಲಿ ವಿಧಾನಸಭೆ ಚುನಾವಣೆಯ ಫಲಿತಾಂಶ ಬಂದು ಸರ್ಕಾರ ರಚನೆಯಾಗಿ ಸುಮಾರು ಮೂರು ತಿಂಗಳ ಬಳಿಕ ಕೊನೆಗೂ ಬಿಹಾರದಲ್ಲಿ ನಿತೀಶ್ ಕುಮಾರ್ ಸರ್ಕಾರದ ಸಂಪುಟ ವಿಸ್ತರಣೆಯಾಗಿದೆ. ಎನ್‌ಡಿಎ ಮೈತ್ರಿಕೂಟದಲ್ಲಿ ರಚನೆಯಾಗಿರುವ ಸರ್ಕಾರಕ್ಕೆ 17 ನೂತನ ಸಚಿವರನ್ನು ಮಂಗಳವಾರ ಸೇರ್ಪಡೆ ಮಾಡಲಾಗಿದೆ. ನಿತೀಶ್ ಕುಮಾರ್ ಅವರಿಗೆ ಸಿಎಂ ಹುದ್ದೆ ಬಿಟ್ಟುಕೊಟ್ಟರೂ ಸರ್ಕಾರ ಮೂಗುದಾರವನ್ನು ತಮ್ಮ ಕೈಯಲ್ಲಿ ಇರಿಸಿಕೊಳ್ಳಲು ಬಯಸಿದ್ದ ಬಿಜೆಪಿಗೆ ಜೆಡಿಯು ಪ್ರಬಲ ಸಂದೇಶ ರವಾನಿಸಿದೆ.

ಜನರಿಗೆ ಲಸಿಕೆ ಪಡೆಯುವಂತೆ ಮಾಡಲು ರಷ್ಯಾದಲ್ಲೊಂದು ಹೊಸ ತಂತ್ರ ಜನರಿಗೆ ಲಸಿಕೆ ಪಡೆಯುವಂತೆ ಮಾಡಲು ರಷ್ಯಾದಲ್ಲೊಂದು ಹೊಸ ತಂತ್ರ

17 ಸಚಿವರ ಪೈಕಿ ಬಿಜೆಪಿಗೆ ಬಹುಪಾಲು ಸ್ಥಾನಗಳು ಸಿಕ್ಕಿವೆ. ಬಿಜೆಪಿಯ 9 ಮತ್ತು ಜೆಡಿಯುದ 8 ಶಾಸಕರಿಗೆ ಸಚಿವ ಸ್ಥಾನ ನೀಡಲಾಗಿದೆ. ಆದರೆ ಪ್ರಮುಖ ಹುದ್ದೆಗಳಾದ ಗೃಹ ಖಾತೆ, ಸಿಬ್ಬಂದಿ, ಶಿಕ್ಷಣ, ಗ್ರಾಮೀಣ ಅಭಿವೃದ್ಧಿ, ಜಲ ಸಂಪನ್ಮೂಲ, ಗ್ರಾಮೀಣ ಕಾರ್ಯ ಮುಂತಾದವು ಜೆಡಿಯುದಲ್ಲಿಯೇ ಉಳಿದುಕೊಂಡಿದೆ.

ಸಂಪುಟ ವಿಸ್ತರಣೆಯಿಂದ ಬಿಜೆಪಿಯು 16 ಸಚಿವ ಸ್ಥಾನ ಪಡೆದಿದ್ದು, 22 ಖಾತೆಗಳು ಅವರ ಬಳಿ ಇವೆ. ಇನ್ನು ಜೆಡಿಯುದ 13 ಸಚಿವರು 21 ಖಾತೆಗಳನ್ನು ನಿಭಾಯಿಸಲಿದ್ದಾರೆ. ಮಾಜಿ ಸಿಎಂ ಜಿತನ್ ರಾಮ್ ಮಾಂಝಿ ಅವರ ಹಿಂದೂಸ್ತಾನ್ ಅವಾಮ್ ಮೋರ್ಚಾ ಮತ್ತು ವಿಕಾಸ್‌ಶೀಲ್ ಇನ್ಸಾನ್ ಪಾರ್ಟಿಗಳಿಗೆ ತಲಾ ಒಂದೊಂದು ಸಚಿವ ಸ್ಥಾನ ನೀಡಲಾಗಿದೆ. ನಿತೀಶ್ ಅವರ ಸಂಪುಟದಲ್ಲಿನ ಸಚಿವರ ಸಂಖ್ಯೆ 34ಕ್ಕೆ ಏರಿಕೆಯಾಗಿದೆ. ಮುಂದೆ ಓದಿ.

ಸರ್ಕಾರದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ನಿಂದನೆ: ಕಠಿಣ ಕ್ರಮಕ್ಕೆ ನಿತೀಶ್ ಆದೇಶಸರ್ಕಾರದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ನಿಂದನೆ: ಕಠಿಣ ಕ್ರಮಕ್ಕೆ ನಿತೀಶ್ ಆದೇಶ

ಶಹನವಾಜ್ ಹುಸೇನ್‌ಗೆ ಕೈಗಾರಿಕೆ?

ಶಹನವಾಜ್ ಹುಸೇನ್‌ಗೆ ಕೈಗಾರಿಕೆ?

ನಿರೀಕ್ಷೆಯಂತೆಯೇ ಕೇಂದ್ರದ ಮಾಜಿ ಸಚಿವ ಮತ್ತು ಬಿಜೆಪಿ ರಾಷ್ಟ್ರೀಯ ವಕ್ತಾರ ಸಯ್ಯದ್ ಶಹನವಾಜ್ ಹುಸೇನ್ ಅವರು ನಿತೀಶ್ ಸರ್ಕಾರಕ್ಕೆ ಸೇರ್ಪಡೆಯಾಗಿದ್ದಾರೆ. ಇತ್ತೀಚೆಗಷ್ಟೇ ಬಿಹಾರ ವಿಧಾನಪರಿಷತ್‌ನಿಂದ ಆಯ್ಕೆಯಾಗಿರುವ ಹುಸೇನ್ ಅವರಿಗೆ ಕೈಗಾರಿಕೆ ಖಾತೆ ನೀಡಲಾಗಿದೆ ಎಂದು ವರದಿಯಾಗಿದೆ. ಆದರೆ ಬಿಹಾರದಲ್ಲಿ ಕೈಗಾರಿಕೆಗಳ ಸಂಖ್ಯೆ ತೀರಾ ಕಡಿಮೆ. ಹೀಗಾಗಿ ಹುಸೇನ್ ಅವರಿಗೆ ಪ್ರಮುಖ ಖಾತೆ ಸಿಗುವ ನಿರೀಕ್ಷೆ ಹೊಂದಿದ್ದ ಬಿಜೆಪಿಗೆ ಹಿನ್ನಡೆಯಾಗಿದೆ. ಉಪ ಮುಖ್ಯಮಂತ್ರಿ ರೇಣು ದೇವಿ ಅವರಿಗೆ ವಿಪತ್ತು ನಿರ್ವಹಣಾ ಖಾತೆ ನೀಡಲಾಗಿದೆ. ಆದರೆ ಇನ್ನೂ ಅಧಿಕೃತವಾಗಿ ಖಾತೆಗಳ ಘೋಷಣೆ ಮಾಡಿಲ್ಲ.

ಬಿಜೆಪಿಯಲ್ಲಿ ಹೊಸ ಮುಖಗಳು

ಬಿಜೆಪಿಯಲ್ಲಿ ಹೊಸ ಮುಖಗಳು

ಕಳೆದ ಸಾಲಿನ ನಿತೀಶ್ ಸಂಪುಟದಲ್ಲಿದ್ದ ಸಚಿವರ ಪೈಕಿ ಬಿಜೆಪಿ ಈ ಬಾರಿ ಮಂಗಲ್ ಪಾಂಡೆ ಮತ್ತು ಪ್ರಮೋದ್ ಕುಮಾರ್ ಅವರಿಗೆ ಮಾತ್ರ ಸಚಿವ ಸ್ಥಾನವನ್ನು ಉಳಿಸಿಕೊಂಡಿದೆ. ಉಳಿದಂತೆ ಹೊಸ ಮುಖಗಳಿಗೆ ಮಣೆ ಹಾಕಿದೆ. ಸಇನ್ನೊಂದಡೆ ಜೆಡಿಯು ಏಳು ಮಂದಿ ಹಳೆ ಹುಲಿಗಳನ್ನು ಮತ್ತೆ ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡಿದೆ.

ಪ್ರತಿಭಟನೆ ಮಾಡ್ತೀರಾ? ಸಾಮಾಜಿಕ ತಾಣದಲ್ಲಿ ಪೋಸ್ಟ್ ಹಾಕ್ತೀರಾ?: ಕೆಲಸಕ್ಕೆ ಕುತ್ತು ಬರಬಹುದು ಎಚ್ಚರ!ಪ್ರತಿಭಟನೆ ಮಾಡ್ತೀರಾ? ಸಾಮಾಜಿಕ ತಾಣದಲ್ಲಿ ಪೋಸ್ಟ್ ಹಾಕ್ತೀರಾ?: ಕೆಲಸಕ್ಕೆ ಕುತ್ತು ಬರಬಹುದು ಎಚ್ಚರ!

ಎರಡು ಅಚ್ಚರಿಯ ಸೇರ್ಪಡೆ

ಎರಡು ಅಚ್ಚರಿಯ ಸೇರ್ಪಡೆ

ಪಕ್ಷೇತರನಾಗಿ ಸ್ಪರ್ಧಿಸಿ ಚಕೈ ಕ್ಷೇತ್ರದಿಂದ ಗೆದ್ದು ಎನ್‌ಡಿಎಗೆ ಬೆಂಬಲ ನೀಡಿರುವ ಸುಮಿತ್ ಸಿಂಗ್ ಅವರಿಗೆ ಜೆಡಿಯು ತನ್ನ ಕೋಟಾದಲ್ಲಿ ಸಚಿವ ಸ್ಥಾನ ನೀಡಿದೆ. ಹಾಗೆಯೇ ಚೈನ್ಪುರ ಕ್ಷೇತ್ರದಿಂದ ಬಿಎಸ್‌ಪಿ ಅಭ್ಯರ್ಥಿಯಾಗಿ ಗೆದ್ದಿದ್ದ ಜಮಾ ಖಾನ್, ಜೆಡಿಯು ಸೇರ್ಪಡೆಯಾಗಿದ್ದರು. ಅವರನ್ನೂ ಜೆಡಿಯು ಸಚಿವರ ಸಾಲಿನಲ್ಲಿ ಕೂರಿಸಿದೆ. ಸಂಪುಟದಲ್ಲಿ ಜೆಡಿಯುದಿಂದ ಜಮಾ ಖಾನ್ ಏಕೈಕ ಮುಸ್ಲಿಂ ಸಚಿವರಾಗಿದ್ದರೆ, ಸುಮಿತ್ ಸಿಂಗ್ ಅತಿ ಕಿರಿಯ ಸಚಿವರೆನಿಸಿದ್ದಾರೆ. ಮೊದಲ ಬಾರಿ ಶಾಸಕರಾಗಿರುವ ಮಾಜಿ ಡಿಜಿ ಸುನಿಲ್ ಕುಮಾರ್ ಮತ್ತು ಜಯಂತ್ ರಾಜ್ ಅವರಿಗೆ ಕೂಡ ಜೆಡಿಯು ಅವಕಾಶ ನೀಡಿದೆ.

ಸಚಿವರಾದ ಪ್ರಮುಖರು

ಸಚಿವರಾದ ಪ್ರಮುಖರು

ನಿತಿನ್ ನಬಿನ್, ಸಾಮ್ರಾಟ್ ಚೌಧರಿ, ನೀರಜ್ ಕುಮಾರ್ ಸಿಂಗ್ ಬಬ್ಲು, ಜಾನಕ್ ರಾಮ್, ಸುಭಾಷ್ ಸಿಂಗ್, ಅಲೋಕ್ ರಂಜನ್ ಝಾ ಮತ್ತು ನಾರಾಯಣ್ ಪ್ರಸಾದ್ ಬಿಜೆಪಿಯಿಂದ ಸಚಿವರಾದ ಪ್ರಮುಖರು. ಸಂಜಯ್ ಕುಮಾರ್ ಝಾ, ಶ್ರವಣ್ ಕುಮಾರ್, ಮದನ್ ಸಾಹ್ನಿ, ಲೆಸಿ ಸಿಂಗ್ ಮತ್ತು ಸುನಿಲ್ ಕುಮಾರ್ ಜೆಡಿಯುದಿಂದ ಸಚಿವ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ರಾಜ್ಯಪಾಲ ಫಗು ಚೌಹಾಣ್ ಅವರು ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂತನ ಸಚಿವರಿಗೆ ಪ್ರಮಾಣವಚನ ಭೋದಿಸಿದರು.

English summary
Bihar Cabinet Expansion: Nitish Kumar has extended his cabinet with 17 new ministers on Tuesday including BJPs Syed Shahnawaz Hussain.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X