• search
  • Live TV
ಪಟ್ನಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಿಹಾರದ 136 ಶಾಸಕರ ವಿರುದ್ಧ ಕ್ರಿಮಿನಲ್ ಕೇಸ್: ಕುತೂಹಲಕಾರಿ ಮಾಹಿತಿ

|

ಪಾಟ್ನಾ, ಸಪ್ಟೆಂಬರ್.14: ಬಿಹಾರ ವಿಧಾನಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಅಣಿಯಾಗುತ್ತಿವೆ. ರಾಜ್ಯದ 240 ಶಾಸಕರ ಪೈಕಿ 136 ಶಾಸಕರ ವಿರುದ್ಧ ಅಪರಾಧ ಪ್ರಕರಣಗಳು ಬಾಕಿ ಉಳಿದಿವೆ ಎಂಬ ಅಂಕಿ-ಅಂಶಗಳನ್ನು ಪ್ರಜಾಪ್ರಭುತ್ವ ಸುಧಾರಣಾ ಸಂಘವು ತಿಳಿಸಿದೆ.

ಬಿಹಾರದಲ್ಲಿ ಅಪರಾಧ ಪ್ರಕರಣಗಳನ್ನು ಎದುರಿಸುತ್ತಿರುವ 136 ಶಾಸಕರಲ್ಲಿ 94 ಶಾಸಕರ ವಿರುದ್ಧ ಗಂಭೀರವಾದ ಕ್ರಿಮಿನಲ್ ಕೇಸ್ ಗಳಿವೆ ಎಂದು ಪ್ರಜಾಪ್ರಭುತ್ವ ಸುಧಾರಣಾ ಸಂಘದ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಬಿಹಾರದಲ್ಲಿ ಸಿಎಂ ನಿತೀಶ್ ಕುಮಾರ್ ರಿಗೆ ಪ್ರಧಾನಿ ಫುಲ್ ಮಾರ್ಕ್ಸ್!

11 ಶಾಸಕರ ವಿರುದ್ಧ ಭಾರತೀಯ ದಂಡ ಸಂಹಿತೆ 302ರ ಅಡಿಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಅಲ್ಲದೇ 30 ಶಾಸಕರ ವಿರುದ್ಧ ಐಪಿಸಿ ಸೆಕ್ಷನ್ 307ರ ಅಡಿ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಐವರು ಶಾಸಕರ ವಿರುದ್ಧ ಮಹಿಳೆಯ ಮೇಲಿನ ಅಪರಾಧಗಳಿಗೆ ಸಂಬಂಧಿಸಿದ ಪ್ರಕರಣ ದಾಖಲಾಗಿದ್ದು, ಈ ಪೈಕಿ ಒಬ್ಬ ಶಾಸಕರ ವಿರುದ್ಧ ಐಪಿಸಿ ಸೆಕ್ಷನ್ 376ರ ಅಡಿ ಅತ್ಯಾಚಾರ ಪ್ರಕರಣ ದಾಖಲಾಗಿದೆ.

ಯಾವ ಪಕ್ಷದ ಶಾಸಕರ ವಿರುದ್ಧ ಎಷ್ಟು ಪ್ರಕರಣ?

ಯಾವ ಪಕ್ಷದ ಶಾಸಕರ ವಿರುದ್ಧ ಎಷ್ಟು ಪ್ರಕರಣ?

ಬಿಹಾರದಲ್ಲಿ ಬಹುತೇಕ ಎಲ್ಲ ಪಕ್ಷದ ಶಾಸಕರ ವಿರುದ್ಧವೂ ಕ್ರಿಮಿನಲ್ ಪ್ರಕರಣಗಳಿರುವುದನ್ನು ಸ್ವತಃ ಘೋಷಿಸಿಕೊಂಡಿದ್ದಾರೆ. ಯಾವ ಪಕ್ಷದ ಎಷ್ಟು ಶಾಸಕರು ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿದ್ದಾರೆ ಎನ್ನುವುದರ ಮಾಹಿತಿ ಇಲ್ಲಿದೆ. ಆರ್ ಜೆಡಿ ಪಕ್ಷದ 80ರ ಪೈಕಿ 45 ಶಾಸಕರ ವಿರುದ್ಧ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಜೆಡಿಯುನ 69 ಶಾಸಕರ ಪೈಕಿ 34, ಬಿಜೆಪಿ 54ರ ಪೈಕಿ 34 ಶಾಸಕರು, ಕಾಂಗ್ರೆಸ್ ನ 25 ಶಾಸಕರ ಪೈಕಿ 15 ಶಾಸಕರು, ಲೋಕ ಜನಶಕ್ತಿ ಪಕ್ಷದ ಇಬ್ಬರೂ ಶಾಸಕರು, ಸಿಪಿಎಂನ ಮೂವರೂ ಶಾಸಕರು ಹಾಗೂ ಐವರು ಸ್ವತಂತ್ರ್ಯ ಶಾಸಕರ ಪೈಕಿ ನಾಲ್ವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಯಾವ ಪಕ್ಷದ ಎಷ್ಟು ಶಾಸಕರ ವಿರುದ್ಧ ಗಂಭೀರ ಪ್ರಕರಣ?

ಯಾವ ಪಕ್ಷದ ಎಷ್ಟು ಶಾಸಕರ ವಿರುದ್ಧ ಗಂಭೀರ ಪ್ರಕರಣ?

ಇನ್ನು, ಆರ್ ಜೆಡಿ ಪಕ್ಷದ 80 ಶಾಸಕರ ಪೈಕಿ 33 ಶಾಸಕರು ಗಂಭೀರ ಸ್ವರೂಪದ ಕ್ರಿಮಿನಲ್ ಕೇಸ್ ಗಳನ್ನು ಎದುರಿಸುತ್ತಿರುವ ಬಗ್ಗೆ ಅಫಿಡಿವಿಟ್ ನಲ್ಲಿ ಘೋಷಿಸಿಕೊಂಡಿದ್ದಾರೆ. ಅದರಂತೆ ಜೆಡಿಯುನ 69ರ ಪೈಕಿ 26 ಶಾಸಕರು, ಬಿಜೆಪಿಯ 54ರಲ್ಲಿ 19 ಶಾಸಕರು, ಕಾಂಗ್ರೆಸ್ ನ 25ರಲ್ಲಿ 10 ಶಾಸಕರು, ಎಲ್ ಜೆಪಿಯ ಇಬ್ಬರಲ್ಲಿ ಒಬ್ಬ ಶಾಸಕರು, ಸಿಪಿಐನ ಮೂವರಲ್ಲಿ ಇಬ್ಬರು ಶಾಸಕರು ಮತ್ತು ಸ್ವಾತಂತ್ರ್ಯವಾಗಿ ಸ್ಪರ್ಧಿಸಿ ಗೆದ್ದ ಐವರಲ್ಲಿ ಮೂವರು ಶಾಸಕರು ಗಂಭೀರ ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿದ್ದಾರೆ ಎಂದು ಅಫಿಡಿವಿಟ್ ನಲ್ಲಿ ಸ್ವಯಂಘೋಷಿಸಿದ್ದಾರೆ.

240 ಶಾಸಕರ ಪೈಕಿ 160 ಶಾಸಕರು ಕೋಟ್ಯಧಿಪತಿಗಳು

240 ಶಾಸಕರ ಪೈಕಿ 160 ಶಾಸಕರು ಕೋಟ್ಯಧಿಪತಿಗಳು

ಬಿಹಾರದ 240 ಶಾಸಕರ ಪೈಕಿ 160 ಮಂದಿ ಶಾಸಕರು ಕೋಟ್ಯಾಧಿಪತಿಗೇಳ ಆಗಿದ್ದಾರೆ. ತಮ್ಮ ಆಸ್ತಿ ಮೌಲ್ಯವು ಕೋಟ್ಯಂತರ ರೂಪಾಯಿಗೂ ಹೆಚ್ಚು ಎಂದು ಸ್ವತಃ ಶಾಸಕರೇ ಘೋಷಿಸಿಕೊಂಡಿದ್ದಾರೆ. ಆರ್ ಜೆಡಿಯ 51, ಜೆಡಿಯುನ 51, ಬಿಜೆಪಿಯ 33, ಕಾಂಗ್ರೆಸ್ ನ 17, ಎಲ್ ಜೆಪಿಯ ಇಬ್ಬರು, ಆಲ್ ಇಂಡಿಯಾ ಮಜಿಸ್-ಇ-ಇತ್ತೇಹದುಲ್ ಮುಸ್ಲಿಮೀನ್ ಪಕ್ಷದ ಒಬ್ಬರು ಹಾಗೂ ಐವರು ಸ್ವತಂತ್ರ್ಯ ಶಾಸಕರೆಲ್ಲ ಕೋಟ್ಯಂತರ ರೂಪಾಯಿ ಆಸ್ತಿ ಮೌಲ್ಯವನ್ನು ಘೋಷಿಸಿಕೊಂಡಿದ್ದಾರೆ.

ಬಿಹಾರದಲ್ಲಿ ಶಾಸಕರ ಒಟ್ಟು ಆಸ್ತಿ ಮೌಲ್ಯದ ಸರಾಸರಿ ಪ್ರಮಾಣ

ಬಿಹಾರದಲ್ಲಿ ಶಾಸಕರ ಒಟ್ಟು ಆಸ್ತಿ ಮೌಲ್ಯದ ಸರಾಸರಿ ಪ್ರಮಾಣ

ಪ್ರಸ್ತುತ ಬಿಹಾರದಲ್ಲಿ 240 ಶಾಸಕರ ಸರಾಸರಿ ಆಸ್ತಿ ಮೌಲ್ಯದ ಪ್ರಮಾಣವು 3.06 ಕೋಟಿ ರೂಪಾಯಿ ಆಗಿದೆ. ಆರ್ ಜೆಡಿಯ 80 ಶಾಸಕರ ಸರಾಸರಿ ಆಸ್ತಿ ಮೌಲ್ಯವು 3.02 ಕೋಟಿ ಆಗಿದೆ. ಜೆಡಿಯುನ 69 ಶಾಸಕರ ಸರಾಸರಿ ಆಸ್ತಿ ಮೌಲ್ಯವು 2.79 ಕೋಟಿ, ಬಿಜೆಪಿಯ 54 ಶಾಸಕರ ಸರಾಸರಿ ಆಸ್ತಿ ಮೌಲ್ಯವು 2.38 ಕೋಟಿ, ಕಾಂಗ್ರೆಸ್ ನ 25 ಶಾಸಕರ ಸರಾಸರಿ ಆಸ್ತಿ ಮೌಲ್ಯವು 4.36 ಕೋಟಿ ರೂಪಾಯಿ ಆಗಿದೆ. ಇನ್ನೊಂದೆಡೆ ರಾಜ್ಯದ 46 ಶಾಸಕರು ತಮ್ಮ ಆಸ್ತಿ ಮೌಲ್ಯ ಮತ್ತು ತೆರಿಗೆ ಪಾವತಿ ವಿವರವನ್ನೇ ನೀಡಿಲ್ಲ ಎಂದು ತಿಳಿದು ಬಂದಿದೆ.

ಬಿಹಾರದಲ್ಲಿರುವ ಶಾಸಕರ ಇತರೆ ಮಾಹಿತ

ಬಿಹಾರದಲ್ಲಿರುವ ಶಾಸಕರ ಇತರೆ ಮಾಹಿತ

ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿ ಪ್ರಜಾಪ್ರಭುತ್ವ ಸುಧಾರಣಾ ಸಂಘದ ವರದಿ ಬಿಡುಗಡೆಗೊಳಿಸಿದೆ. ಈ ವರದಿಯಲ್ಲಿ ಶಾಸಕರ ವಯಸ್ಸಿನ ಬಗ್ಗೆಯೂ ಉಲ್ಲೇಖಿಸಲಾಗಿದೆ. ರಾಜ್ಯದಲ್ಲಿನ 128 ಶಾಸಕರು 25 ರಿಂದ 50 ವಯೋಮಾನದವರು ಆಗಿದ್ದು, 112 ಶಾಸಕರು 51 ರಿಂದ 80 ವರ್ಷದವರಾಗಿದ್ದಾರೆ. ಉಳಿದಂತೆ 240 ಶಾಸಕರ ಪೈಕಿ 28 ಮಹಿಳಾ ಶಾಸಕರಿರುವ ಬಗ್ಗೆ ತಿಳಿಸಲಾಗಿದೆ.

English summary
Bihar Assembly Election: 136 MLA's Facing Criminal Cases And 160 MLA's Are Crorepatis. ADR Report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X