ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇವಿಎಂ ಹ್ಯಾಕ್ ಆಗಿದೆ ಎಂದ ಲಂಡನ್ನಿನಿಂದ ಬಂದ ಬಿಹಾರಿ ಪುಷ್ಪಂ

|
Google Oneindia Kannada News

ಪಾಟ್ನ, ನ. 10: ಮುಂದಿನ ಸಿಎಂ ನಾನೇ ಎಂದು ಚುನಾವಣೆ ಘೋಷಣೆಗೂ ಮುನ್ನವೇ ಪೋಸ್ಟರ್ ಹಾಕಿಸಿಕೊಂಡಿದ್ದ ಲಂಡನ್ ರಿಟರ್ನ್ಡ್ ಅಭ್ಯರ್ಥಿ ಪುಷ್ಪ ಪ್ರಿಯ ಚೌಧರಿ ಮುಖಭಂಗ ಅನುಭವಿಸಿದ್ದಾರೆ. ಸೋಲಿನ ಹತಾಶೆಯಿಂದ ಎಲೆಕ್ಟ್ರಾನಿಕ್ ಮತಯಂತ್ರ ಹ್ಯಾಕ್ ಆಗಿದೆ ಎಂದು ಟ್ವೀಟ್ ಮಾಡಿದ್ದಾರೆ. ಮೇಡಂ ಚೆನ್ನಾಗಿ ಜೋಕ್ ಮಾಡುತ್ತೀರಾ, ಇನ್ನಷ್ಟು ಇಂಥ ಜೋಕ್ಸ್ ಹಾಕಿ ಎಂದು ಸಾರ್ವಜನಿಕರು ಗೇಲಿ ಮಾಡಿದ್ದಾರೆ.

ಬಿಹಾರದಲ್ಲಿ ಸಿಎಂ ನಿತೀಶ್ ಕುಮಾರ್ ಅವರಿಗೆ ಸವಾಲು ಹಾಕಿ ತನ್ನನ್ನು ಮುಂದಿನ ಬಿಹಾರ ಸಿಎಂ ಎಂದು ಘೋಷಿಸಿಕೊಂಡಿದ್ದ ಲಂಡನ್ ನಿವಾಸಿ ಯುವತಿ ಪುಷ್ಪಂ ಪ್ರಿಯ ಚೌಧರಿ ಅವರು ಬಿಹಾರದಲ್ಲಿ ಚೆನ್ನಾಗಿ ಪ್ರಚಾರ ನಡೆಸಿದ್ದರು.

Live Updates: ಬಿಹಾರದಲ್ಲಿ ಮಹಾಘಟಬಂಧನ್ ವಿರುದ್ಧ ಎನ್ ಡಿಎ ಮುನ್ನಡೆLive Updates: ಬಿಹಾರದಲ್ಲಿ ಮಹಾಘಟಬಂಧನ್ ವಿರುದ್ಧ ಎನ್ ಡಿಎ ಮುನ್ನಡೆ

ಜೆಡಿಯು ನಾಯಕ ಬಿನೋದ್​ ಚೌಧರಿ ಪುತ್ರಿ ಪುಷ್ಪಂ ಪ್ರಿಯಾ ಅವರು ತನ್ನದೇ ಹೊಸ ಪಕ್ಷ ಪ್ಲೂರಲ್ಸ್(Plurals)ಕಟ್ಟಿಕೊಂಡು ಬಿಹಾರದ ಗಲ್ಲಿ ಗಲ್ಲಿಗಳಲ್ಲಿ ಸಂಚರಿಸಿ ಜನರ ಕಷ್ಟ ಸುಖ ಆಲಿಸಿದ್ದರು.

ಬಿಹಾರಕ್ಕೆ ವೇಗ, ರೆಕ್ಕೆ, ಬದಲಾವಣೆ ಅಗತ್ಯ ಇದೆ. ಬಿಹಾರಕ್ಕೆ ಅತ್ಯುತ್ತಮವಾದದ್ದು ಬೇಕಾಗಿದೆ ಹಾಗೂ ಅದಕ್ಕೆ ಅದು ಅರ್ಹವೂ ಆಗಿದೆ. ಹೀಗಾಗಿ ಅಸಂಬದ್ಧ ರಾಜಕೀಯ ತಿರಸ್ಕರಿಸಿ, ಪ್ಲುರಲ್ಸ್(Plurals)​​​ ಪಕ್ಷಕ್ಕೆ ಸೇರಿ, ಸ್ವಚ್ಛಂದವಾಗಿ ಮುನ್ನಡೆಯಿರಿ ಎಂದಿದ್ದರು. ಹಲವು ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಲ್ಲದೆ ತಾವು ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರು. ಈಗ ಎರಡು ಕ್ಷೇತ್ರಗಳಲ್ಲೂ ಠೇವಣಿ ಕಳೆದುಕೊಂಡಿದ್ದಾರೆ.

ಎರಡು ಕ್ಷೇತ್ರಗಳಲ್ಲೂ ಮುಖಭಂಗ

ಎರಡು ಕ್ಷೇತ್ರಗಳಲ್ಲೂ ಮುಖಭಂಗ

ಬಂಕಿಪುರ ಕ್ಷೇತ್ರದಲ್ಲಿ ಪುಷ್ಪಂ ಪ್ರಿಯ ಚೌಧರಿ ಅವರು ಈ ಸಮಯಕ್ಕೆ( ಸಂಜೆ 6.33) 1991 ಮತ 3.73% ಗಳನ್ನು ಮಾತ್ರ ಗಳಿಸಿದ್ದಾರೆ. ಈ ಕ್ಷೇತ್ರದಲ್ಲಿ ಬಿಜೆಪಿಯ ನಿತಿನ್ ನಬಿನ್ 33025 ಮತ(61.89%) ಗಳಿಸಿ ಮುಂದಿದ್ದು ಗೆಲುವಿನ ನಗೆ ಬೀರಲು ಮುಂದಾಗಿದ್ದಾರೆ. ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಲವ್ ಸಿನ್ಹಾ(ನಟ, ಮಾಜಿ ಸಂಸದ ಶತುಘ್ನ ಸಿನ್ಹಾ ಪುತ್ರ) 15555 ಮತ (29.15%) ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ.

ಬಿಸ್ಫಿ ಕ್ಷೇತ್ರದಲ್ಲಿ ನೋಟಾಗಿಂತ ಕಡಿಮೆ ಮತ

ಬಿಸ್ಫಿ ಕ್ಷೇತ್ರದಲ್ಲಿ ನೋಟಾಗಿಂತ ಕಡಿಮೆ ಮತ

ಬಿಸ್ಫಿ ಕ್ಷೇತ್ರದಲ್ಲಿ ನೋಟಾ 1926 ಮತ ಬಂದಿದ್ದರೆ ಪುಷ್ಪ ಪ್ರಿಯ 947 ಮತ ಮಾತ್ರ ಗಳಿಸಿದ್ದಾರೆ. ಬಿಜೆಪಿಯ ಹರಿಭೂಷಣ್ ಠಾಕೂರ್53220 ಮತ ಗಳಿಸಿದ್ದರೆ, ಆರ್ ಜೆಡಿಯ ಡಾ. ಫಯಾಜ್ ಅಹ್ಮದ್ 52791 ಗಳಿಸಿದ್ದು ಭಾರಿ ಕುತೂಹಲ ಕೆರಳಿಸಿದೆ. ಹರಿಭೂಷಣ್ 46.14% ಮತ ಹಾಗೂ ಫಯಾಜ್ 45.38% ಮತ ಗಳಿಸಿದ್ದು ಮತ ಎಣಿಕೆ ಜಾರಿಯಲ್ಲಿದೆ.

ಮಗಳ ಬೆನ್ನ ಹಿಂದೆ ನಿಲ್ಲದ ಜೆಡಿಯು ನಾಯಕ

ಮಗಳ ಬೆನ್ನ ಹಿಂದೆ ನಿಲ್ಲದ ಜೆಡಿಯು ನಾಯಕ

ಜೆಡಿಯು ನಾಯಕ ಬಿನೋದ್​ ಚೌಧರಿ ಅವರ ಪುತ್ರಿ ಪುಷ್ಪಂ ಪ್ರಿಯಾ ಅವರು ಲಂಡನ್​ ಸ್ಕೂಲ್​ ಆಫ್​ ಎಕಾನಾಮಿಕ್ಸ್​ ಮತ್ತು ರಾಜಕೀಯ ಶಾಸ್ತ್ರ ಅಧ್ಯಯನ ಮಾಡಿದ್ದಾರೆ. ಪುಷ್ಪಮ್ ಬಗ್ಗೆ ಆಕೆ ತಂದೆ ಕೂಡಾ ಹೆಮ್ಮೆಯಿಂದ ಪ್ರತಿಕ್ರಿಯಿಸಿ, ಆಕೆ ವಿದ್ಯಾವಂತೆ ಸ್ವಂತ ನಿರ್ಧಾರ ಕೈಗೊಳ್ಳಲು ಅರ್ಹರಾಗಿದ್ದಾಳೆ, ಆದರೆ, ಪಕ್ಷದ ಹಿರಿಯ ಮುಖಂಡರಿಗೆ ಸವಾಲು ಹಾಕುವುದನ್ನು ಬೆಂಬಲಿಸಲಾರೆ ಎಂದಿದ್ದರು. ಜೆಡಿಯು ವರಿಷ್ಠರು ತೆಗೆದುಕೊಳ್ಳುವ ನಿರ್ಣಯಕ್ಕೆ ನಾನು ಬದ್ಧನಾಗಿರುತ್ತೇನೆ. ಪಕ್ಷದ ವಿರುದ್ಧ ನಾನು ಹೋಗಲಾರೆ ಎಂದು ಪುತ್ರಿಯ ರಾಜಕೀಯಕ್ಕೂ ತಮಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಎಕ್ಸಿಟ್ ಪೋಲ್ ಗಳು ಉಲ್ಟಾ

ಎಕ್ಸಿಟ್ ಪೋಲ್ ಗಳು ಉಲ್ಟಾ

ಕೊರೊನಾವೈರಸ್ ಸೋಂಕು ಹರಡುವಿಕೆ ಆತಂಕದ ನಡುವೆಯೂ ಬಿಹಾರದಲ್ಲಿ 243 ವಿಧಾನಸಭಾ ಸ್ಥಾನಗಳಿಗಾಗಿ ಮೂರು ಹಂತಗಳಲ್ಲಿ ಚುನಾವಣೆ ನಡೆಸಲಾಗಿದ್ದು, ನವೆಂಬರ್ 10ರಂದು ಅಂತಿಮ ಫಲಿತಾಂಶ ಹೊರಬರಲಿದೆ. ಅಕ್ಟೋಬರ್ 28ರ ಮೊದಲ ಹಂತದಲ್ಲಿ ಶೇ.55.69ರಷ್ಟು ಮತದಾನ ನಡೆದಿದೆ. ನವೆಂಬರ್ 03ರ ಎರಡನೇ ಹಂತದಲ್ಲಿ ಶೇ.53.51ರಷ್ಟು ಮತದಾನ ನಡೆದಿದೆ. ಶನಿವಾರ 3ನೇ ಹಂತದಲ್ಲಿ ಶೇ.51ರಷ್ಟು ಮತದಾನ ನಡೆದಿದೆ.

ಎಕ್ಸಿಟ್ ಪೋಲ್ ಗಳ ಸಮೀಕ್ಷೆಗಳ ಸಮೀಕ್ಷೆಯಲ್ಲಿ ತೇಜಸ್ವಿ ಬಣಕ್ಕೆ ಗೆಲುವು ಸಾಧಿಸಲಿದ್ದು, ಆರ್ ಜೆ ಡಿ-ಕಾಂಗ್ರೆಸ್ ಬಣ 133 ಸ್ಥಾನ ಪಡೆಯಲಿದ್ದು, ಎನ್ಡಿಎ 100 ಸ್ಥಾನ ಹಾಗೂ ಇತರೆ 11 ಪಡೆಯಲಿದೆ ಎಂದು ಫಲಿತಾಂಶ ಬಂದಿದೆ.

English summary
Bihar Assembly Elections results 2020:Plurals Party Chief Pushpam Priya says EVMs hacked. London retuned candidate got only 1877 votes so far.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X