ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಹಾರ ಚುನಾವಣೆ ಪ್ರಚಾರ; ಹೆಲಿಕಾಪ್ಟರ್‌ಗೆ ತಗ್ಗಿದ ಬೇಡಿಕೆ!

|
Google Oneindia Kannada News

ಪಾಟ್ನಾ, ಅಕ್ಟೋಬರ್ 16: ಬಿಹಾರ ವಿಧಾನಸಭಾ ಚುನಾವಣೆ ಪ್ರಚಾರದ ಕಣ ರಂಗೇರಿದೆ. ಕೋವಿಡ್ ಪರಿಸ್ಥಿತಿಯಲ್ಲಿ ಚುನಾವಣೆ ಎದುರಾಗಿದ್ದು, ಪ್ರಚಾರದ ತಂತ್ರವೂ ಬದಲಾಗಿದೆ. ಆದ್ದರಿಂದ, ಹೆಲಿಕಾಪ್ಟರ್‌ಗಳಿಗೆ ಬೇಡಿಕೆ ಕುಗ್ಗಿದೆ.

2015ರ ಚುನಾವಣೆಗೆ ಹೋಲಿಕೆ ಮಾಡಿದರೆ ಹೆಲಿಕಾಪ್ಟರ್‌ಗಳಿಗೆ ಬೇಡಿಕೆ ಶೇ 50ರಷ್ಟು ಕಡಿಮೆಯಾಗಿದೆ. ಒಟ್ಟು 11 ಹೆಲಿಕಾಪ್ಟರ್ ಬಳಕೆ ಮಾಡಲಾಗುತ್ತಿದ್ದು, ಪಾಟ್ನಾದ ವಿಮಾನ ನಿಲ್ದಾಣದಲ್ಲಿ ಅವುಗಳನ್ನು ನಿಲ್ಲಿಸಲಾಗಿದೆ.

ಬಿಹಾರ ವಿಧಾನಸಭೆ ಚುನಾವಣೆ; ಮೋದಿಯಿಂದ 12 ಸಮಾವೇಶ ಬಿಹಾರ ವಿಧಾನಸಭೆ ಚುನಾವಣೆ; ಮೋದಿಯಿಂದ 12 ಸಮಾವೇಶ

ಬಿಹಾರದಲ್ಲಿ 2015ರ ವಿಧಾನಸಭೆ ಚುನಾವಣೆಗೆ 25 ಹೆಲಿಕಾಪ್ಟರ್ ಬುಕ್ ಮಾಡಲಾಗಿತ್ತು. 2019ರ ಲೋಕಸಭೆ ಚುನಾವಣೆಯಲ್ಲಿ 32 ಹೆಲಿಕಾಪ್ಟರ್‌ಗಳನ್ನು ನಾಯಕರ ಪ್ರಚಾರ ಕಾರ್ಯಗಳಿಗೆ ಬಳಕೆ ಮಾಡಿಕೊಳ್ಳಲಾಗಿತ್ತು.

ಬಿಹಾರ ಚುನಾವಣೆ: ಅಂತಿಮ ಹಂತದ 35 ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಬಿಜೆಪಿಬಿಹಾರ ಚುನಾವಣೆ: ಅಂತಿಮ ಹಂತದ 35 ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಬಿಜೆಪಿ

Bihar Assembly Elections 50 Per Cent Dip In Hiring Of Helicopters

ಈ ಬಾರಿಯ ಚುನಾವಣೆಗೆ ಇದುವರೆಗೂ 11 ಹೆಲಿಕಾಪ್ಟರ್ ಬುಕ್ ಮಾಡಲಾಗಿದೆ. ಇದರಲ್ಲಿ 6 ಬಿಜೆಪಿಗೆ ಸೇರಿದವುಗಳು. ಕಾಂಗ್ರೆಸ್, ಆರ್‌ಜೆಡಿ ಮತ್ತು ಜೆಡಿಯು ತಲಾ 1 ಹೆಲಿಕಾಪ್ಟರ್ ಬಳಕೆ ಮಾಡುತ್ತಿವೆ. ಜೆಎಪಿ ಪಕ್ಷವೂ ಸಹ ಹೆಲಿಕಾಪ್ಟರ್‌ಗಾಗಿ ಬೇಡಿಕೆ ಇಟ್ಟಿದೆ.

ಚುನಾವಣಾ ಪ್ರಚಾರದ ಚಿತ್ರಣ ಬದಲಿಸಿದ ಕೋವಿಡ್ ಸೋಂಕು! ಚುನಾವಣಾ ಪ್ರಚಾರದ ಚಿತ್ರಣ ಬದಲಿಸಿದ ಕೋವಿಡ್ ಸೋಂಕು!

2015ರ ಚುನಾವಣೆಯಲ್ಲಿ ಜೆಡಿಯು, ಕಾಂಗ್ರೆಸ್ ಮತ್ತು ಆರ್‌ಜೆಡಿ ತಲಾ ಎರಡು ಹೆಲಿಕಾಪ್ಟರ್ ಬಳಕೆ ಮಾಡಿದ್ದವು. ಈ ಬಾರಿ ಒಂದೇ ಸಾಕು ಎಂದು ಹೇಳಿವೆ. ಕೋವಿಡ್ ಸಂದರ್ಭದಲ್ಲಿ ಪ್ರಚಾರದ ವೈಖರಿಯೂ ಬದಲಾಗಿದ್ದು, ಇದಕ್ಕೆ ಕಾರಣವಾಗಿದೆ.

ಮೊದಲು ದೊಡ್ಡ ಚುನಾವಣಾ ಪ್ರಚಾರ ಸಮಾವೇಶ ಆಯೋಜನೆ ಮಾಡಲು ಅವಕಾಶವಿರಲಿಲ್ಲ. ಬಳಿಕ ಕೇಂದ್ರ ಗೃಹ ಇಲಾಖೆ ನಿಗದಿತ ಜನರನ್ನು ಸೇರಿಸಿ ಸಮಾವೇಶ ನಡೆಸಲು ಒಪ್ಪಿಗೆ ನೀಡಿದೆ. ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ 12 ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ.

ಬಿಜೆಪಿಯೇ ಮೊದಲು ಚುನಾವಣಾ ಪ್ರಚಾರ ಆರಂಭಿಸಿದ್ದು. ಅಕ್ಟೋಬರ್ 11ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ದೆಹಲಿಯಿಂದ ಪಾಟ್ನಾಕ್ಕೆ ಆಗಮಿಸಿ ಬಳಿಕ ಹೆಲಿಕಾಪ್ಟರ್‌ನಲ್ಲಿ ಗಯಾಕ್ಕೆ ತೆರಳಿ ಪ್ರಚಾರ ಮಾಡಿದ್ದರು.

ಬುಧವಾರ ಮೂರು ಮತ್ತು ಗುರುವಾರ ಎರಡು ಸಮಾವೇಶ ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ನಿತೀಶ್ ಕುಮಾರ್ ತಮ್ಮ ಓಡಾಟಕ್ಕೆ ಹೆಲಿಕಾಪ್ಟರ್ ಬಳಕೆ ಮಾಡಿದ್ದರು. ತೇಜಸ್ವಿ ಯಾದವ್ ಸಹ ಹೆಲಿಕಾಪ್ಟರ್ ಬಳಕೆ ಮಾಡಿದ್ದಾರೆ.

ಬಹುತೇಕ ಎಲ್ಲಾ ಪಕ್ಷಗಳು ಇಬ್ಬರು ಪೈಲೆಟ್ ಸೇರಿದಂತೆ 8 ಜನರು ಪ್ರಯಾಣ ಮಾಡಬಹುದಾದ ಹೆಲಿಕಾಪ್ಟರ್ ಬುಕ್ ಮಾಡಿವೆ. ಹೆಲಿಕಾಪ್ಟರ್‌ಗಳಿಗೆ ಪ್ರತಿ ಗಂಟೆಗೆ 65,000 ದಿಂದ 4 ಲಕ್ಷದ ತನಕ ಬಾಡಿಗೆ ಇದೆ. ಇಂಜಿನ್, ಎಷ್ಟು ಜನ ಕುಳಿತುಕೊಳ್ಳಬಹುದು ಎಂಬುದರ ಮೇಲೆ ಬಾಡಿಗೆ ನಿರ್ಧಾರವಾಗಲಿದೆ.

ಬಿಹಾರ ವಿಧಾನಸಭೆಯ ಒಟ್ಟು ಸದಸ್ಯ ಬಲ 243. ಅಕ್ಟೋಬರ್ 28 (71 ಸೀಟು), ನವೆಂಬರ್ 3 (94 ಸೀಟು), ನವೆಂಬರ್ 7 (78) ಸೀಟುಗಳಿಗೆ ಒಟ್ಟು ಮೂರು ಹಂತದಲ್ಲಿ ಚುನಾವಣೆ ನಡೆಯಲಿದೆ. ನವೆಂಬರ್ 10ರಂದು ಫಲಿತಾಂಶ ಪ್ರಕಟವಾಗಲಿದೆ.

English summary
Compered to 2015 election there has been a 50% dip in hiring of helicopters for campaigning. Bihar election will be held in 3 phase first phase voting on October 28.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X