ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎನ್‌ಡಿಎ, ಮಹಾಮೈತ್ರಿಕೂಟಕ್ಕೆ ಮೊದಲ ಹಂತದ ಪರೀಕ್ಷೆ

|
Google Oneindia Kannada News

ಪಟ್ನಾ, ಅಕ್ಟೋಬರ್ 9: ಬಿಹಾರ ವಿಧಾನಸಭೆ ಚುನಾವಣೆಯ ಮೊದಲ ಹಂತ ಆಡಳಿತಾರೂಢ ಎನ್‌ಡಿಎ ಒಕ್ಕೂಟಕ್ಕೆ ಬಹುದೊಡ್ಡ ಸವಾಲಾಗಿದ್ದು, ಮುಂದಿನ ಬಾರಿ ಅಧಿಕಾರ ಹಿಡಿಯುವಲ್ಲಿ ನಿರ್ಣಾಯಕವಾಗಲಿದೆ ಎನ್ನಲಾಗಿದೆ.

ಅಕ್ಟೋಬರ್ 28ರಂದು ನಡೆಯುವ ಮೊದಲ ಹಂತದ ಚುನಾವಣೆಯಲ್ಲಿ 71 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. 2015ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಈ 71 ಕ್ಷೇತ್ರಗಳ ಪೈಕಿ 54 ಸೀಟುಗಳು ಆರ್‌ಜೆಡಿ, ಜೆಡಿಯು ಮತ್ತು ಕಾಂಗ್ರೆಸ್ ನೇತೃತ್ವದ ಮಹಾಮೈತ್ರಿಕೂಟಕ್ಕೆ ಒಲಿದಿತ್ತು. ಎನ್‌ಡಿಎ ಒಕ್ಕೂಟ ಇಲ್ಲಿ ಕೇವಲ 15 ಕ್ಷೇತ್ರಗಳನ್ನು ಗೆದ್ದುಕೊಂಡಿತ್ತು.

ಬಿಹಾರ ವಿಧಾನಸಭೆ ಚುನಾವಣೆಗೆ ಎನ್‌ಸಿಪಿಯಿಂದಲೂ ಸ್ಪರ್ಧೆಬಿಹಾರ ವಿಧಾನಸಭೆ ಚುನಾವಣೆಗೆ ಎನ್‌ಸಿಪಿಯಿಂದಲೂ ಸ್ಪರ್ಧೆ

ಆದರೆ ಈಗ ಸನ್ನಿವೇಶ ಬಹಳ ಬದಲಾಗಿದೆ. ಎಲ್ಲ ಪಕ್ಷಗಳಿಗೂ ಇಲ್ಲಿನ ಲೆಕ್ಕಾಚಾರದಲ್ಲಿ ಅನಿಶ್ಚಿತತೆ ಕಾಡುತ್ತಿದೆ. ಆಗ ಮಹಾಮೈತ್ರಿಕೂಟದ ಭಾಗವಾಗಿದ್ದ ಜೆಡಿಯು, ಈಗ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಜತೆಗಿದೆ.

Bihar Assembly Election 2020: Test For NDA And Grand Alliance In First Phase

2015ರಲ್ಲಿ ಆರ್‌ಜೆಡಿ ಈ 71 ಕ್ಷೇತ್ರಗಳ ಪೈಕಿ 29 ಸೀಟುಗಳಲ್ಲಿ ಸ್ಪರ್ಧಿಸಿ 27ರಲ್ಲಿ ಜಯಗಳಿಸಿತ್ತು. ಇದೇ ರೀತಿಯ ಸಾಧನೆಯನ್ನು ತೋರಿಸುವುದು ಆರ್‌ಜೆಡಿಗೆ ಬಹುದೊಡ್ಡ ಸವಾಲಾಗಿದೆ. ಜೆಡಿಯು ಬೆಂಬಲವಿಲ್ಲದೆ ಈ ಬಾರಿ ಇಷ್ಟು ಸೀಟುಗಳನ್ನು ಪಡೆದುಕೊಳ್ಳಬೇಕಿದೆ. ಸಿಪಿಎಂ ಮತ್ತು ಕಾಂಗ್ರೆಸ್ ಜತೆಗೂಡಿ ಕ್ಷೇತ್ರಗಳನ್ನು ಹಂಚಿಕೊಂಡಿರುವ ಜೆಡಿಯು, ಈ ಬಾರಿ 43 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಇಳಿಸುತ್ತಿದೆ. 2015ರಲ್ಲಿ ಕಾಂಗ್ರೆಸ್ 13 ಸೀಟುಗಳಲ್ಲಿ ಸ್ಪರ್ಧಿಸಿ 9ರಲ್ಲಿ ಗೆದ್ದಿತ್ತು. ಈ ಬಾರಿ ಅದು 21 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ.

ಇನ್ನು ಮಹಾಮೈತ್ರಿಕೂಟದ ಭಾಗವಾಗಿರುವ ಸಿಪಿಎಂ 2015ರಲ್ಲಿ ಒಂದು ಕ್ಷೇತ್ರದಲ್ಲಿ ಮಾತ್ರ ಜಯಗಳಿಸಿತ್ತು. ಈ ಬಾರಿ ಅದು ಈ 73 ಕ್ಷೇತ್ರಗಳ ಪೈಕಿ ಏಳರಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿದೆ.

ಆ ಪ್ರಶ್ನೆಗೆ ಬಿಜೆಪಿಗರು ಹೆದರಿ ಟಿಕೆಟ್ ಕೊಡಲಿಲ್ಲ: ಅನಿಲ್ ದೇಶ್‌ಮುಖ್ಆ ಪ್ರಶ್ನೆಗೆ ಬಿಜೆಪಿಗರು ಹೆದರಿ ಟಿಕೆಟ್ ಕೊಡಲಿಲ್ಲ: ಅನಿಲ್ ದೇಶ್‌ಮುಖ್

ಇದೇ ರೀತಿ ಎನ್‌ಡಿಎಗೂ ಅಷ್ಟೇ ದೊಡ್ಡ ಸವಾಲಾಗಿದೆ. ಮುಖ್ಯವಾಗಿ ಅದು ತನ್ನ ಸಾಧನೆಯನ್ನು ಉತ್ತಮಪಡಿಸಿಕೊಳ್ಳಬೇಕಿದೆ. 2015ರಲ್ಲಿ 40 ಸೀಟುಗಳ ಪೈಕಿ 13ರಲ್ಲಿ ಮಾತ್ರ ಬಿಜೆಪಿ ಜಯಗಳಿಸಿತ್ತು. ಈ ಬಾರಿ ಅದು 29 ಸೀಟುಗಳಲ್ಲಿ ಸ್ಪರ್ಧಿಸುತ್ತಿದೆ. 2015ರಲ್ಲಿ 29 ಕ್ಷೇತ್ರಗಳ ಪೈಕಿ 18ರಲ್ಲಿ ಗೆದ್ದಿದ್ದ ಜೆಡಿಯು, ಪ್ರಸಕ್ತ ಚುನಾವಣೆಯಲ್ಲಿ 35 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಸ್ಪರ್ಧೆಗೆ ಇಳಿಸುತ್ತಿದೆ. ಬಿಜೆಪಿಗೆ ಇಲ್ಲಿರುವ ಪ್ರಮುಖ ಕೆಲಸವೆಂದರೆ ತನ್ನ ಮತಗಳನ್ನು ಜೆಡಿಯುಗೆ ವರ್ಗಾಯಿಸುವುದು.

ಮಾಜಿ ಸಿಎಂ ಜಿತನ್ ರಾಮ್ ಮಾಂಝಿ ಅವರ ಎಚ್‌ಎಎಂ ಕೂಡ ಮೊದಲ ಹಂತದಲ್ಲಿ ಪರೀಕ್ಷೆ ಎದುರಿಸುತ್ತಿದೆ. ಎಚ್‌ಎಎಂ ಸ್ಪರ್ಧಿಸುತ್ತಿರುವ ಒಟ್ಟು ಏಳು ಕ್ಷೇತ್ರಗಳಲ್ಲಿ ಆರು ಸೀಟುಗಳಿಗೆ ಮೊದಲ ಹಂತದಲ್ಲಿಯೇ ಚುನಾವಣೆ ನಡೆಯಲಿದೆ. 2015ರಲ್ಲಿ 10 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಎಚ್‌ಎಎಂ ಕೇವಲ ಒಂದು ಸ್ಥಾನ ಪಡೆದುಕೊಂಡಿತ್ತು. ಹಾಗೆಯೇ ಎಲ್‌ಜೆಪಿ ಮತ್ತು ಆರ್‌ಎಲ್‌ಎಸ್‌ಪಿ ಈ ಬಾರಿ ಏಕಾಂಗಿಯಾಗಿ ಕಣಕ್ಕಿಳಿಯುತ್ತಿವೆ.

English summary
Bihar Assembly Election 2020: The first phase of the Bihar polls fro 71 deats will be held on Oct 28.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X