ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಹಾರ ಚುನಾವಣೆ: ಅತ್ಯಾಚಾರ ಆರೋಪಿ ಶಾಸಕರ ಬದಲು ಅವರ ಪತ್ನಿಯರಿಗೆ ಆರ್‌ಜೆಡಿ ಟಿಕೆಟ್

|
Google Oneindia Kannada News

ಪಟ್ನಾ, ಅಕ್ಟೋಬರ್ 5: ಮುಂಬರುವ ಬಿಹಾರ ವಿಧಾನಸಭೆ ಚುನಾವಣೆಗೆ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಬಿಡುಗಡೆ ಮಾಡಿದೆ. ಇದು ಬಿಹಾರದ 16 ಜಿಲ್ಲೆಗಳಲ್ಲಿನ ಮೊದಲ ಹಂತದಲ್ಲಿ ನಡೆಯಲಿರುವ ಚುನಾವಣೆಯ ಅಭ್ಯರ್ಥಿಗಳ ಪಟ್ಟಿಯಾಗಿದೆ.

ಮಾಜಿ ಮುಖ್ಯಮಂತ್ರಿ ಲಾಲು ಯಾದವ್ ನೇತೃತ್ವದ ಆರ್‌ಜೆಡಿಯು ಅತ್ಯಾಚಾರ ಆರೋಪ ಎದುರಿಸುತ್ತಿರುವ ಇಬ್ಬರು ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಿದೆ. ಆದರೆ ಆ ಇಬ್ಬರು ಶಾಸಕರ ಬದಲು ಅವರ ಪತ್ನಿಯರನ್ನು ವಿಧಾನಸಭೆ ಚುನಾವಣೆಯ ಅಭ್ಯರ್ಥಿಗಳನ್ನಾಗಿ ನಾಮನಿರ್ದೇಶನ ಮಾಡಿದೆ.

ದಲಿತ ನಾಯಕನ ಹತ್ಯೆ: ತೇಜಸ್ವಿ ಯಾದವ್ ವಿರುದ್ಧ ಎಫ್ಐಆರ್ ದಲಿತ ನಾಯಕನ ಹತ್ಯೆ: ತೇಜಸ್ವಿ ಯಾದವ್ ವಿರುದ್ಧ ಎಫ್ಐಆರ್

ಬಿಹಾರದ ವಿಧಾನಸಭೆ ಚುನಾವಣೆಯು ಅ. 28ರಿಂದ ಮೂರು ಹಂತಗಳಲ್ಲಿ ನಡೆಯಲಿದ್ದು, ಮಹಾಘಟಬಂಧನದ ಮಿತ್ರಪಕ್ಷಗಳ ಸೀಟು ಹಂಚಿಕೆಯನ್ನು ಅಂತಿಮಗೊಳಿಸಲಾಗಿದೆ. ಅದರ ಬೆನ್ನಲ್ಲೇ ಆರ್‌ಜೆಡಿಯು ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರ ಪಾಲುದಾರ ಪಕ್ಷಗಳಾದ ಕಾಂಗ್ರೆಸ್ ಮತ್ತು ಎಡಪಕ್ಷಗಳು ಇನ್ನೂ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿಲ್ಲ. ಮುಂದೆ ಓದಿ.

ಜೈಲಿನಲ್ಲಿರುವ ರಾಜ್ ಬಲ್ಲಭ್

ಜೈಲಿನಲ್ಲಿರುವ ರಾಜ್ ಬಲ್ಲಭ್

ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪದಲ್ಲಿ ಜೈಲಿನಲ್ಲಿರುವ ರಾಜ್ ಬಲ್ಲಭ್ ಯಾದವ್ ಅವರಿಗೆ ಟಿಕೆಟ್ ನೀಡಲು ನಿರಾಕರಿಸುವ ಆರ್‌ಜೆಡಿ, ನಾವಡಾ ವಿಧಾನಸಭೆ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಅವರ ಪತ್ನಿ ವಿಭಾ ದೇವಿ ಅವರ ಹೆಸರನ್ನು ಪ್ರಸ್ತಾಪಿಸಿದೆ.

ಬಿಹಾರ ಚುನಾವಣೆ ಹೊಸ್ತಿಲಿನಲ್ಲೇ ಎನ್ ಡಿಎ ತೊರೆದ ಎಲ್ ಜೆಪಿಬಿಹಾರ ಚುನಾವಣೆ ಹೊಸ್ತಿಲಿನಲ್ಲೇ ಎನ್ ಡಿಎ ತೊರೆದ ಎಲ್ ಜೆಪಿ

ಅರುಣ್ ಯಾದವ್ ಪತ್ನಿಗೆ ಟಿಕೆಟ್

ಅರುಣ್ ಯಾದವ್ ಪತ್ನಿಗೆ ಟಿಕೆಟ್

ಹಾಗೆಯೇ ಭೋಜ್ಪುರ ಜಿಲ್ಲೆಯಲ್ಲಿರುವ ಸಂಡೇಶ್ ವಿಧಾನಸಭೆ ಕ್ಷೇತ್ರದಿಂದ ಅಭ್ಯರ್ಥಿಯನ್ನಾಗಿ ಕಿರಣ್ ದೇವಿ ಅವರನ್ನು ಕಣಕ್ಕಿಳಿಸಲು ಆರ್‌ಜೆಡಿ ಮುಂದಾಗಿದೆ. ಕಿರಣ್ ದೇವಿ ಅವರ ಪತಿ ಅರುಣ್ ಯಾದವ್ ಅತ್ಯಾಚಾರ ಆರೋಪಿಯಾಗಿದ್ದು, ಸುಮಾರು ಒಂದು ವರ್ಷದಿಂದ ತಲೆಮರೆಸಿಕೊಂಡದ್ದಾರೆ.

ಹಿರಿಯ ಮುಖಂಡರ ಮಕ್ಕಳಿಗೆ ಟಿಕೆಟ್

ಹಿರಿಯ ಮುಖಂಡರ ಮಕ್ಕಳಿಗೆ ಟಿಕೆಟ್

ತನ್ನ ಮೊದಲ ಪಟ್ಟಿಯಲ್ಲಿ ಆರ್‌ಜೆಡಿ ಪಕ್ಷದ ಹಿರಿಯ ನಾಯಕರಾದ ಶಿವಾನಂದ ತಿವಾರಿ ಅವರ ಮಗ ರಾಹುಲ್ ತಿವಾರಿಗೆ ಶಹಾಪುರ ಕ್ಷೇತ್ರ ಮತ್ತು ಆರ್‌ಜೆಡಿ ರಾಜ್ಯ ಅಧ್ಯಕ್ಷ ಜಗದಾನಂದ್ ಸಿಂಗ್ ಅವರ ಮಗ ಸುಧಾಕರ್ ಸಿಂಗ್ ಅವರಿಗೆ ರಾಮಗಡ ಕ್ಷೇತ್ರದಿಂದ ಟಿಕೆಟ್ ಪ್ರಕಟಿಸಿದೆ. ಈ ಮೂಲಕ ಪಕ್ಷದ ರಾಜಕೀಯ ಮುಖಂಡರ ಎರಡನೆಯ ಪೀಳಿಗೆಯ ಮುಖಂಡರಿಗೆ ಮಣೆ ಹಾಕಿದಂತಾಗಿದೆ.

ದಲಿತ ಜೀವಗಳೂ ಮುಖ್ಯವೇ? ಬಿಹಾರ ಚುನಾವಣೆ ಮೇಲೆ ಹತ್ರಾಸ್ ಘಟನೆ ಪ್ರಭಾವ ಹೇಗಿರಲಿದೆ?ದಲಿತ ಜೀವಗಳೂ ಮುಖ್ಯವೇ? ಬಿಹಾರ ಚುನಾವಣೆ ಮೇಲೆ ಹತ್ರಾಸ್ ಘಟನೆ ಪ್ರಭಾವ ಹೇಗಿರಲಿದೆ?

ಜೆಎಂಎಂ ಬೇಡಿಕೆ ತಿರಸ್ಕೃತ

ಜೆಎಂಎಂ ಬೇಡಿಕೆ ತಿರಸ್ಕೃತ

ನೆರೆಯ ಜಾರ್ಖಂಡ್‌ನಲ್ಲಿ ಆರ್‌ಜೆಡಿಯ ಮಿತ್ರ ಪಕ್ಷವಾಗಿರುವ ಜಾರ್ಖಂಡ್ ಮುಕ್ತಿ ಮೋರ್ಚಾವು (ಜೆಎಂಎಂ) ತನಗೆ ಬಿಹಾರದಲ್ಲಿ 15 ಕ್ಷೇತ್ರಗಳನ್ನು ಬಿಟ್ಟುಕೊಡುವಂತೆ ಬೇಡಿಕೆ ಇರಿಸಿದೆ. ಆದರೆ ಅದನ್ನು ಆರ್‌ಜೆಡಿ ಪರಿಗಣಿಸಿಲ್ಲ. ಹೀಗಾಗಿ ಬಿಹಾರ ಹಾಗೂ ಜಾರ್ಖಂಡ್ ಗಡಿ ಭಾಗದಲ್ಲಿನ ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ನಿಲ್ಲಿಸಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

English summary
Bihar Assembly Election 2020: RJD has denied ticket to rape accused MLAs and gives it to their wives.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X