ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣೆ ಸಮೀಪದಲ್ಲಿಯೇ ಬಿಹಾರದಲ್ಲಿ ರೈಲ್ವೆ ಮಾರ್ಗಗಳ ಉನ್ನತೀಕರಣ

|
Google Oneindia Kannada News

ಪಟ್ನಾ, ಅಕ್ಟೋಬರ್ 15: ಬಿಹಾರದಲ್ಲಿ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಂತೆ ಕೇಂದ್ರ ಸರ್ಕಾರವು ರೈಲ್ವೆ ಮಾರ್ಗಗಳ ಉನ್ನತೀಕರಣ ನಡೆಸಿದೆ. ಹೊಸ ರೈಲು ಮಾರ್ಗವು ಗಂಟೆಗೆ 130 ಕಿ.ಮೀ. ವೇಗದಲ್ಲಿ ರೈಲು ಸಾಗಲು ಸಹಕಾರಿಯಾಗಲಿದೆ. ಈ ಮಾರ್ಗಗಳಲ್ಲಿ ಅತಿ ವೇಗದ ರೈಲುಗಳ ಓಡಾಟ ಆರಂಭಿಸುವುದರ ಜತೆಗೆ, ಪ್ರಸ್ತುತ ಓಡಾಡುತ್ತಿರುವ ರೈಲುಗಳು ಸಮಯಕ್ಕೆ ಸರಿಯಾಗಿ ಸಂಚಾರ ನಡೆಸುವಂತೆ ಮಾಡುವುದು ಮುಖ್ಯ ಉದ್ದೇಶವಾಗಿದೆ.

ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಜಂಕ್ಷನ್ (ಮುಘಲ್ ಸರೈ) ದಿಂದ ಬಿಹಾರದ ರಾಜಧಾನಿ ಪಟ್ನಾ ಮೂಲಕ ಜಮುಯಿ ಜಿಲ್ಲೆಯ ಝಾಝಾಕ್ಕೆ ಸಂಪರ್ಕ ಕಲ್ಪಿಸುವ 393 ಕಿ.ಮೀ. ಉದ್ದದ ಮುಖ್ಯ ಮಾರ್ಗವನ್ನು ಉನ್ನತೀಕರಿಸಲಾಗಿದೆ.

ನನ್ನ ಅಪ್ಪನನ್ನು ನಿತೀಶ್ ಕುಮಾರ್ ಅವಮಾನಿಸಿದ್ದರು: ಚಿರಾಗ್ ಪಾಸ್ವಾನ್ ಕಿಡಿನನ್ನ ಅಪ್ಪನನ್ನು ನಿತೀಶ್ ಕುಮಾರ್ ಅವಮಾನಿಸಿದ್ದರು: ಚಿರಾಗ್ ಪಾಸ್ವಾನ್ ಕಿಡಿ

ಹಲವು ವರ್ಷಗಳಿಂದ ಈ ಮಾರ್ಗವು ಗಂಟೆಗೆ ಗರಿಷ್ಠ 110 ಕಿ.ಮೀ. ವೇಗದಲ್ಲಿ ರೈಲು ಸಂಚಾರಕ್ಕೆ ಯೋಗ್ಯವಾಗಿತ್ತು. ಈ ಮಾರ್ಗದಲ್ಲಿ ಮತ್ತಷ್ಟು ರೈಲುಗಳನ್ನು ಆರಂಭಿಸಲಾಗುತ್ತಿದೆ. ಹೀಗಾಗಿ ಮುಖ್ಯ ಅವಧಿಗಳಲ್ಲಿ ಈ ಮಾರ್ಗದ ರೈಲುಗಳ ಸಂಚಾರದ ಸರಾಸರಿ ವೇಗ ಇಳಿಕೆಯಾಗಿತ್ತು. ಇದೆಲ್ಲದರಲ್ಲಿಯೂ ಬದಲಾವಣೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Bihar Assembly Election 2020: Railway Upgrades Tracks To Speed Up Train Run

ಈಗಾಗಲೇ ಎಲ್ಲ ರೈಲುಗಳೂ ಸುಮಾರು 30 ನಿಮಿಷದಷ್ಟು ಬೇಗನೆ ನಿಲ್ದಾಣ ತಲುಪಲು ನೆರವಾಗುತ್ತಿದೆ. ಈ ಸಮಯ ಉಳಿತಾಯವು ಭವಿಷ್ಯದಲ್ಲಿ ರಾಜ್ಯದಲ್ಲಿ ಮತ್ತಷ್ಟು ಹೊಸ ರೈಲುಗಳನ್ನು ಪರಿಚಯಿಸಲು ನೆರವಾಗಲಿದೆ.

ಆರ್‌ಜೆಡಿ ಗೆದ್ದರೆ ಬಿಹಾರ ಉಗ್ರರ ಆಶ್ರಯ ತಾಣವಾಗುತ್ತದೆ: ವಿವಾದ ಸೃಷ್ಟಿಸಿದ ಕೇಂದ್ರ ಸಚಿವಆರ್‌ಜೆಡಿ ಗೆದ್ದರೆ ಬಿಹಾರ ಉಗ್ರರ ಆಶ್ರಯ ತಾಣವಾಗುತ್ತದೆ: ವಿವಾದ ಸೃಷ್ಟಿಸಿದ ಕೇಂದ್ರ ಸಚಿವ

ಚುನಾವಣೆಗೆ ಸಿದ್ಧತೆ ನಡೆಸುತ್ತಿರುವ ಬಿಹಾರದಲ್ಲಿ, ಸುದೀರ್ಘ ಕಾಲದಿಂದ ಬಾಕಿ ಉಳಿದಿದ್ದ ವೇಗದ ಮಾರ್ಗಗಳ ಯೋಜನೆ ಲಾಕ್‌ಡೌನ್ ಅವಧಿಯಲ್ಲಿ ಆರಂಭವಾಗಿತ್ತು. ದೈನಂದಿನ ಪ್ರಯಾಣಿಕ ರೈಲುಗಳ ಓಡಾಟ ಸ್ಥಗಿತಗೊಂಡಿದ್ದರಿಂದ ಈ ಮಾರ್ಗಗಳ ಉನ್ನತೀಕರಣ ಮಾಡಲು ರೈಲ್ವೆ ಇಲಾಖೆಗೆ ಅನುಕೂಲವಾಗಿದೆ.

English summary
Bihar Assembly Election 2020: Indian Railways upgrades tracks in Bihar, line can support trains with a speed of 130 KM per hour.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X