ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಡತೆ ಪ್ರಮಾಣಪತ್ರ ತರಲು ಹೋಗಿದ್ದ ಟಿಕೆಟ್ ಆಕಾಂಕ್ಷಿ ಬಂಧನ

|
Google Oneindia Kannada News

ಪಟ್ನಾ, ಅಕ್ಟೋಬರ್ 9: ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಆಕಾಂಕ್ಷಿಯಾಗಿದ್ದ ರಾಷ್ಟ್ರೀಯ ಜನತಾದಳ (ಆರ್‌ಜೆಡಿ) ಮುಖಂಡರೊಬ್ಬರು ನಡತೆ ಪ್ರಮಾಣಪತ್ರ ತರಲು ತೆರಳಿದ್ದ ಸಂದರ್ಭದಲ್ಲಿ ಮಾಧೇಪುರದಲ್ಲಿ ಪೊಲೀಸರು ಬಂಧಿಸಿದ್ದಾರೆ.

2016ರ ಅಪಹರಣ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸಿಂಘೇಶ್ವರ ವಿಧಾನಸಬೆ ಕ್ಷೇತ್ರದ ಆರ್‌ಜೆಟಿ ಟಿಕೆಟ್ ಆಕಾಂಕ್ಷಿ ಚಂದ್ರಹಾಸ್ ಚೌಪಾಲ್ ಅವರನ್ನು ಬಂಧಿಸಲಾಗಿದೆ. ಆದರೆ ಜೆಡಿಯು ನೇತೃತ್ವದ ಬಿಹಾರ ಸರ್ಕಾರವು ತಮ್ಮನ್ನು ಸುಳ್ಳು ಆರೋಪದಲ್ಲಿ ಸಿಲುಕಿಸಲು ಪ್ರಯತ್ನಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಮೇವು ಹಗರಣ: ಲಾಲು ಪ್ರಸಾದ್‌ಗೆ ಜಾಮೀನು, ಆದರೂ ಬಿಡುಗಡೆ ಭಾಗ್ಯವಿಲ್ಲಮೇವು ಹಗರಣ: ಲಾಲು ಪ್ರಸಾದ್‌ಗೆ ಜಾಮೀನು, ಆದರೂ ಬಿಡುಗಡೆ ಭಾಗ್ಯವಿಲ್ಲ

ಇನ್ನೊಂದೆಡೆ ಬಿಹಾರ ಪೊಲೀಸರು, ಚೌಪಾಲ್ ಅವರ ವಿರುದ್ಧದ ವಾರಂಟ್ ಬಾಕಿ ಇತ್ತು. ಅವರು ಮಾಧೇಪುರಕ್ಕೆ ಬಂದಿರುವ ಮಾಹಿತಿ ತಿಳಿದು ಅಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.

Bihar Assembly Election 2020: Police Arrest RJD Leader Chandrahas Chaupal

2016ರಲ್ಲಿ ಶಂಕರಪುರ ಪೊಲೀಸ್ ಠಾಣೆಯಲ್ಲಿ ಚೌಪಾಲ್ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಮಾಧೇಪುರ ಉಪ ವಿಭಾಗೀಯ ಕಚೇರಿ ಆವರಣದಲ್ಲಿ ಅವರನ್ನು ಬಂಧಿಸಿದ್ದೇವೆ ಎಂದು ತಿಳಿಸಿದ್ದಾರೆ.

ಎನ್‌ಡಿಎ, ಮಹಾಮೈತ್ರಿಕೂಟಕ್ಕೆ ಮೊದಲ ಹಂತದ ಪರೀಕ್ಷೆಎನ್‌ಡಿಎ, ಮಹಾಮೈತ್ರಿಕೂಟಕ್ಕೆ ಮೊದಲ ಹಂತದ ಪರೀಕ್ಷೆ

ಪ್ರಸಕ್ತ ಸಾಲಿನ ಬಿಹಾರ ವಿಧಾನಸಭೆ ಚುನಾವಣೆಯ ಆರ್‌ಜೆಡಿ ಟಿಕೆಟ್ ಆಕಾಂಕ್ಷಿಯಾಗಿದ್ದ ಚೌಪಾಲ್ ಅವರನ್ನು ಮಾಧೇಪುರ ಜಿಲ್ಲೆಯ ಸಿಂಗೇಶ್ವರ ಕ್ಷೇತ್ರದಿಂದ ನಾಮನಿರ್ದೇಶನ ಮಾಡುವುದಾಗಿ ಆರ್‌ಜೆಡಿ ಮುಖಂಡರು ಭರವಸೆ ನೀಡಿದ್ದರು. ಆದರೆ ಕ್ಷೇತ್ರಕ್ಕೆ ಅವರ ಹೆಸರನ್ನು ಶಿಫಾರಸು ಮಾಡುವ ಮುನ್ನ ನಡತೆ ಪ್ರಮಾಣ ಪತ್ರ ತಂದು ಸಲ್ಲಿಸುವಂತೆ ಅವರಿಗೆ ಪಕ್ಷ ಸೂಚನೆ ನೀಡಿತ್ತು.

English summary
Bihar Assembly Election 2020: Police arrest RJD leader Chandrahas Chaupal who went to collect character certificate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X