ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಹೆಸರಿನಲ್ಲಿ ಮತ ಕೇಳಿದ ನಿತೀಶ್ ಕುಮಾರ್

|
Google Oneindia Kannada News

ಪಟ್ನಾ, ಅಕ್ಟೋಬರ್ 29: ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ಮಿತ್ರಪಕ್ಷಗಳಾದ ಬಿಜೆಪಿ ಮತ್ತು ಜೆಡಿಯು ನಡುವೆ ಅಂತರ ಉಂಟಾಗುತ್ತಿದೆ ಎಂಬ ಅನುಮಾನಗಳ ಬೆನ್ನಲ್ಲೇ, ಮುಖ್ಯಮಂತ್ರಿ ನಿತೀಶ್ ಕುಮಾರ್, ಪ್ರಧಾನಿ ನರೇಂದ್ರ ಮೋದಿ ಹೆಸರಿನಲ್ಲಿ ಮತ ಯಾಚಿಸುವ ಮೂಲಕ ಮೈತ್ರಿಯನ್ನು ಗಟ್ಟಿಗೊಳಿಸುವ ಪ್ರಯತ್ನದ ಸೂಚನೆ ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ವೇದಿಕೆ ಹಂಚಿಕೊಳ್ಳಲು ಒಂದು ಕಾಲದಲ್ಲಿ ನಿರಾಕರಿಸಿದ್ದ ನಿತೀಶ್ ಕುಮಾರ್, ಬುಧವಾರ ಮೋದಿ ಅವರ ಹೆಸರಿನಲ್ಲಿ ಮತಯಾಚನೆ ಮಾಡಿದರು.

"ಬಿಹಾರದಲ್ಲಿ ಬಿಜೆಪಿ-ಎಲ್ ಜೆಪಿ ಮೈತ್ರಿಕೂಟದಲ್ಲಿ ಹೊಸ ಸರ್ಕಾರ"

ಪ್ರಚಾರದಲ್ಲಿ ಭಾಗವಹಿಸಲು ತಮಗೆ ಸಮಯ ನೀಡಿದ ಮೋದಿ ಅವರಿಗೆ ಧನ್ಯವಾದ ಸಲ್ಲಿಸಿ ಶ್ಲಾಘಿಸಿದ ನಿತೀಶ್, 'ಅವರ ಮನವಿಯನ್ನು ಆಲಿಸಿ. ನೀವು ಎನ್‌ಡಿಎಗೆ ಇನ್ನೂ ಒಂದು ಅವಕಾಶ ನೀಡಿದರೆ ಅವರು ಖಂಡಿತವಾಗಿಯೂ ಇಡೀ ರಾಜ್ಯವನ್ನು ಪರಿವರ್ತಿಸಲಿದ್ದಾರೆ. ಬಿಹಾರ ಮುಂಚೂಣಿಯಲ್ಲಿ ಸಾಗಲಿದೆ' ಎಂದರು.

Bihar Assembly Election 2020: Nitish Kumar Seeks Votes In Name Of Narendra Modi

ಪಟ್ನಾ ಮೆಟ್ರೋ, ಸ್ಮಾರ್ಟ್ ಸಿಟಿ ಯೋಜನೆಗಳು, ಉಜ್ವಲ ಯೋಜನೆ ಮತ್ತು ಬಿಹಾರದಲ್ಲಿನ ರಸ್ತೆಗಳು ಪ್ರಧಾನಿ ನರೇಂದ್ರ ಮೋದಿ ಅವರ ಕೊಡುಗೆಗಳು ಎಂದು ಕೊಂಡಾಡಿದರು. ಪ್ರಚಾರದ ವೇಳೆ 'ಮೋದಿ ಮೋದಿ' ಎಂಬ ಘೋಷಣೆ ನಡುವೆ ಮಾತನಾಡಿದ ನಿತೀಶ್, ತಾವು ಮೋದಿ ಅವರ ಭಾಷಣವನ್ನು ಕೇಳುವ ಸಲುವಾಗಿಯೇ ಸಮಾವೇಶಕ್ಕೆ ಬಂದಿದ್ದಾಗಿ ಹೇಳಿದರು. ಕೋವಿಡ್ ನಿಯಂತ್ರಣಕ್ಕೆ ಮೋದಿ ತೆಗೆದುಕೊಂಡ ಕ್ರಮಗಳು ಬಹಳ ಪರಿಣಾಮಕಾರಿಯಾಗಿದ್ದವು ಎಂದುಕೊಂಡಾಡಿದರು.

English summary
Bihar Assembly Election 2020: Bihar CM Nitish Kumar has seeked votes in the name of Narendra Modi and said, of the NDA was voted back to power Modi will develop the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X