ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download
LIVE

Bihar Election Results 2020 Live Updates: ಬಿಹಾರದಲ್ಲಿ ಮಹಾಘಟಬಂಧನ್ ವಿರುದ್ಧ ಎನ್ ಡಿಎ ಮುನ್ನಡೆ

|
Google Oneindia Kannada News

2020ರ ವಿಧಾನಸಭಾ ಚುನಾವಣೆ ಬಳಿಕ ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂಬುದು ಸಾಕಷ್ಟು ಕುತೂಹಲ ಕೆರಳಿಸಿದೆ. ಈಗಾಗಲೇ ಅಕ್ಟೋಬರ್ 28ರ ಮೊದಲ ಹಂತದಲ್ಲಿ ಶೇ.55.69ರಷ್ಟು ಮತದಾನ ನಡೆದಿದೆ. ನವೆಂಬರ್.03ರ ಎರಡನೇ ಹಂತದಲ್ಲಿ ಶೇ.53.51ರಷ್ಟು ಮತದಾನ ನಡೆದಿದೆ. ಶನಿವಾರ 3ನೇ ಹಂತದಲ್ಲಿ ಶೇ.51ರಷ್ಟು ಮತದಾನ ನಡೆದಿರುವ ಬಗ್ಗೆ ಚುನಾವಣಾ ಆಯೋಗ ಮಾಹಿತಿ ನೀಡಿದೆ.

RR Nagar, Sira By Election Results 2020 Live Updates; ಉಪ ಚುನಾವಣೆ ಮತ ಎಣಿಕೆRR Nagar, Sira By Election Results 2020 Live Updates; ಉಪ ಚುನಾವಣೆ ಮತ ಎಣಿಕೆ

ಬಿಹಾರದ 243 ವಿಧಾನಸಭಾ ಕ್ಷೇತ್ರಗಳ ಚುನಾವಣಾ ಮತ ಎಣಿಕೆಗೆ 38 ಜಿಲ್ಲೆಗಳಲ್ಲಿ 55 ಮತಎಣಿಕೆ ಕೇಂದ್ರ ಸ್ಥಾಪಿಸಲಾಗಿದೆ. ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ಆರಂಭಗೊಳ್ಳಲಿದೆ.

Bihar Election Results 2020 Live Updates in Kannada

ಕೊವಿಡ್-19 ನಿಯಂತ್ರಣ ಕ್ರಮ: ಕೊವಿಡ್-19 ಸಾಂಕ್ರಾಮಿಕ ಪಿಡುಗಿನ ನಡುವೆ ಸುರಕ್ಷಿತವಾಗಿ ಮತದಾನ ಪ್ರಕ್ರಿಯೆ ನಡೆಸುವುದಕ್ಕೆ ಚುನಾವಣಾ ಆಯೋಗವು ಮಾರ್ಗಸೂಚಿ ಹೊರಡಿಸಿತ್ತು. ಒಂದು ಮತಗಟ್ಟೆಯಲ್ಲಿ 1600 ರಿಂದ 1000 ಮತದಾರರಿಗೆ ಹಕ್ಕು ಚಲಾಯಿಸುವುದಕ್ಕಷ್ಟೇ ಅನುಮತಿ ನೀಡಲಾಗಿದೆ. 80 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಪೋಸ್ಟರ್ ಕಾರ್ಡ್ ಮೂಲಕ ಮತದಾನ ಮಾಡುವುದಕ್ಕೆ ಅನುಮತಿ ನೀಡಲಾಗಿತ್ತು. ಎಲೆಕ್ಟ್ರಾನಿಕ್ ವೋಟಿಂಗ್ ಮಷಿನ್ ನ್ನು ಸ್ಯಾನಿಟೈಸ್ ಮಾಡುವುದು. ಕಡ್ಡಾಯವಾಗಿ ಮಾಸ್ಕ್ ಧರಿಸವುದು, ಥರ್ಮಲ್ ಸ್ಕ್ಯಾನಿಂಗ್ ಮತ್ತು ಸೋಪು ಮತ್ತು ನೀರಿನ ವ್ಯವಸ್ಥೆಯನ್ನು ಮಾಡಲಾಗಿತ್ತು. ಮತದಾನದ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದಕ್ಕೆ ಕಡ್ಡಾಯಗೊಳಿಸಲಾಗಿತ್ತು.

Newest FirstOldest First
11:31 AM, 11 Nov

ಶೇಕಡವಾರು ಮತ ಗಳಿಕೆ: ಆರ್‌ಜೆಡಿ ಟಾಪ್, ಜೆಡಿಯು 3ನೇ ಸ್ಥಾನ

ಬಿಹಾರದಲ್ಲಿ 243 ವಿಧಾನಸಭಾ ಸ್ಥಾನಗಳಿಗಾಗಿ ಮೂರು ಹಂತಗಳಲ್ಲಿ ಚುನಾವಣೆ ನಡೆಸಲಾಗಿ, ನವೆಂಬರ್ 11ರಂದು ಸುರ್ಯೋದಯಕ್ಕೂ ಮುನ್ನ ಅಂತಿಮ ಫಲಿತಾಂಶ ಹೊರಬಂದಿದೆ.
11:06 AM, 11 Nov

ಬಿಹಾರ ಫಲಿತಾಂಶ: ನಿತೀಶ್ ಕುಮಾರ್‌ಗೆ ಕೈಕೊಟ್ಟ ಮಹಿಳಾ ಮತದಾರರು

2015 ವಿಧಾನಸಭಾ ಚುನಾವಣೆಯಲ್ಲಿ ನಿತೀಶ್ ಕುಮಾರ್‌ಗೆ ಟ್ರಂಪ್‌ಕಾರ್ಡ್ ಆಗಿದ್ದ ಮಹಿಳಾ ಮತದಾರರು ಈ ಬಾರಿ ಕೈಕೊಟ್ಟಂತಿದೆ.
8:02 AM, 11 Nov

ಬಿಹಾರದಲ್ಲಿ ಮೋದಿ ಅಲೆ ಇಲ್ಲ, ಮಹಾಘಟಬಂಧನ್ ಇನ್ನಷ್ಟು ಸಶಕ್ತ:ದೀಪಾಂಕರ್

ಬಿಹಾರದಲ್ಲಿ ಯಾವುದೇ ಮೋದಿ ಅಲೆ ಇಲ್ಲ, ನಾವು ಗೆಲ್ಲದಿದ್ದರೂ ನಿತೀಶ್ ಸರ್ಕಾರದ ವಿರೋಧದ ಆಕ್ರೋಶ ಕಾಣಿಸುತ್ತಿದೆ ಎಂದು ಸಿಪಿಐ(ಎಂಎಲ್) ಬಣ್ಣಿಸಿದೆ.
7:13 AM, 11 Nov

ಬಿಹಾರದಲ್ಲಿ ಮತ್ತೆ ಅಧಿಕಾರಕ್ಕೆ ಎನ್‌ಡಿಎ

ಸುದೀರ್ಘ ಸಮಯದವರೆಗೆ ನಡೆದ ಬಿಹಾರ ವಿಧಾನಸಭೆ ಚುನಾವಣೆಯ ಮತ ಎಣಿಕೆ ಕೊನೆಗೂ ಮುಕ್ತಾಯವಾಗಿದ್ದು, ಜೆಡಿಯು-ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಮ್ಯಾಜಿಕ್ ಸಂಖ್ಯೆಯ ಗಡಿ ದಾಟುವ ಮೂಲಕ ಮತ್ತೊಮ್ಮೆ ಸರ್ಕಾರ ರಚಿಸುವ ಅವಕಾಶ ಪಡೆದಿದೆ.
1:55 AM, 11 Nov

ಒಟ್ಟು 236 ಕ್ಷೇತ್ರಗಳ ಫಲಿತಾಂಶ ಪ್ರಕಟಗೊಂಡಿದೆ. ಇನ್ನು ಉಳಿದ ಏಳು ಕ್ಷೇತ್ರಗಳಲ್ಲಿ ನಾಲ್ಕರಲ್ಲಿ ಬಿಜೆಪಿ, ಎರಡರಲ್ಲಿ ಜೆಡಿಯು ಮತ್ತು ಒಂದು ಕಡೆ ಆರ್‌ಜೆಡಿ ಮುನ್ನಡೆ ಪಡೆದಿವೆ.
1:49 AM, 11 Nov

ಇನ್ನು ಒಂಬತ್ತು ಕ್ಷೇತ್ರಗಳಲ್ಲಿ ಮತ ಎಣಿಕೆ ಬಾಕಿ ಇದೆ.
1:39 AM, 11 Nov

ಇದುವರೆಗೂ 233 ಕ್ಷೇತ್ರಗಳಲ್ಲಿ ಫಲಿತಾಂಶ ಪ್ರಕಟವಾಗಿದ್ದು, ಇನ್ನು 10 ಕ್ಷೇತ್ರಗಳ ಫಲಿತಾಂಶ ಬಾಕಿ ಇದೆ. ಇದರಲ್ಲಿ ನಾಲ್ಕರಲ್ಲಿ ಬಿಜೆಪಿ, ಮೂರರಲ್ಲಿ ಆರ್‌ಜೆಡಿ, ಎರಡರಲ್ಲಿ ಜೆಡಿಯು ಮತ್ತು ಒಂದು ಕ್ಷೇತ್ರದಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿವೆ.
Advertisement
1:35 AM, 11 Nov

229 ಸೀಟುಗಳಲ್ಲಿ ಫಲಿತಾಂಶ ಪ್ರಕಟಗೊಂಡಿದೆ. ಎನ್‌ಡಿಎ ಮೈತ್ರಿಕೂಟ ಒಟ್ಟು 116 ಸೀಟುಗಳಲ್ಲಿ ಜಯಗಳಿಸಿದೆ. ಮಹಾಘಟಬಂಧನ 105ರಲ್ಲಿ ಗೆದ್ದಿದೆ.
1:29 AM, 11 Nov

ತೇಜಸ್ವಿ ಯಾದವ್ ರಾಘೋಪುರ ಕ್ಷೇತ್ರದಿಂದ ಜಯಗಳಿಸಿದ್ದಾರೆ.
1:17 AM, 11 Nov

ಇನ್ನೂ 66 ಸುತ್ತುಗಳ ಎಣಿಕೆ ಮಾತ್ರ ಪೂರ್ಣಗೊಂಡಿದೆ. ಶೀಘ್ರದಲ್ಲಿಯೇ ಮುಗಿಯಲಿದೆ ಎಂಬ ಭರವಸೆ ಹೊಂದಿದ್ದೇವೆ. ಇನ್ನು ಒಂದು ಗಂಟೆಯಲ್ಲಿ ಅಂತಿಮ ಬಿಹಾರ ಲೆಕ್ಕಾಚಾರವನ್ನು ಪ್ರಕಟಿಸಲಿದ್ದೇವೆ- ಚುನಾವಣಾ ಆಯೋಗ
1:06 AM, 11 Nov

ಚುನಾವಣಾ ಸೋಲಿಗಾಗಿ ಆರ್‌ಜೆಡಿ ಇವಿಎಂಅನ್ನು ಖಂಡಿತಾ ದೂಷಿಸುತ್ತದೆ- ಸುಶೀಲ್ ಮೋದಿ
12:45 AM, 11 Nov

ಜನರು ಪ್ರಧಾನಿ ಮೋದಿ ಮೇಲೆ ತಮ್ಮ ನಂಬಿಕೆಯನ್ನು ಪುನಃ ಪ್ರದರ್ಶಿಸಿದ್ದಾರೆ. ಇದು ಅವರ ಗೆಲುವು. ಅಧಿಕಾರಕ್ಕಾಗಿ ಎಲ್‌ಜೆಪಿ ತಲೆಬಾಗದೆ ಇರುವುದಕ್ಕೆ ಹೆಮ್ಮೆ ಪಡುತ್ತೇವೆ. ನಮ್ಮ ಮತ ಹಂಚಿಕೆ ಏರಿಕೆಯಾಗಿದೆ- ಚಿರಾಗ್ ಪಾಸ್ವಾನ್
Advertisement
12:18 AM, 11 Nov

ನಮ್ಮ ಪ್ರಜಾಪ್ರಭುತ್ವ ಎಷ್ಟು ಗಟ್ಟಿಯಾಗಿದೆ ಎಂದು ಬಿಹಾರವು ಜಗತ್ತಿಗೆ ಹೇಳಿದೆ- ಮೋದಿ
12:08 AM, 11 Nov

ಪ್ರತಿ ವರ್ಗದ ಜನರೂ ಎನ್‌ಡಿಎ ಎಲ್ಲರೊಂದಿಗೆ ಎಲ್ಲರ ವಿಕಾಸ, ಎಲ್ಲರ ವಿಶ್ವಾಸ ಮಂತ್ರದ ಮೇಲೆನಂಬಿಕೆ ಇರಿಸಿದ್ದಾರೆ. ಬಿಹಾರದ ಪ್ರತಿ ಭಾಗದಲ್ಲಿಯೂ ಅಭಿವೃದ್ಧಿಯ ಭರವಸೆ ನೀಡುತ್ತೇನೆ ಎಂದು ಮೋದಿ ಹೇಳಿದ್ದಾರೆ.
11:57 PM, 10 Nov

'ಕರ್ನಾಟಕದ ಶಿರಾ ಮತ್ತು ರಾಜರಾಜೇಶ್ವರಿನಗರದಲ್ಲಿ ಬಿಜೆಪಿ ಗೆಲುವು ಸಾಧಿಸಿರುವುದು ಅತ್ಯಂತ ವಿಶೇಷವಾದದ್ದು. ಕೇಂದ್ರ ಹಾಗೂ ಬಿಎಸ್ ಯಡಿಯೂರಪ್ಪ ಅವರ ನೇತೃತ್ವದ ರಾಜ್ಯ ಸರ್ಕಾರದ ಸುಧಾರಣಾ ಕಾರ್ಯಸೂಚಿಗಳ ಮೇಲೆ ಜನರು ಹೊಂದಿರುವ ಸ್ಥಿರ ವಿಶ್ವಾಸವನ್ನು ಇದು ಪುನಃ ದೃಢೀಕರಿಸುತ್ತದೆ' ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
11:49 PM, 10 Nov

'ಹತ್ತಾರು ವಿಧಾನಸಭೆ ಕ್ಷೇತ್ರಗಳಲ್ಲಿ ಟ್ಯಾಂಪರಿಂಗ್ ಮಾಡಲಾಗಿದೆ. ಅವರು ಜನರ ತೀರ್ಪನ್ನು ಬದಲಿಸಲು ಪ್ರಯತ್ನಿಸುತ್ತಿದ್ದಾರೆ. ಅಷ್ಟು ಕೀಳು ಮಟ್ಟದ ಉದ್ದೇಶದ ಪ್ರಯತ್ನಗಳ ನಡುವೆಯೂ ನಾವು ಸರ್ಕಾರ ರಚಿಸಲಿದ್ದೇವೆ' ಎಂದು ಆರ್‌ಜೆಡಿ ಮುಖಂಡ ಮನೋಜ್ ಝಾ ಹೇಳಿದ್ದಾರೆ. 'ನಮ್ಮ ಅಹವಾಲುಗಳನ್ನು ಪರಿಶೀಲಿಸುವುದಾಗಿ ಚುನಾವಣಾ ಆಯೋಗ ಭರವಸೆ ನೀಡಿದೆ. ನಾವು ಚುನಾವಣಾ ಆಯೋಗವನ್ನು ನಂಬುತ್ತೇವೆ, ಆದರೆ ಜಿಲ್ಲಾ ಆಡಳಿತದ ಮೇಲೆ ನಮಗೆ ವಿಶ್ವಾಸವಿಲ್ಲ' ಎಂದು ಅವರು ತಿಳಿಸಿದ್ದಾರೆ.
11:38 PM, 10 Nov

ಚುನಾವಣಾ ಆಯೋಗವು ರಾತ್ರಿ ಒಂದು ಗಂಟೆಗೆ ಸುದ್ದಿಗೋಷ್ಠಿ ನಡೆಸಲಿದೆ
11:24 PM, 10 Nov

183 ಕ್ಷೇತ್ರಗಳ ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಲಾಗಿದೆ. ಎನ್‌ಡಿಎ 90, ಮಹಾಘಟಬಂಧನ 86 ಸೀಟುಗಳಲ್ಲಿ ಗೆದ್ದಿವೆ.
11:11 PM, 10 Nov

ಲಾಲೂ ಮಗ ತೇಜ್ ಪ್ರತಾಪ್ ಯಾದವ್ ಅವರ ಮಾವ ಚಂದ್ರಿಕಾ ರೈ, ಜೆಡಿಯುದಿಂದ ಸ್ಪರ್ಧಿಸಿ ಸೋಲು ಅನುಭವಿಸಿದ್ದಾರೆ.
11:03 PM, 10 Nov

ನಿತೀಶ್ ಅವರ ಜೆಡಿಯು 2015ರ ಚುನಾವಣೆಗಿಂತ 30 ಸೀಟುಗಳನ್ನು ಕಳೆದುಕೊಂಡಿದೆ.
10:50 PM, 10 Nov

ಲಾಲೂ ಪ್ರಸಾದ್ ಅವರ ಹಿರಿಯ ಮಗ, ಆರ್‌ಜೆಡಿ ಮುಖಂಡ ತೇಜ್ ಪ್ರತಾಪ್ ಯಾದವ್ ಹಾಸನ್ಪುರ ಕ್ಷೇತ್ರದಲ್ಲಿ ಜಯಗಳಿಸಿದ್ದಾರೆ.
10:47 PM, 10 Nov

ಚಿರಾಗ್ ಪಾಸ್ವಾನ್ ಅವರ ಲೋಕಜನಶಕ್ತಿ ಪಕ್ಷ ಒಂದು ಕ್ಷೇತ್ರದಲ್ಲಿ ಜಯಗಳಿಸಿದೆ.
10:34 PM, 10 Nov

ಗೆಲುವಿನ ಅಂತರ ತೀರಾ ಕಡಿಮೆ ಇರುವ ಕ್ಷೇತ್ರಗಳಲ್ಲಿ ಫಲಿತಾಂಶವನ್ನು ಘೋಷಣೆ ಮಾಡುವ ಮುನ್ನ, ಎಣಿಕೆ ಸಂದರ್ಭದಲ್ಲಿ ಅಸಿಂಧು ಎಂದು ತಿರಸ್ಕರಿಸಿದ ಅಂಚೆ ಮತಪತ್ರಗಳನ್ನು ರಿಟರ್ನಿಂಗ್ ಅಧಿಕಾರಿ ಮರುಪರಿಶೀಲನೆ ನಡೆಸುವುದು ಕಡ್ಡಾಯವಾಗಿದ- Election Commission
10:29 PM, 10 Nov

'ಸುಮಾರು ಒಂದು ಗಂಟೆಯ ಹಿಂದೆ ಪಕ್ಷವೊಂದು ತಾನು 119 ಸೀಟುಗಳಲ್ಲಿ ಗೆದ್ದಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಹೇಳಿಕೊಂಡಿದೆ. ರಾಜ್ಯದ ಎಲ್ಲ ಫಲಿತಾಂಶಗಳೂ ನಮ್ಮ ಪೋರ್ಟಲ್‌ನಲ್ಲಿ ಲಭ್ಯವಿದೆ ಎಂದು ಸ್ಪಷ್ಟಪಡಿಸುತ್ತೇನೆ. ಇದುವರೆಗೂ 146 ಸೀಟುಗಳಲ್ಲಿ ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಲಾಗಿದೆ. ಇದು ವಾಸ್ತವ ಸ್ಥಿತಿ' ಎಂದು ಉಪ ಚುನಾವಣಾ ಆಯುಕ್ತರು ತಿಳಿಸಿದ್ದಾರೆ.
10:23 PM, 10 Nov

ಬಿಜೆಪಿ ಅಭ್ಯರ್ಥಿ ಶ್ರೇಯಸಿ ಸಿಂಗ್ ಅವರು ಜಮುಯಿ ವಿಧಾನಸಭೆ ಕ್ಷೇತ್ರದಲ್ಲಿ ಜಯಗಳಿಸಿದ್ದಾರೆ.
10:16 PM, 10 Nov

ಚುನಾವಣಾ ಆಯೋಗವು ಯಾವುದೇ ಒತ್ತಡಕ್ಕೆ ಒಳಗಾಗಿಲ್ಲ. ಎಲ್ಲ ಅಧಿಕಾರಿಗಳು ಮತ್ತು ವ್ಯವಸ್ಥೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದೆ ಎಂದು ಆಯೋಗದ ಪ್ರಧಾನ ಕಾರ್ಯದರ್ಶಿ ಉಮೇಶ್ ಸಿನ್ಹಾ ಹೇಳಿದ್ದಾರೆ.
10:00 PM, 10 Nov

ಅತ್ಯಂತ ನಿಕಟ ಹಣಾಹಣಿ ಇರುವ ಕ್ಷೇತ್ರಗಳಲ್ಲಿ ಜೆಡಿಯು ಮತ್ತು ಬಿಜೆಪಿ ಮೈತ್ರಿಕೂಟದ ಪರವಾಗಿ ಫಲಿತಾಂಶ ಬರುವಂತೆ ಜಿಲ್ಲಾ ಹಾಗೂ ಚುನಾವಣಾ ಅಧಿಕಾರಿಗಳ ಮೇಲೆ ಒತ್ತಡ ಹೇರುವ ಸಂಚು ನಡೆಸುತ್ತಿದ್ದಾರೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ವಿರುದ್ಧ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಆರೋಪ ಮಾಡಿದ್ದಾರೆ.
9:43 PM, 10 Nov

ಆರ್‌ಜೆಡಿಯ ಪ್ರಮುಖ ಮುಖಂಡರಾದ ಅಬ್ದುಲ್ ಬಾರಿ ಸಿದ್ದಿಕಿ ಮತ್ತು ಲಾಲೂ ಪ್ರಸಾದ ಆಪ್ತ ಭೋಲಾ ಯಾದವ್ ಸೋಲು ಅನುಭವಿಸಿದ್ದಾರೆ.
9:29 PM, 10 Nov

15 ಸೀಟುಗಳ ಫಲಿತಾಂಶ ಪ್ರಕಟ ಬಾಕಿ ಇದ್ದು, ಎನ್‌ಡಿಎಗೆ ಬಹುಮತ ಗಳಿಸಲು ಆರು ಸೀಟುಗಳ ಅವಶ್ಯಕತೆ ಇದೆ. ಇದುವರೆಗೂ 92% ಮತಗಳ ಎಣಿಕೆ ಮುಗಿದಿದೆ.
9:05 PM, 10 Nov

243 ಸೀಟುಗಳ ಪೈಕಿ 74 ಕ್ಷೇತ್ರಗಳ ಫಲಿತಾಂಶ ಘೋಷಣೆಯಾಗಿದೆ. ಬಿಜೆಪಿ 22, ಆರ್‌ಜೆಡಿ 20, ಜೆಡಿಯು 13, ಕಾಂಗ್ರೆಸ್ 7 ಸ್ಥಾನಗಳಲ್ಲಿ ಗೆದ್ದಿವೆ.
READ MORE

English summary
Bihar Poll 2020 Live Updates In Kannada: Voting For 243 Assembly Seats In The State Will Be Held On October 28, Nov 3 And Nov 7 And Results Will Be Announced On Nov 10.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X