ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಹಾರ: ಚುನಾವಣೆ ಸಮೀಪದಲ್ಲಿಯೇ ಹೆಣ್ಣುಮಗುವಿಗೆ ಜನ್ಮ ನೀಡಿದ ಜೆಡಿಯು ಅಭ್ಯರ್ಥಿ

|
Google Oneindia Kannada News

ಪಟ್ನಾ, ಅಕ್ಟೋಬರ್ 19: ಬಿಹಾರ ವಿಧಾನಸಭೆ ಚುನಾವಣೆ ಸಮೀಪದಲ್ಲಿಯೇ ಜೆಡಿಯು ಅಭ್ಯರ್ಥಿಯೊಬ್ಬರು ಮಗುವಿಗೆ ಜನ್ಮ ನೀಡಿದ್ದಾರೆ. ಜಗದೀಶ್‌ಪುರ ವಿಧಾನಸಭೆ ಕ್ಷೇತ್ರದ ಅಭ್ಯರ್ಥಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ತಿಳಿಸಿದ್ದಾರೆ. ಕಣಕ್ಕೆ ಇಳಿಯಬೇಕಾದ ಅಭ್ಯರ್ಥಿ ಚುನಾವಣೆ ಸಂದರ್ಭದಲ್ಲಿ ಬಾಣಂತನದಲ್ಲಿ ತೊಡಗಿಸಿಕೊಳ್ಳಬೇಕಾದ ಅಪರೂಪದ ಪ್ರಸಂಗ ಇದಾಗಿದೆ.

ಪಂಚಾಯತಿ ಮುಖಂಡರಾದ ಸುಷುಮ್ಲತಾ ಕುಶ್ವಾಹ ಅವರು ಜಗದೀಶ್‌ಪುರ ಕ್ಷೇತ್ರದಿಂದ ಜೆಡಿಯು ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು, ಈ ಕ್ಷೇತ್ರದ ಏಕೈಕ ಮಹಿಳಾ ಅಭ್ಯರ್ಥಿಯಾಗಿದ್ದಾರೆ. 15 ಮಂದಿ ಇಲ್ಲಿ ಕಣಕ್ಕಿಳಿದಿದ್ದು, ಹಾಲಿ ಶಾಸಕ ಆರ್‌ಜೆಡಿಯ ರಂಬಿಶುನ್ ಸಿಂಗ್ ಲೋಹಿಯಾ ಮತ್ತು ಎಲ್‌ಜೆಪಿಯ ಭಗವಾನ್ ಸಿಂಗ್ ಕುಶ್ವಾಹ ಪ್ರಮುಖ ಸ್ಪರ್ಧಿಗಳಾಗಿದ್ದಾರೆ.

ಬಿಹಾರ ಚುನಾವಣೆ: ಬಿಜೆಪಿಯ ಮತ ಗಳಿಕೆಯಲ್ಲಿ ಭಾರಿ ಏರಿಕೆಬಿಹಾರ ಚುನಾವಣೆ: ಬಿಜೆಪಿಯ ಮತ ಗಳಿಕೆಯಲ್ಲಿ ಭಾರಿ ಏರಿಕೆ

ಜಗದೀಶ್‌ಪುರದಲ್ಲಿ ಚುನಾವಣಾ ಪ್ರಚಾರ ಸಭೆ ನಡೆಸಿದ ಮುಖ್ಯಮಂತ್ರಿ ನಿತೀಶ್ ಕುಮಾರ್, ಪಟ್ನಾದ ಆಸ್ಪತ್ರೆಯಲ್ಲಿರುವ ಸುಷುಮ್ಲತಾ ಕುಶ್ವಾಹ ಅವರನ್ನು ಅಭಿನಂದಿಸಿದರು. ಅಭ್ಯರ್ಥಿಯಾಗಿರುವ ಸುಷುಮ್ಲತಾ ಅವರಿಗೆ ತಮ್ಮದೇ ಕ್ಷೇತ್ರದ ಪ್ರಚಾರದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ. ಬಿಹಾರ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಕೂಡ ಈ ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದರು. ನಿತೀಶ್ ಕುಮಾರ್ ಅವರು ವೇದಿಕೆ ಮೇಲಿಂದಲೇ ಅಭ್ಯರ್ಥಿ ಹಾಗೂ ಅವರ ನವಜಾತ ಶಿಶುವಿಗೆ ಶುಭ ಹಾರೈಸಿದರು.

 Bihar Assembly Election 2020: JDU Candidate Gives Birth TO Baby Girl

"ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರಾ ಸಿಎಂ ನಿತೀಶ್ ಕುಮಾರ್?"

Recommended Video

Corona ರೋಗದ ಮೊದಲನೇ ಲಕ್ಷಣ ನೆಗಡಿ | Oneindia Kannada

2012ರಲ್ಲಿ ವಿವಾಹವಾಗಿದ್ದ ಜೆಡಿಯು ಅಭ್ಯರ್ಥಿ ಸುಷುಮ್ಲತಾ ಅವರಿಗೆ ಏಳು ವರ್ಷದ ಮಗಳು ಇದ್ದಾಳೆ. ಗ್ರಾಮ ಪಂಚಾಯತ್‌ನ ಅಧ್ಯಕ್ಷರಾದ ಅವರು ಗ್ರಾಮಸಭೆಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಗ್ರಾಮಸಭೆಗಳಲ್ಲಿನ ಅವರ ಸಾಧನೆ ನೋಡಿ ಜೆಡಿಯು ಅವರಿಗೆ ಟಿಕೆಟ್ ನೀಡಿದೆ. ಅಕ್ಟೋಬರ್ 28ರಂದು ಮೊದಲ ಹಂತದ ಚುನಾವಣೆಯಲ್ಲಿ ಜಗದೀಶ್‌ಪುರ ಕ್ಷೇತ್ರಕ್ಕೆ ಮತದಾನ ನಡೆಯಲಿದೆ.

English summary
Bihar Assembly Election 2020: Jagdishpur JDU candidate Sushumlata Kushwaha has delivered a baby girl just ahead of election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X