• search
 • Live TV
ಪಟ್ನಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಿಹಾರ ಚುನಾವಣೆ: ಅಂತಿಮ ಹಂತದ 35 ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಬಿಜೆಪಿ

|

ಪಟ್ನಾ, ಅಕ್ಟೋಬರ್ 14: ಬಿಹಾರ ವಿಧಾನಸಭೆ ಚುನಾವಣೆಗೆ ಬಿಜೆಪಿ ತನ್ನ ಮೂರನೇ ಮತ್ತು ಕೊನೆಯ ಹಂತದ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಬಿಹಾರದಲ್ಲಿ ಮೂರು ಹಂತದಲ್ಲಿ ಚುನಾವಣೆ ನಡೆಯಲಿದ್ದು, ನವೆಂಬರ್ 7ರಂದು ನಡೆಯಲಿರುವ ಮೂರನೇ ಹಂತದ ಚುನಾವಣೆಯಲ್ಲಿ ಕಣಕ್ಕಿಳಿಯುತ್ತಿರುವ ತನ್ನ 35 ಅಭ್ಯರ್ಥಿಗಳ ಹೆಸರನ್ನು ಬಿಜೆಪಿ ಪ್ರಕಟಿಸಿದೆ.

35 ಅಭ್ಯರ್ಥಿಗಳಲ್ಲಿ ಆರು ಮಂದಿ ಮಹಿಳಾ ಅಭ್ಯರ್ಥಿಗಳಿದ್ದಾರೆ. ರಾಮನಗರ ಕ್ಷೇತ್ರದಿಂದ ಭಾಗೀರಥಿ ದೇವಿ, ಪ್ರಾಣ್ಪುರದಿಂದ ನಿಶಾ ಸಿಂಗ್, ಕೋಡಾದಿಂದ ಕವಿತಾ ಪಾಸ್ವಾನ್, ನರ್ಕಟಿಯಾಗಂಜ್‌ನಿಂದ ರಶ್ಮಿ ವರ್ಮಾ, ಪರಿಹಾರ್ ಕ್ಷೇತ್ರದಿಂದ ಗಾಯತ್ರಿ ದೇವಿ ಮತ್ತು ಕಿಶನ್‌ಗಂಜ್‌ನಿಂದ ಸ್ವೀಟಿ ಸಿಂಗ್ ಅವರನ್ನು ಸ್ಪರ್ಧೆಗೆ ಇಳಿಸುತ್ತಿರುವುದಾಗಿ ಪಕ್ಷ ತಿಳಿಸಿದೆ.

ಬಿಹಾರ ಚುನಾವಣೆಯಲ್ಲಿ ಎನ್‌ಡಿಎ ದಿಗ್ವಿಜಯ: ಸಿ ವೋಟರ್ ಸಮೀಕ್ಷೆ

ನವೆಂಬರ್ 3ರಂದು ನಡೆಯಲಿರುವ ಎರಡನೆಯ ಹಂತದ ಚುನಾವಣೆಯಲ್ಲಿ ಕಣಕ್ಕಿಳಿಯುತ್ತಿರುವ 46 ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಭಾನುವಾರ ಬಿಡುಗಡೆ ಮಾಡಿತ್ತು. ಈ ಮೂಲಕ ಮೂರೂ ಹಂತಗಳ ಚುನಾವಣೆಗಳಲ್ಲಿ ಪಕ್ಷದಿಂದ ಸ್ಪರ್ಧಿಸುತ್ತಿರುವ ಎಲ್ಲ 110 ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ.

ಬಿಹಾರ ಚುನಾವಣೆ; ವಿಪಕ್ಷಗಳು ಖಾಲಿ ಕೈಯಲ್ಲಿ ಕೂತಿವೆ

   RR Nagar By election ಮೂಲಕ ಜೆಡಿಎಸ್ ಸಮಾಧಿ ಮಾಡಲು ಹೊರಟ್ರಾ ಡಿಕೆಶಿ! | Oneindia Kannada

   243 ಕ್ಷೇತ್ರಗಳ ವಿಧಾನಸಭೆಗೆ ಎನ್‌ಡಿಎ ಮೈತ್ರಿಕೂಟದ ಜೆಡಿಯು 115, ಬಿಜೆಪಿ 110 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿವೆ. ಇನ್ನು ಜಿತನ್ ರಾಮ್ ಮಾಂಝಿ ಅವರ ಎಚ್‌ಎಎಂ (ಎಸ್) ಮತ್ತು ವಿಕಾಸಶೀಲ ಇನ್ಸಾನ್ ಪಕ್ಷಗಳು ಕ್ರಮವಾಗಿ 7 ಮತ್ತು 11 ಸೀಟುಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿವೆ.

   English summary
   Bihar Assembly Election 2020: BJP on Wednesday releases its list of 35 candidates for 3rd and final phase of polls.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X