• search
  • Live TV
ಪಟ್ನಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಿಜೆಪಿ ಪೋಸ್ಟರ್‌ಗಳಲ್ಲಿ ನಿತೀಶ್‌ಗೆ ಜಾಗವಿಲ್ಲ!: ಚುನಾವಣೆ ಹೊಸ್ತಿಲಲ್ಲೇ ಎನ್‌ಡಿಎದಲ್ಲಿ ಸಂಘರ್ಷ?

|

ಪಟ್ನಾ, ಅಕ್ಟೋಬರ್ 26: ಬಿಹಾರ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಮೂರು ದಿನಗಳಷ್ಟೇ ಬಾಕಿ ಇರುವಾಗ ಎನ್‌ಡಿಎ ಮಿತ್ರಪಕ್ಷಗಳಾದ ಬಿಜೆಪಿ ಮತ್ತು ಜೆಡಿಯು ನಡುವೆ ಕಿಡಿ ಹೊತ್ತಿಕೊಳ್ಳುವ ಸಾಧ್ಯತೆ ಇದೆ.

ಚುನಾವಣೆಗೂ ಮುನ್ನ ಬಿಜೆಪಿ ಕಾರ್ಯಕರ್ತರು ರಾಜ್ಯದಾದ್ಯಂತ ಬೃಹತ್ ಜಾಹೀರಾತು ಮತ್ತು ಪೋಸ್ಟರ್‌ಗಳನ್ನು ಅಳವಡಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ದೊಡ್ಡ ಚಿತ್ರಗಳನ್ನು ಬಳಸಿರುವ ಈ ಜಾಹೀರಾತು ಜನರ ಗಮನ ಸೆಳೆದಿದೆ. ಅದಕ್ಕೆ ಕಾರಣ ಎನ್‌ಡಿಎ ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಬಿಜೆಪಿ ಬಿಂಬಿಸಿಕೊಂಡು ಬಂದಿರುವ ನಿತೀಶ್ ಕುಮಾರ್ ಅವರ ಫೋಟೊ ಯಾವ ಪೋಸ್ಟರ್‌ಗಳಲ್ಲಿಯೂ ಇಲ್ಲದಿರುವುದು.

ಎಲ್ ಜೆಪಿ ಅಧಿಕಾರಕ್ಕೆ ಬಂದರೆ ನಿತೀಶ್ ಗೆ ಜೈಲು: ಚಿರಾಗ್ ಪಾಸ್ವಾನ್ ಸ್ಪಷ್ಟನೆ

ಬಿಜೆಪಿ ಬಿಡುಗಡೆ ಮಾಡಿದ್ದ ಚುನಾವಣಾ ಪ್ರಣಾಳಿಕೆಯೂ ಪಕ್ಷವು ನರೇಂದ್ರ ಮೋದಿ ಅವರ ಹೆಸರನ್ನು ಬಳಸಿಕೊಂಡೇ ಮತಯಾಚನೆ ಮಾಡುವುದರ ಸುಳಿವು ನೀಡಿತ್ತು. ಈಗ ಸ್ಥಳೀಯ ಭಾಷಾ ಪತ್ರಿಕೆಗಳಲ್ಲಿ ಮತದಾರರನ್ನು ಓಲೈಸುವ ಜಾಹೀರಾತು ನೀಡಿರುವ ಬಿಜೆಪಿ, ಅದರಲ್ಲಿ ಪ್ರಧಾನಿಯ ಫೋಟೊವನ್ನು ಮಾತ್ರವೇ ದೊಡ್ಡದಾಗಿ ಬಳಸಿವೆ. ಇದರಲ್ಲಿ ನಿತೀಶ್ ಕುಮಾರ್ ಅವರ ಫೋಟೊ ಇಲ್ಲದೆ ಇರುವುದು ಎನ್‌ಡಿಎ ಕೂಟದಲ್ಲಿ ಎಲ್ಲವೂ ಸರಿಯಿಲ್ಲವೇನೂ ಎಂಬ ಊಹಾಪೋಹಗಳನ್ನು ಹುಟ್ಟುಹಾಕಿದೆ. ಮುಂದೆ ಓದಿ.

ಮೋದಿ-ನಿತೀಶ್ ಜಂಟಿ ಪ್ರಚಾರ

ಮೋದಿ-ನಿತೀಶ್ ಜಂಟಿ ಪ್ರಚಾರ

ಅಕ್ಟೋಬರ್ 28ರಂದು ಮೊದಲ ಹಂತದ ಚುನಾವಣೆ ನಡೆಯುವ ಸಂದರ್ಭದಲ್ಲಿ ಎರಡನೆಯ ಹಂತದಲ್ಲಿ ಮತದಾನ ನಡೆಯುವ ಪಟ್ನಾ, ದರ್ಭಾಂಗಾ ಮತ್ತು ಮುಜಫ್ಫರ್‌ಪುರಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಸಮಾವೇಶಗಳಲ್ಲಿ ಭಾಗವಹಿಸಿ ಭಾಷಣ ಮಾಡಲಿದ್ದಾರೆ. ಪಟ್ನಾದಲ್ಲಿನ ಸಮಾವೇಶದಲ್ಲಿ ಮೋದಿ ಹಾಗೂ ನಿತೀಶ್ ಇಬ್ಬರೂ ವೇದಿಕೆ ಹಂಚಿಕೊಳ್ಳಲಿದ್ದಾರೆ. ಅದಕ್ಕೂ ಮುನ್ನ ಬಿಜೆಪಿಯ ಈ ಪೋಸ್ಟರ್‌ಗಳು ಜೆಡಿಯು ಕಾರ್ಯಕರ್ತರಲ್ಲಿ ಅಸಮಾಧಾನ ಮೂಡಿಸಿದೆ.

ಸಿಎಂ ನಿತೀಶ್ ಕುಮಾರ್ ದಣಿದಿದ್ದಾರೆ ಎಂದಿದ್ದೇಕೆ ತೇಜಸ್ವಿ ಯಾದವ್?

ಮೋದಿ ಫೋಟೊ ಬಳಸಿದ್ದ ಜೆಡಿಯು

ಮೋದಿ ಫೋಟೊ ಬಳಸಿದ್ದ ಜೆಡಿಯು

'ಬಿಜೆಪಿ ಇದ್ದಲ್ಲಿ ನಂಬಿಕೆ ಇರುತ್ತದೆ' ಎಂದು ನರೇಂದ್ರ ಮೋದಿ ಅವರ ಫೋಟೊಗಳನ್ನು ಒಳಗೊಂಡ ಪೋಸ್ಟರ್ ಹಾಗೂ ಪತ್ರಿಕೆ ಜಾಹೀರಾತುಗಳಲ್ಲಿ ಬರೆಯಲಾಗಿದೆ. ಚುನಾವಣೆ ಘೋಷಣೆಯಾದ ಸಂದರ್ಭದಿಂದಲೂ ಜೆಡಿಯು ತನ್ನ ಪ್ರಚಾರ ಜಾಹೀರಾತುಗಳಲ್ಲಿ ನಿತೀಶ್ ಕುಮಾರ್ ಹಾಗೂ ನರೇಂದ್ರ ಮೋದಿ ಇಬ್ಬರ ಫೋಟೊಗಳನ್ನೂ ಬಳಸುತ್ತಿದೆ.

ಚಿರಾಗ್ ಪಾಸ್ವಾನ್‌ಗೆ ಖುಷಿ

ಚಿರಾಗ್ ಪಾಸ್ವಾನ್‌ಗೆ ಖುಷಿ

ಬಿಜೆಪಿಯ ಜಾಹೀರಾತನ್ನು ಹಂಚಿಕೊಂಡಿರುವ ಎನ್‌ಡಿಎದ ಮಾಜಿ ಮಿತ್ರಪಕ್ಷ ಎಲ್‌ಜೆಪಿಯ ನಾಯಕ ಚಿರಾಗ್ ಪಾಸ್ವಾನ್, 'ಬಿಜೆಪಿ ಜಾಹೀರಾತುಗಳಲ್ಲಿ ಪ್ರಧಾನಿಯ ಫೋಟೊಗಳು ಮಾತ್ರವೇ ಇರುವುದು ನನಗೆ ಸಂತೋಷ ತಂದಿದೆ. ನಿತೀಶ್ ಕುಮಾರ್ ಫೋಟೊಗಳನ್ನು ಬಳಸುವುದು ತಮಗೆ ಮಾರಕವಾಗಲಿದೆ ಎನ್ನುವುದನ್ನು ನನ್ನ ಬಿಜೆಪಿ ಸ್ನೇಹಿತರು ಅರಿತುಕೊಂಡಿದ್ದಾರೆ' ಎಂದು ಟ್ವೀಟ್ ಮಾಡಿದ್ದಾರೆ.

"ಬಿಹಾರದಲ್ಲಿ ರಾಮ ಮಂದಿರಕ್ಕಿಂತ ದೊಡ್ಡ ಸೀತಾದೇವಿ ದೇಗುಲ ನಿರ್ಮಾಣ"

ಪ್ರತಿಕ್ರಿಯಿಸಲು ಮುಖಂಡರ ಹಿಂದೇಟು

ಪ್ರತಿಕ್ರಿಯಿಸಲು ಮುಖಂಡರ ಹಿಂದೇಟು

ಚುನಾವಣೆ ಹೊಸ್ತಿಲಿನಲ್ಲಿ ಬಿಜೆಪಿಯ ಈ ನಡೆ ಕುತೂಹಲ ಮೂಡಿಸಿದೆ. ಹಾಗೆಯೇ ಜೆಡಿಯು ಮತ್ತು ಬಿಜೆಪಿಯ ಮುಖಂಡರು ಇದರ ಬಗ್ಗೆ ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕುತ್ತಿರುವುದು ಇದು ಮತ್ತಷ್ಟು ಸೂಕ್ಷ್ಮವಾಗುವ ಸಾಧ್ಯತೆ ಇದೆ. 'ಇದರ ಬಗ್ಗೆ ಏನನ್ನಾದರೂ ಹೇಳುವುದು ಸುಲಭವಲ್ಲ. ನಾನೇನು ಹೇಳುವುದು? ಬಿಜೆಪಿಯವರು ಸನ್ನಿವೇಶವನ್ನು ಸಂಕೀರ್ಣಗೊಳಿಸಿದ್ದಾರೆ' ಎಂದು ಜೆಡಿಯು ಮುಖಂಡರೊಬ್ಬರು ಹೇಳಿದ್ದಾರೆ. 'ಇದು ಪಕ್ಷದ ವಿಚಾರ. ನಾನೇನೂ ಹೇಳುವುದಿಲ್ಲ' ಎಂದು ಬಿಜೆಪಿ ಅಭ್ಯರ್ಥಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.

English summary
Bihar Assembly Election 2020: BJP put up life size posters with only Narendra Modi's image, but leaves out Nitish Kumar sparks row in NDA.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X