ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಹಾರದಲ್ಲಿ ಗುಡುಗು, ಸಿಡಿಲಿಗೆ ಇಂದು ಒಂದೇ ದಿನದಲ್ಲಿ 83 ಜನರು ಬಲಿ..!

|
Google Oneindia Kannada News

ಪಾಟ್ನಾ, ಜೂನ್ 25: ಬಿಹಾರದಲ್ಲಿ ಪ್ರವಾಹದ ಮುನ್ಸೂಚನೆ ಜೊತೆಗೆ ಹವಾಮಾನದ ಬಗ್ಗೆ ರೆಡ್ ಅಲರ್ಟ್ ನೀಡಿದೆ. ಇದರ ನಡುವೆ ದೊಡ್ಡ ಆಘಾತಕಾರಿ ಸುದ್ದಿ ಹೊರಬಿದ್ದಿದ್ದು, ಇಂದು ಒಂದೇ ದಿನದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಿಡಿಲಿಗೆ 83 ಸಾವನ್ನಪ್ಪಿದ್ದಾರೆ.

ಬಿಹಾರದ ಗೋಪಾಲ್‌ಗಂಜ್, ಸಿವಾನ್, ಮಧುಬನಿ, ಮೋತಿಹಾರಿ, ದರ್ಭಂಗದಲ್ಲಿ ಸಿಡಿಲಿಗೆ ಒಟ್ಟು 83 ಜನರು ಸಾವನ್ನಪ್ಪಿದ್ದಾರೆ. ಗೋಪಾಲ್‌ಗಂಜ್‌ನಲ್ಲಿ 13 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಅದೇ ಸಮಯದಲ್ಲಿ, ಸಿವಾನ್‌ನಲ್ಲಿ ಐದು ಜನರು ಸಾವನ್ನಪ್ಪಿದರು. ಮಧುಬನಿ ಮತ್ತು ಮೋತಿಹರಿಯಲ್ಲಿ ತಲಾ ಇಬ್ಬರು ಮೃತಪಟ್ಟಿದ್ದಾರೆ. ದರ್ಬಂಗದಲ್ಲೂ ವ್ಯಕ್ತಿಯೊಬ್ಬರು ಸಿಡಿಲಿಗೆ ಬಲಿಯಾಗಿದ್ದಾರೆ. ಮೃತರ ಕುಟುಂಬಗಳಿಗೆ ಸಿಎಂ ನಿತೀಶ್ ಕುಮಾರ್ 4 ಲಕ್ಷ ರೂಪಾಯಿಗಳ ಆರ್ಥಿಕ ನೆರವು ಘೋಷಿಸಿದ್ದಾರೆ.

ನೇಪಾಳ ಬಾರ್ಡರ್‌ನಲ್ಲಿ ಭಾರತೀಯನ ಹತ್ಯೆ : ನಿಜಕ್ಕೂ ಅಲ್ಲಿ ಏನಾಯಿತು?ನೇಪಾಳ ಬಾರ್ಡರ್‌ನಲ್ಲಿ ಭಾರತೀಯನ ಹತ್ಯೆ : ನಿಜಕ್ಕೂ ಅಲ್ಲಿ ಏನಾಯಿತು?

ಅದೇ ಸಮಯದಲ್ಲಿ, ಅನೇಕ ಜಿಲ್ಲೆಗಳಲ್ಲಿ 12 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮಾಹಿತಿಯ ಪ್ರಕಾರ, ಗೋಪಾಲ್‌ಗಂಜ್‌ನಲ್ಲಿ ಮೃತಪಟ್ಟವರೆಲ್ಲರೂ ಬಾರೌಲಿ, ಮಂಜಾ, ವಿಜಯಪುರ, ಉಚ್ಕಾಗಾಂವ್, ಕಟೇಯ ಪ್ರದೇಶದ ನಿವಾಸಿಗಳು. ಮೃತಪಟ್ಟವರೆಲ್ಲರೂ ರೈತರು ಮತ್ತು ಭತ್ತವನ್ನು ನೆಡಲು ಹೊರಟವರು ಎಂದು ಹೇಳಲಾಗುತ್ತಿದೆ.

Bihar: 83 Killed In Single Day Due To Lightning

ಸದರ್ ಅನಮಂಡಲ್‌ನಲ್ಲಿ ಸಿಡಿಲು ಬಡಿದು ಇದುವರೆಗೆ 7 ಜನರು ಸಾವನ್ನಪ್ಪಿದ್ದಾರೆ ಎಂದು ಗೋಪಾಲ್‌ಗಂಜ್ ಸದರ್ ಎಸ್‌ಡಿಎಂ ಉಪೇಂದ್ರ ಪಾಲ್ ಹೇಳಿದ್ದಾರೆ. ಹತುವಾ ಉಪವಿಭಾಗದಲ್ಲಿ 6 ಜನರು ಸಾವನ್ನಪ್ಪಿದ್ದಾರೆ.

ಬಲವಾದ ಮಳೆಯ ನಡುವೆ ಜನರು ಜಿಲ್ಲೆಯ ವಿವಿಧ ಬ್ಲಾಕ್‌ಗಳಲ್ಲಿ ಹೊಲಗಳಲ್ಲಿ ಕೆಲಸ ಮಾಡುತ್ತಿದ್ದರು. ನಂತರ ಅವರು ಸಿಡಿಲಿಗೆ ಬಲಿಯಾದರು. ಸಿವಾನ್‌ನಲ್ಲಿ ಸಿಡಿಲು ಬಡಿದು 5 ಜನರು ಮೃತಪಟ್ಟಿದ್ದಾರೆ. ಮೂವರು ಗಾಯಗೊಂಡಿದ್ದರೆ. ಗಾಯಗೊಂಡವರೆಲ್ಲರೂ ಸಿವಾನ್ ಸದರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಗೊಂಡ ಇಬ್ಬರ ಸ್ಥಿತಿ ಗಂಭೀರವಾಗಿದೆ. ಇಲ್ಲಿಯೂ ಮೃತರು ಹೊಲದಲ್ಲಿ ಭತ್ತ ನೆಡುತ್ತಿದ್ದರು.

English summary
According to the Bihar government, 83 people were killed in various districts today due to lightning.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X