India
  • search
  • Live TV
ಪಟ್ನಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭಾರತ ಬಂದ್‌ ಹಿನ್ನೆಲೆ: ಬಿಹಾರದ 20 ಜಿಲ್ಲೆಗಳಲ್ಲಿ ಇಂಟರ್‌ನೆಟ್ ಸ್ಥಗಿತ

|
Google Oneindia Kannada News

ಪಾಟ್ನಾ, ಜೂ. 20: ಹಿಂಸಾತ್ಮಕ ಪ್ರತಿಭಟನೆಗಳಿಗೆ ಕಾರಣವಾಗಿರುವ ಹೊಸ ರಕ್ಷಣಾ ನೇಮಕಾತಿ ಯೋಜನೆ ಅಗ್ನಿಪಥ್ ವಿರುದ್ಧ ಕರೆ ನೀಡಿರುವ ಭಾರತ್ ಬಂದ್ ಹಿನ್ನೆಲೆಯಲ್ಲಿ ಸೋಮವಾರ ಬಿಹಾರದ 20 ಜಿಲ್ಲೆಗಳಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.

ನಿತೀಶ್ ಕುಮಾರ್ ನೇತೃತ್ವದ ರಾಜ್ಯ ಸರ್ಕಾರವು ಕಳೆದ ವಾರ ತನ್ನ ಸಮ್ಮಿಶ್ರ ಸರ್ಕಾರದ ಪಾಲುದಾರ ಭಾರತೀಯ ಜನತಾ ಪಕ್ಷದಿಂದ (ಬಿಜೆಪಿ) ಪ್ರತಿಭಟನೆಗಳನ್ನು ನಿಯಂತ್ರಿಸಲು ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳದ ಕಾರಣದಿಂದ ಟೀಕೆಗೆ ಒಳಗಾಗಿದೆ. ಮುಂಜಾಗ್ರತೆಯಿಂದ ಶುಕ್ರವಾರದಿಂದ 15 ಜಿಲ್ಲೆಗಳಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲು ಪ್ರಾರಂಭಿಸಿತು. ಭಾನುವಾರದ ಇತ್ತೀಚಿನ ಆದೇಶವು 15 ಜಿಲ್ಲೆಗಳಲ್ಲಿ ಇಂಟರ್ನೆಟ್ ಸೇವೆಗಳ ನಿಷೇಧವನ್ನು ವಿಸ್ತರಿಸಿದೆ.

ಅಗ್ನಿಪಥ ಹೋರಾಟ: ಬಿಹಾರದಲ್ಲಿ 700 ಕೋಟಿ ಮೌಲ್ಯದ ರೈಲ್ವೆ ಆಸ್ತಿ ನಾಶಅಗ್ನಿಪಥ ಹೋರಾಟ: ಬಿಹಾರದಲ್ಲಿ 700 ಕೋಟಿ ಮೌಲ್ಯದ ರೈಲ್ವೆ ಆಸ್ತಿ ನಾಶ

ಬಿಹಾರದ 38 ಜಿಲ್ಲೆಗಳಲ್ಲಿ ವ್ಯಾಪ್ತಿಯಲ್ಲಿ ಅರ್ಧಕ್ಕಿಂತ ಹೆಚ್ಚು ಜಿಲ್ಲೆಗಳನ್ನು ಒಳಗೊಂಡಿರುವ ಐದು ಜಿಲ್ಲೆಗಳಲ್ಲಿ ನಿರ್ಬಂಧವನ್ನು ವಿಧಿಸಿದೆ. ಅವುಗಳಲ್ಲಿ ಕೈಮೂರ್, ಭೋಜ್‌ಪುರ್, ಔರಂಗಾಬಾದ್, ರೋಹ್ತಾಸ್, ಬಕ್ಸರ್, ನಾವಡಾ, ಪಶ್ಚಿಮ ಚಂಪಾರಣ್, ಪೂರ್ವ ಚಂಪಾರಣ್, ಸಮಸ್ತಿಪುರ್, ಲಖಿಸಾರೈ, ಬೇಗುಸರಾಯ್, ವೈಶಾಲಿ, ಸರನ್, ಮುಜಾಫರ್‌ಪುರ, ದರ್ಬಂಗಾ, ಗಯಾ, ಮಧುಬನಿ, ಜೆಹಾನಾಬಾದ್, ಖಗರಿಯಾ ಮತ್ತು ಶೇಖ್‌ಪುರ ಇವೇ ಮೊದಲಾದ ಜಿಲ್ಲೆಗಳಾಗಿವೆ.

 ಕಾನೂನು ಮತ್ತು ಸುವ್ಯವಸ್ಥೆ ಕಾರಣ

ಕಾನೂನು ಮತ್ತು ಸುವ್ಯವಸ್ಥೆ ಕಾರಣ

ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸುವುದು, ಬೃಹತ್ ಎಸ್‌ಎಂಎಸ್‌ (ಬ್ಯಾಂಕಿಂಗ್ ಮತ್ತು ಮೊಬೈಲ್ ರೀಚಾರ್ಜ್ ಹೊರತುಪಡಿಸಿ) ಸೇರಿದಂತೆ ಎಲ್ಲಾ ಎಸ್‌ಎಂಎಸ್‌ ಸೇವೆಗಳು ಮತ್ತು ಮೊಬೈಲ್ ನೆಟ್‌ವರ್ಕ್‌ಗಳಲ್ಲಿ ಒದಗಿಸಲಾದ ಎಲ್ಲಾ ಡಾಂಗಲ್ ಸೇವೆಗಳನ್ನು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಮತ್ತು ವದಂತಿಗಳ ಹರಡುವಿಕೆಯನ್ನು ತಡೆಯಲು ಇಂಟರ್‌ನೆಟ್‌ ನಿರ್ಬಂಧಿಸಿ ಆದೇಶಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಗ್ನಿಪಥ್ ಯೋಜನೆ ಖಂಡಿಸಿ ಜೂನ್ 18ರಂದು ಬಿಹಾರ್ ಬಂದ್‌ಗೆ ಕರೆಅಗ್ನಿಪಥ್ ಯೋಜನೆ ಖಂಡಿಸಿ ಜೂನ್ 18ರಂದು ಬಿಹಾರ್ ಬಂದ್‌ಗೆ ಕರೆ

 ಪಿಂಚಣಿ ನಿಬಂಧನೆಗಳ ಕೊರತೆ

ಪಿಂಚಣಿ ನಿಬಂಧನೆಗಳ ಕೊರತೆ

17.5 ರಿಂದ 21 ವರ್ಷದೊಳಗಿನ ಯುವಕರನ್ನು ನಾಲ್ಕು ವರ್ಷದ ಅವಧಿಗೆ ನೇಮಕ ಮಾಡಿಕೊಳ್ಳುವ ಅಗ್ನಿಪಥ್ ಯೋಜನೆಯನ್ನು ಸರ್ಕಾರ ಹಿಂಪಡೆಯಬೇಕು ಎಂದು ಒತ್ತಾಯಿಸಿ ಪ್ರತಿಭಟನಾಕಾರರು ಬಿಜೆಪಿ ನಾಯಕರು ಮತ್ತು ಪಕ್ಷದ ಕಚೇರಿಗಳ ದಾಳಿ ನಡೆಸಿದ ಹಿನ್ನೆಲೆ ಭದ್ರತೆಯನ್ನು ಪೊಲೀಸ್‌ ಅಧಿಕಾರಿಗಳು ಹೆಚ್ಚಿಸಿದ್ದಾರೆ. ಅಧಿಕಾರಾವಧಿ ಮತ್ತು ಮುಂಚಿತವಾಗಿ ಬಿಡುಗಡೆಯಾದವರಿಗೆ ಪಿಂಚಣಿ ನಿಬಂಧನೆಗಳ ಕೊರತೆಯ ಬಗ್ಗೆ ಟೀಕೆಗಳ ನಡುವೆ ಪ್ರತಿಭಟನೆಗಳು ಭುಗಿಲೆದ್ದ ನಂತರ, ಸರ್ಕಾರವು ಗುರುವಾರ ಒಂದು ಬಾರಿ ವಿನಾಯಿತಿಯಾಗಿ 23 ವರ್ಷದೊಳಗಿನವರು ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಟ್ಟಿತ್ತು.

 ಗಲಭೆಕೋರರನ್ನು ಎದುರಿಸಲು ಸನ್ನದ್ಧ

ಗಲಭೆಕೋರರನ್ನು ಎದುರಿಸಲು ಸನ್ನದ್ಧ

ಕಿಶನ್‌ಗಂಜ್, ಸಹರ್ಸಾ, ಸುಪೌಲ್, ಮಾಧೇಪುರ, ಪೂರ್ಣಿಯಾ, ಮೋತಿಹಾರಿ, ದರ್ಬಂಗಾ, ನೌಗಾಚಿಯಾ, ಭಾಗಲ್‌ಪುರ, ಕತಿಹಾರ್‌ನಲ್ಲಿರುವ ಬಿಜೆಪಿ ಕಚೇರಿಗಳನ್ನು ಭದ್ರಪಡಿಸಲು ಭಾರತ- ನೇಪಾಳ ಗಡಿಯಲ್ಲಿ ನಿಯೋಜಿಸಲಾದ ಗಡಿ ಕಾವಲು ಪಡೆಗೆ ಸಶಸ್ತ್ರ ಸೀಮಾ ಬಾಲ್ (ಎಸ್‌ಎಸ್‌ಬಿ) ತಿಳಿಸಲಾಗಿದೆ ಎಂದು ಬಿಹಾರ ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಬಿಜೆಪಿ ಪಕ್ಷದ ಕಚೇರಿಗಳಲ್ಲಿ ಒಂದು ತುಕಡಿ ಪಡೆಯನ್ನು ನಿಯೋಜಿಸಲಾಗಿದೆ ಎಂದು ಪಾಟ್ನಾದ ಎಸ್‌ಎಸ್‌ಬಿಯ ಫ್ರಾಂಟಿಯರ್ ಹೆಡ್‌ಕ್ವಾರ್ಟರ್ಸ್‌ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಲ್ಲದೆ ಈಸ್ಟ್ ಸೆಂಟ್ರಲ್ ರೈಲ್ವೇಯ ರೈಲ್ವೇ ಪ್ರೊಟೆಕ್ಷನ್ ಫೋರ್ಸ್‌ನ ಭದ್ರತಾ ಕಮಿಷನರ್, ಗಲಭೆಕೋರರನ್ನು ಕಟ್ಟುನಿಟ್ಟಾಗಿ ಎದುರಿಸಲು ಎಲ್ಲಾ ಘಟಕಗಳನ್ನು ಸನ್ನದ್ಧವಾಗಿರುವಂತೆ ಸೂಚಿಸಿದ್ದಾರೆ.

 ರಾಜ್ಯದಾದ್ಯಂತ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ಕಾರ್ಯ

ರಾಜ್ಯದಾದ್ಯಂತ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ಕಾರ್ಯ

ಬಿಹಾರದ ಹೆಚ್ಚುವರಿ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಸಂಜಯ್ ಸಿಂಗ್ ಅವರು, ರಾಜ್ಯ ಪೊಲೀಸರು ಅಲರ್ಟ್ ಆಗಿದ್ದಾರೆ. ರಾಜ್ಯದಾದ್ಯಂತ 15 ಕಂಪನಿಗಳಲ್ಲಿ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು (CAPFs) ಮತ್ತು 35 ಕಂಪನಿಗಳ ಬಿಹಾರ ರಾಜ್ಯ ಸಹಾಯಕ ಪೊಲೀಸ್ (BSAP) ಅನ್ನು ನಿಯೋಜಿಸಿದ್ದಾರೆ ಎಂದು ಹೇಳಿದ್ದಾರೆ.

English summary
Mobile Internet services have been discontinued in 20 districts of Bihar on Monday following a call by Bharat Bandh against the new Defense Recruitment Agnipath Scheme, which has led to violent protests.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X