• search
 • Live TV
ಪಟ್ನಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರೈತರ ಆದಾಯ ದುಪ್ಪಟ್ಟಾಗಲ್ಲ, ಕುಸಿಯುತ್ತಿದೆ: ತೇಜಸ್ವಿ ಯಾದವ್

|

ಪಾಟ್ನಾ, ಸೆ. 25: ಕೇಂದ್ರ ಸರಕಾರದ ರೈತ ಹಾಗೂ ಕೃಷಿಕೂಲಿಕಾರರು, ಕಸುಬುದಾರರ ಆಧಾರಿತ ಕೃಷಿ ವಿರೋಧಿಯಾದ ಕಾರ್ಪೊರೇಟ್ ಕಂಪನಿಗಳ ಪರವಾದ ಕೃಷಿ ಸಂಬಂಧಿತ ವಿಧೇಯಕರನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಸೆಪ್ಟಂಬರ್ 25 ರಂದು ದೇಶದೆಲ್ಲೆಡೆ ರೈತ ಸಂಘಟನೆಗಳು ಭಾರತ್ ಬಂದ್ ನಡೆಸುತ್ತಿವೆ. ಬಿಹಾರದಲ್ಲಿ ಚುನಾವಣೆ ಮುಂದಿಟ್ಟುಕೊಂಡು ರೈತದ ಸಮಸ್ಯೆ ರಾಜಕೀಯ ವಿಷಯವಾಗಿ ಪರಿಣಮಿಸಿದ್ದು, ಬಿಜೆಪಿ ಮಿತ್ರಪಕ್ಷಗಳು ಕೂಡಾ ಅನಿವಾರ್ಯವಾಗಿ ಕಣಕ್ಕಿಳಿದಿವೆ.

ಈ ನಡುವೆ ಬಿಹಾರದಲ್ಲಿ ಎನ್ಡಿಎ ಮಿತ್ರಪಕ್ಷ ರಾಷ್ಟ್ರೀಯ ಜನತಾ ದಳ(ಆರ್ ಜೆ ಡಿ) ಮುಖಂಡ ತೇಜಸ್ವಿ ಯಾದವ್ ಅವರು ಟ್ರ್ಯಾಕ್ಟರ್ ಮೇಲೆ ಕುಳಿತು ರಸ್ತೆ ತಡೆ, ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಮಾತನಾಡಿ, ರೈತರ ಆದಾಯವನ್ನು 2022ರೊಳಗೆ ದ್ವಿಗುಣಗೊಳಿಸುವುದಾಗಿ ಕೇಂದ್ರ ಸರ್ಕಾರ ಘೋಷಿಸಿತ್ತು. ಈಗ ಮಂಡನೆಯಾಗಿರುವ ವಿಧೇಯಕದಿಂದ ಕೈಗೆ ಬರುತ್ತಿರುವ ಆದಾಯವೂ ಖೋತಾ ಆಗಲಿದೆ ಎಂದಿದ್ದಾರೆ.

ಸೆಪ್ಟೆಂಬರ್ 25ರಂದು ಭಾರತ್ ಬಂದ್ ಆಚರಣೆಗೆ ರೈತ ಸಂಘ ಕರೆ

ಹರ್ಯಾಣ, ಪಂಜಾಬ್, ಬಿಹಾರ, ಉತ್ತರಪ್ರದೇಶದ ಕೆಲವೆಡೆ ಬಂದ್ ಬಿಸಿ ಜೋರಾಗಿ ತಟ್ಟಿದೆ. ಎನ್ಡಿಎ ಮಿತ್ರಪಕ್ಷ ಶಿರೋಮಣಿ ಅಕಾಲಿ ದಳ ಪಂಜಾಬ್ ನಲ್ಲಿ ರೈತರ ಪರ ನಿಂತಿದ್ದರೆ. ಕಾಂಗ್ರೆಸ್ ಸೇರಿದಂತೆ ವಿವಿಧ ವಿಪಕ್ಷಗಳು ರೈತ ಸಂಘಟನೆಗಳ ಪ್ರತಿಭಟನೆಗೆ ಬೆಂಬಲ ನೀಡಿವೆ.

ಭಾರತೀಯ ಕಿಸಾನ್ ಯೂನಿಯನ್ (BKU), ಅಖಿಲ ಭಾರತ ರೈತರ ಒಕ್ಕೂಟ (AIFU), ಅಖಿಲ ಭಾರತ ಕಿಸಾನ್ ಸಂಘರ್ಷಣ ಸಮನ್ವಯ ಸಮಿತಿ (AIKSCC), ಅಖಿಲ ಭಾರತ ಕಿಸಾನ್ ಮಹಾಸಂಘ್(AIKM), ಮಹಾರಾಷ್ಟ್ರ, ತಮಿಳುನಾಡು, ಪಂಜಾಬ್ ,ಹರ್ಯಾಣದ ವಿವಿಧ ರೈತ ಸಂಘಟನೆಗಳು ಬೆಂಬಲಿಸಿವೆ. ಕರ್ನಾಟಕದಲ್ಲಿ ರೈತ ಸಂಘಟನೆಗಳು ಬಂದ್ ಬದಲಿಗೆ ರಸ್ತೆ ತಡೆ ನಡೆಸಿವೆ.

   ಭಾರತದ ಪವರ್ ಗೆ ಶಾಕ್ ಆದ China | Oneindia Kannada

   ಅನ್ನದಾತರಲ್ಲಿ ಫಂಡ್ ದಾತರನ್ನಾಗಿಸಿಕೊಂಡು ರೈತವಿರೋಧಿ ನಿಲುವು ತಳೆದಿರುವ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸುತ್ತೇವೆ. ಕಾರ್ಪೊರೇಟ್ ಕೈಗೆ ಕೃಷಿ ವಲಯ ನೀಡುವುದಕ್ಕೆ ಬಿಡುವುದಿಲ್ಲ ಎಂದಿದ್ದಾರೆ.

   English summary
   Bharat Bandh: RJD leader Tejashwi Yadav has attacked the government over the farm bills, saying it had promised to double farmers' income by 2022 but these farm bills will make them poorer.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X