• search
  • Live TV
ಪಟ್ನಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಗಂಗೆಯಲ್ಲಿ ಶವಗಳ ರಾಶಿ, ನಮ್ಮದಲ್ಲ ಉತ್ತರ ಪ್ರದೇಶದ್ದು ಎಂದ ಬಿಹಾರ

|
Google Oneindia Kannada News

ಪಾಟ್ನಾ, ಮೇ 10: ಪವಿತ್ರ ಗಂಗಾನದಿಯಲ್ಲಿ ಶವಗಳ ರಾಶಿ ರಾಶಿ ಹರಿದುಬಂದಿದೆ, ಇದು ಕಂಡುಬಂದಿದ್ದು, ಬಿಹಾರದಲ್ಲಿ ಆದರೆ ಬಿಹಾರವು ಇವು ನಮ್ಮದಲ್ಲ ಉತ್ತರ ಪ್ರದೇಶದ್ದು ಎಂದು ಹೇಳಿದೆ.
ಸ್ಥಳೀಯ ಅಧಿಕಾರಿಗಳು ಅನಧಿಕೃತವಾಗಿ ಇವು ಸೋಂಕಿತರ ಮೃತದೇಹಗಳು ಎಂಬುದನ್ನು ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ಈಗಲೇ ಏನು ಹೇಳಲು ಸಾಧ್ಯವಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ.

ಇನ್ನು ನದಿಯಲ್ಲಿ ತೇಲುತ್ತಿರುವ ಮೃತದೇಹಗಳಿಂದಾಗಿ ಉತ್ತರ ಪ್ರದೇಶ ಮತ್ತು ಬಿಹಾರ ನಡುವೆ ಆರೋಪ- ಪ್ರತ್ಯಾರೋಪ ಶುರುವಾಗಿದೆ.ಕಳೆದ ವರ್ಷ ದೇಶಾದ್ಯಂತ ಲಾಕ್​ಡೌನ್​ ವಿಧಿಸಿದ ವೇಳೆ ಕಾರ್ಖಾನೆ ಸೇರಿದಂತೆ ವಿವಿಧ ಚಟುವಟಿಕೆಗಳಿಗೆ ತಡೆ ನೀಡಲಾಗಿತ್ತುಇದರಿಂದ ರಾಸಾಯನಿಕ, ಮಾಲಿನ್ಯಕಾರಕಗಳು ಕೂಡ ಗಂಗೆ ಒಡಲು ಸೇರುತ್ತಿರಲಿಲ್ಲ. ಇದರಿಂದಾಗಿ ಲಾಕ್​ಡೌನ್​ ಬಳಿಕ ಗಂಗಾ ನದಿಯ ನೀರಿನ ಗುಣಮಟ್ಟ ಗಣನೀಯವಾಗಿ ಹೆಚ್ಚಾಗಿದೆ.

ಪವಿತ್ರ ಗಂಗೆಯಲ್ಲಿ ತೇಲುತ್ತಿದೆ 150ಕ್ಕೂ ಹೆಚ್ಚು ಕೋವಿಡ್ ಸೋಂಕಿತರ ಶವಪವಿತ್ರ ಗಂಗೆಯಲ್ಲಿ ತೇಲುತ್ತಿದೆ 150ಕ್ಕೂ ಹೆಚ್ಚು ಕೋವಿಡ್ ಸೋಂಕಿತರ ಶವ

ಇದೀಗ ಆ ನೀರು ಕುಡಿಯಲು ಯೋಗ್ಯವಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದರು. ಆದರೆ, ಈಗ ಕೊರೊನಾ ಎರಡನೇ ಅಲೆಯಲ್ಲಿ ಸೋಂಕು ಹೆಚ್ಚಾಗಿದ್ದು, ಸಾವು ಹೆಚ್ಚಳಗೊಂಡಿದ್ದು, ಗಂಗೆಯಲ್ಲಿ ಮೃತದೇಹಗಳು ಸೇರುವ ಮೂಲಕ ಜನರಲ್ಲಿ ಆತಂಕ ಮೂಡಿಸಿದೆ.

ದೇಶದಲ್ಲಿ ಸೋಂಕಿತರ ಸಂಖ್ಯೆ ಏರಿಕೆ ಕಾಣುತ್ತಿದ್ದು, ಕಳೆದ ಮೂರು ವಾರಗಳಲ್ಲಿ ದೇಶದಲ್ಲಿ 4000 ಸಾವಿರಕ್ಕೂ ಅಧಿಕ ಮಂದಿ ಕೋವಿಡ್​ನಿಂದಾಗಿ ಮೃತ ಪಟ್ಟಿದ್ದಾರೆ. ಎಲ್ಲಡೆ ಶವಗಳ ಅಂತ್ಯಕ್ರಿಯೆಗೆ ಸಾಲುಗಳು ಕಂಡು ಬಂದಿದ್ದು, ಶಾಂತವಾಗಿದ್ದ ಚಿತಾಗಾರಗಳು ಗಿಜಿಗುಡುತ್ತಿವೆ. ಅಲ್ಲಿನ ಸಿಬ್ಬಂದಿಗಳು ಕೂಡ ದಿನ ಬಿಡುವಿಲ್ಲದ ಅಂತ್ಯಕ್ರಿಯೆಯಿಂದ ರೋಸಿದ್ದಾರೆ.

ಚೌಸಾದ ಬಿಡಿಒ ಅಶೋಕ್ ಕುಮಾರ್ ಈ ಬಗ್ಗೆ ಮಾತನಾಡಿ, ಇಲ್ಲಿ ಬಂದಿದ್ದು, 40-45 ಶವಗಳಾಗಿರಬಹುದು, ವಿವಿಧ ಸ್ಥಳಗಳಿಂದ ನದಿಯಲ್ಲಿ ಹರಿದು ಇವುಗಳು ಇಲ್ಲಿಗೆ ಬಂದು ಸೇರಿವೆ.

ಆದರೆ ಇವು ನಮ್ಮ ಜಿಲ್ಲೆಗೆ, ರಾಜ್ಯಕ್ಕೆ ಸೇರಿದ್ದಲ್ಲ, ನಾವು ಈ ನಿಟ್ಟಿನಲ್ಲಿ ಒಬ್ಬ ಕಾವಲುಗಾರರನ್ನು ನೇಮಿಸಿದ್ದು, ಅವರ ಸಮ್ಮುಖದಲ್ಲೇ ಶವಗಳನ್ನು ಸುಡಲಾಗುತ್ತದೆ. ಹೀಗಾಗಿ ಸದ್ಯ ಬರುತ್ತಿರುವ ಶವಗಳು ನಮ್ಮ ರಾಜ್ಯದಲ್ಲ. ಉತ್ತರ ಪ್ರದೇಶದಿಂದ ಹರಿದು ಬರುವ ಶವಗಳನ್ನು ತಡೆಯಲು ಸಾಧ್ಯವಿಲ್ಲ ಎಂದಿದ್ದಾರೆ.

English summary
Bloated, decomposing bodies washed up this morning on the banks of Ganga at Bihar's Buxar in frightening new visuals that expose the scale of India's Covid crisis. Dozens of bodies were seen floating in the river at Chausa town - on Bihar's border with Uttar Pradesh -- and later piling up on the banks, to the horror of residents.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X