• search
  • Live TV
ಪಟ್ನಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚುನಾವಣೆ ಅವರಿಗೆ, ಹಬ್ಬ ಇವರಿಗೆ: ಬಿಹಾರ ತೊರೆದು ಹೊರಟ ವಲಸಿಗರು!

|
Google Oneindia Kannada News

ಪಾಟ್ನಾ, ಅಕ್ಟೋಬರ್.22: ದೇಶಾದ್ಯಂತ ಕೊರೊನಾವೈರಸ್ ಸೋಂಕು ಹರಡುವಿಕೆ ನಡುವೆ ಸಾಲು ಸಾಲು ಹಬ್ಬಗಳು ಎದುರಾಗಿದೆ. ರಾಜ್ಯದಲ್ಲಿ ವಿಧಾನಸಭಾ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಇದರ ಮಧ್ಯೆಯೂ ಬಿಹಾರದಿಂದ ಉದ್ಯೋಗಕ್ಕಾಗಿ ಕಾರ್ಮಿಕರ ವಲಸೆ ಮುಂದುವರಿದಿದೆ.

ರಾಜ್ಯದಲ್ಲಿ ವಲಸೆ ಕಾರ್ಮಿಕರ ವಿಚಾರವನ್ನೇ ಚುನಾವಣಾ ಅಸ್ತ್ರವಾಗಿ ಬಳಸಿಕೊಳ್ಳುವುದಕ್ಕೆ ರಾಜಕೀಯ ಪಕ್ಷಗಳು ತಂತ್ರಗಾರಿಕೆ ಹೆಣೆಯುತ್ತಿವೆ. ಬಿಹಾರದಲ್ಲಿ ಕೊವಿಡ್-19 ಅಪಾಯದ ನಡುವೆ ವಲಸೆ ಕಾರ್ಮಿಕರನ್ನು ರಕ್ಷಿಸಿದ ಬಗ್ಗೆ ಸರ್ಕಾರವು ಬೆನ್ನು ತಟ್ಟಿಕೊಳ್ಳುವ ಕೆಲಸ ಮಾಡುತ್ತಿದೆ. ಇನ್ನೊಂದು ದಿಕ್ಕಿನಲ್ಲಿ ರೈಲುಗಳ ಮೂಲಕ ರಾಜ್ಯವನ್ನು ತೊರೆಯುತ್ತಿರುವ ಕಾರ್ಮಿಕರ ಸಂಖ್ಯೆಯು ಹೆಚ್ಚಾಗುತ್ತಿದೆ.

ಕೊರೊನಾವೈರಸ್ ಸೋಂಕಿನ ಭೀತಿಯಲ್ಲಿ ಹಳ್ಳಿಗೆ ವಾಪಸ್ಸಾದ ವಲಸೆ ಕಾರ್ಮಿಕರು ಹಳ್ಳಿಗಳಲ್ಲೇ ಉಳಿದುಕೊಳ್ಳುತ್ತಾರೆ ಎಂದು ಭಾವಿಸಲಾಗಿತ್ತು. ಆದರೆ ಈ ಲೆಕ್ಕಾಚಾರ ಸುಳ್ಳಾಗಿದ್ದು, ಇದೀಗ ಕಾರ್ಮಿಕರು ತಮ್ಮ ಕೆಲಸಕ್ಕಾಗಿ ಮತ್ತೆ ವಲಸೆ ಹೊರಟಿದ್ದಾರೆ ಎಂದು ರೈಲ್ವೆ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ವಿಶೇಷ ರೈಲುಗಳಲ್ಲಿ ಬುಕ್ಕಿಂಗ್ ಸೇವೆ ಪ್ರಾರಂಭ

ವಿಶೇಷ ರೈಲುಗಳಲ್ಲಿ ಬುಕ್ಕಿಂಗ್ ಸೇವೆ ಪ್ರಾರಂಭ

ಒಟ್ಟು 24 ಮಾರ್ಗಗಳಲ್ಲಿ ಈವರೆಗೂ 40 ಕ್ಲೋನ್ ರೈಲುಗಳ ಸಂಚಾರ ನಡೆಸುತ್ತಿವೆ. ಬಿಹಾರದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷ ರೈಲುಗಳು ಸಂಚರಿಸಲಿದ್ದು, ಬುಕ್ಕಿಂಗ್ ಸೇವೆಯನ್ನು ಪ್ರಾರಂಭಿಸಲಾಗಿದೆ. ನವೆಂಬರ್.15ರ ನಂತರದಲ್ಲಿ ವಿಶೇಷ ಹಬ್ಬಗಳಿಗೆ ವಿಶೇಷ ರೈಲ್ವೆ ಸೇವೆಯನ್ನು ನೀಡಲಾಗುತ್ತಿದ್ದು, ಬುಕ್ಕಿಂಗ್ ಸೇವೆಯನ್ನು ಆರಂಭಿಸಲಾಗಿದೆ. ಕಳೆದ ಏಳು ದಿನಗಳಲ್ಲಿ ಈ ರೈಲುಗಳ ಶೇಕಡಾ 85ರಷ್ಟು ಸೀಟ್ ಗಳು ಬುಕ್ಕಿಂಗ್ ಆಗಿವೆ" ಎಂದು ರೈಲ್ವೆ ವಕ್ತಾರರು ತಿಳಿಸಿದ್ದಾರೆ.

ಬಿಹಾರದಿಂದ ಕ್ಲೋನ್ ರೈಲುಗಳ ಸಂಚಾರ ಮತ್ತು ಸಂಖ್ಯೆ

ಬಿಹಾರದಿಂದ ಕ್ಲೋನ್ ರೈಲುಗಳ ಸಂಚಾರ ಮತ್ತು ಸಂಖ್ಯೆ

ಬಿಹಾರದ ಗ್ರಾಮೀಣ ಮತ್ತು ತಾಲೂಕು ಪ್ರದೇಶಗಳಿಂದ ಮಹಾನಗರಗಳಿಗೆ ಕಾರ್ಮಿಕರು ಉದ್ಯೋಗವನ್ನು ಅರಸಿ ಹೋಗುತ್ತಿದ್ದಾರೆ. ಒಂದು ಕ್ಲೋನ್ ರೈಲಿನಲ್ಲಿ ಕನಿಷ್ಠ 104 ರಿಂದ 134 ಕಾರ್ಮಿಕರು ಸಂಚರಿಸುವುದಕ್ಕೆ ಅವಕಾಶ ನೀಡಲಾಗಿದೆ. ಮಹಾನಗರಗಳಿಂದ ವಾಪಸ್ಸಾಗುವ ಸಂದರ್ಭಗಳಲ್ಲಿ ಅದರ ಅರ್ಧದಷ್ಟು ಜನರಷ್ಟೇ ಕ್ಲೋನ್ ರೈಲುಗಳಲ್ಲಿ ವಾಪಸ್ ಆಗುತ್ತಿರುವುದು ಅಂಕಿ-ಅಂಶಗಳ ಸಹಿತ ಸಾಬೀತಾಗಿದೆ.

ಹೆಚ್ಚಾಗಿ ರೈಲ್ವೆಗಳು ಸಂಚರಿಸುವ ಮಾರ್ಗಗಳಿವು

ಹೆಚ್ಚಾಗಿ ರೈಲ್ವೆಗಳು ಸಂಚರಿಸುವ ಮಾರ್ಗಗಳಿವು

ಭಾರತೀಯ ರೈಲ್ವೆ ಇಲಾಖೆ ಅಧಿಕಾರಿ ನೀಡಿರುವ ಮಾಹಿತಿ ಪ್ರಕಾರ, ಬಿಹಾರದ ದಾನಾಪುರ್, ಪಾಟ್ನಾ, ಮುಜಾಫರ್ ಪುರ್, ಕತಿಹಾರ್, ರಾಜಗಿರ್, ಜಯನಗರ್, ಛಪ್ರಾ, ದರ್ಭಾಂಗ್ ಮತ್ತು ಸಹರ್ಸಾ ಪ್ರದೇಶಗಳಿಂದ ಮಹಾನಗರಗಳಿಗೆ ವಲಸೆ ಹೋಗುತ್ತಿರುವ ಕಾರ್ಮಿಕರ ಸಂಖ್ಯೆಯು ಹೆಚ್ಚಾಗಿದೆ. ಸೂರತ್, ದೆಹಲಿ, ಅಹ್ಮದಾಬಾದ್, ಸಿಕಂದರಾಬಾದ್, ಅಮೃತಸರ್, ಬೆಂಗಳೂರು ನಗರಗಳಿಗೆ ವಲಸೆ ತೆರಳುತ್ತಿರುವ ಕಾರ್ಮಿಕರ ಸಂಖ್ಯೆ ಹೆಚ್ಚಾಗಿರುವುದು ಅಂಕಿ-ಅಂಶಗಳಿಂದ ತಿಳಿದು ಬಂದಿದೆ.

ಬಾಕಿ ಉಳಿದ 16 ಕ್ಲೋನ್ ರೈಲುಗಳ ಸಂಚಾರ

ಬಾಕಿ ಉಳಿದ 16 ಕ್ಲೋನ್ ರೈಲುಗಳ ಸಂಚಾರ

40 ಕ್ಲೋನ್ ರೈಲುಗಳಲ್ಲಿ ಅರ್ಧಕ್ಕಿಂತ ಹೆಚ್ಚು ಅಂದರೆ 24 ರೈಲುಗಳು ಬಿಹಾರ ಮಾರ್ಗದಲ್ಲಿಯೇ ಸಂಚರಿಸಲಿವೆ. ಬಾಕಿ ಉಳಿದ 16 ರೈಲುಗಳ ದೇಶದ ವಿವಿಧ ರಾಜ್ಯಗಳ ಮಹಾನಗರಗಳ ನಡುವೆ ಸಂಚರಿಸಲಿವೆ. ಈ ಪೈಕಿ ನವದೆಹಲಿ, ವಾರಣಸಿ, ಗೋವಾ, ಲಕ್ನೋ, ಬೆಂಗಳೂರು, ಗೋರಖ್ ಪುರ್, ಮುಂಬೈ ಮತ್ತು ಪುಣೆ ನಡುವೆ ರೈಲುಗಳು ಸಂಚರಿಸಲಿವೆ ಎಂದು ತಿಳಿದು ಬಂದಿದೆ. ಇನ್ನು, ಭಾರತ ಲಾಕ್ ಡೌನ್ ಸಂದರ್ಭಗಳಲ್ಲಿ ಕೂಡಾ ಬಹುಪಾಲು ರೈಲುಗಳು ಬಿಹಾರಕ್ಕೆ ಸಂಚರಿಸಿದ್ದು ವರದಿಯಾಗಿತ್ತು.

ಕ್ಲೋನ್ ರೈಲುಗಳ ವಿನ್ಯಾಸ ಹೇಗಿರಲಿದೆ?

ಕ್ಲೋನ್ ರೈಲುಗಳ ವಿನ್ಯಾಸ ಹೇಗಿರಲಿದೆ?

ದೇಶದ ಬಹುತೇಕ ನಗರಗಳಿಗೆ ಸಂಚರಿಸಲು ತಯಾರಾಗುತ್ತಿರುವ ಕ್ಲೋನ್ ರೈಲುಗಳಲ್ಲಿ 3 ಉದ್ದನೆಯ ಸೀಟ್ ಗಳನ್ನು ಹೊಂದಿರುವ 12 ಹವಾ ನಿಯಂತ್ರಿತ ಬೋಗಿ, 4 ಹವಾ ನಿಯಂತ್ರಿತವಲ್ಲದ ಬೋಗಿಗಳು ಇರಲಿವೆ. ಸಾಮಾನ್ಯ ರೈಲುಗಳಿಗಿಂತಲೂ ಈ ರೈಲುಗಳ ವೇಗ ಹೆಚ್ಚಾಗಿರುತ್ತದೆ. ರೈಲ್ವೆ ಟಿಕೆಟ್ ದರ ಕೂಡಾ ದುಬಾರಿ ಆಗಿರಲಿದ್ದು, 10 ದಿನಕ್ಕಿಂತಲೂ ಮುಂಚಿತವಾಗಿ ಟಿಕೆಟ್ ಬುಕ್ ಮಾಡಬೇಕಾಗಿರುತ್ತದೆ.

English summary
Amid State Election And Festivals, Migrants Continue To Leave Bihar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X