ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಹಾರದಲ್ಲಿ ಪ್ರಾಣಭೀತಿ, ರೇಪ್ ಬೆದರಿಕೆ ಎದುರಿಸಿದೆ ಎಂದ ನಟಿ

|
Google Oneindia Kannada News

ಪಾಟ್ನಾ, ಅ. 29: ಬಾಲಿವುಡ್ ನಟಿ ಅಮೀಶಾ ಅವರು ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಪ್ರಚಾರದ ಬಗ್ಗೆ ಆಘಾತಕಾರಿ ಸುದ್ದಿ ಕೊಟ್ಟಿದ್ದಾರೆ. ಲೋಕಜನಶಕ್ತಿ ಪಕ್ಷದ ಅಭ್ಯರ್ಥಿ ಪರ ಪ್ರಚಾರಕ್ಕೆ ತೆರಳಿದ್ದ ವೇಳೆ ನನಗೆ ಪ್ರಾಣಭೀತಿ, ರೇಪ್ ಬೆದರಿಕೆ ಎದುರಾಗಿತ್ತು ಎಂದಿದ್ದಾರೆ.

ಇಂಡಿಯಾ ಟುಡೇ ಟಿವಿ ಜೊತೆ ಮಾತಾನಾಡಿ, ನನ್ನ ಮೇಲೆ ಅತ್ಯಾಚಾರವಾಗಬಹುದು ಅಥವಾ ಯಾರಾದ್ರೂ ನನ್ನನ್ನು ಹತ್ಯೆ ಮಾಡಬಹುದು ಎಂಬ ಭೀತಿ ಎದುರಾಗಿತ್ತು. ಆದರೆ, ಪ್ರಚಾರ ಕಾರ್ಯ ಮುಂದುವರೆಸಿದೆ ಎಂದು ಹೇಳಿದರು.

ಬಿಹಾರ ಚುನಾವಣೆ: ಬಿಜೆಪಿ ರೆಬೆಲ್‌ಗಳ ಆಶ್ರಯತಾಣವಾದ ಎಲ್‌ಜೆಪಿಬಿಹಾರ ಚುನಾವಣೆ: ಬಿಜೆಪಿ ರೆಬೆಲ್‌ಗಳ ಆಶ್ರಯತಾಣವಾದ ಎಲ್‌ಜೆಪಿ

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಆಡಿಯೋ ಕ್ಲಿಪಿಂಗ್ ಬಗ್ಗೆ ಪ್ರತಿಕ್ರಿಯಿಸಿ, ಒಂದು ರೀತಿ ಕೆಟ್ಟ ಕನಸಿನಂಥ ಪರಿಸ್ಥಿತಿ ಅದಾಗಿತ್ತು. ನನ್ನ ಜೊತೆಗಿದ್ದ ತಂಡದ ಪರಿಸ್ಥಿತಿ ವಿಭಿನ್ನವಾಗಿರಲಿಲ್ಲ. ಹಾಗೂ ಹೀಗೂ ಪ್ರಚಾರ ಮುಗಿಸಿಕೊಂಡು, ಸುರಕ್ಷಿತವಾಗಿ ಮುಂಬೈ ತಲುಪಿದೆ ಎಂದಿದ್ದಾರೆ. ಆಡಿಯೋದಲ್ಲಿ ಬಿಹಾರದಲ್ಲಿನ ಭೀತಿಯುಕ್ತ ವಾತಾವರಣ, ಆಡಳಿತ ಯಂತ್ರದ ವೈಫಲ್ಯದ ಬಗ್ಗೆ ಅಮೀಶಾ ಮಾತನಾಡಿದ್ದಾರೆ.

 ಪ್ರಕಾಶ್ ಚಂದ್ರ ಅವರ ಪರ ಅಮೀಶಾ ಪ್ರಚಾರ

ಪ್ರಕಾಶ್ ಚಂದ್ರ ಅವರ ಪರ ಅಮೀಶಾ ಪ್ರಚಾರ

ಎಲ್ ಜೆಪಿಯ ಅಭ್ಯರ್ಥಿ ಡಾ. ಪ್ರಕಾಶ್ ಚಂದ್ರ ಅವರ ಪರ ಅಮೀಶಾ ಪ್ರಚಾರ ನಡೆಸಿದರು. ಆದ್ರೆ, ಪ್ರಕಾಶ್ ಚಂದ್ರ ಅವರ ಕಡೆಯವರಿಂದಲೇ ಬೆದರಿಕೆ, ಅನುಚಿತ ವರ್ತನೆ ಎದುರಿಸಿದೆ, ಪ್ರಕಾಶ್ ಒಬ್ಬ ಸುಳ್ಳುಗಾರ, ಆತನ ಬೆಂಬಲಿಗರು ನನ್ನ ಕಾರು ಮುತ್ತಿಕೊಂಡು ಚಿತ್ರ ಹಿಂಸೆಕೊಟ್ಟರು ಎಂದು ಆರೋಪಿಸಿದ್ದಾರೆ.

"ಬಿಹಾರದಲ್ಲಿ ಬಿಜೆಪಿ-ಎಲ್ ಜೆಪಿ ಮೈತ್ರಿಕೂಟದಲ್ಲಿ ಹೊಸ ಸರ್ಕಾರ"

 ಕುಗ್ರಾಮವೊಂದರಲ್ಲಿ ನಮ್ಮನ್ನು ಇರಿಸಿದ್ದರು

ಕುಗ್ರಾಮವೊಂದರಲ್ಲಿ ನಮ್ಮನ್ನು ಇರಿಸಿದ್ದರು

ನಮ್ಮ ತಂಡವನ್ನು ಕುಗ್ರಾಮವೊಂದರಲ್ಲಿ ಕೂಡಿಡಲಾಗಿತ್ತು. ಅಲ್ಲಿನ ಅವ್ಯವಸ್ಥೆ ಬಗ್ಗೆ ಎಲ್ಲೂ ಹೇಳಬಾರದು ಎಂದು ಬೆದರಿಸಲಾಗಿತ್ತು. ಮುಂಬೈಗೆ ತೆರಳಲು ಬುಕ್ ಆಗಿದ್ದ ವಿಮಾನವೂ ತಪ್ಪಿಸಿಕೊಳ್ಳಬೇಕಾಯಿತು. ನನ್ನ ಬಗ್ಗೆ ಯಾವುದೇ ದೂರು, ಅಪಪ್ರಚಾರ ಮಾಡುವಂತಿಲ್ಲ ಎಂದು ಪ್ರಕಾಶ್ ಅವರು ಇಮೇಲ್, ಕಾಲ್ ಮಾಡಿ ಎಚ್ಚರಿಸಿದ್ದಾರೆ ಎಂದು ಅಮೀಶಾ ಹೇಳಿದ್ದಾರೆ.

 ಬಿಹಾರದಲ್ಲಿ ಮೂರು ಹಂತಗಳಲ್ಲಿ ಚುನಾವಣೆ

ಬಿಹಾರದಲ್ಲಿ ಮೂರು ಹಂತಗಳಲ್ಲಿ ಚುನಾವಣೆ

243 ಸದಸ್ಯ ಬಲ ಹೊಂದಿರುವ ಬಿಹಾರ ವಿಧಾನಸಭೆ ಅವಧಿಯು ನವೆಂಬರ್ 29 ರಂದು ಕೊನೆಗೊಳ್ಳಲಿದೆ. ಕೊರೊನಾವೈರಸ್ ಸೋಂಕು ಹರಡುವಿಕೆ ಆತಂಕದ ನಡುವೆಯೂ ಬಿಹಾರದಲ್ಲಿ ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಅಕ್ಟೋಬರ್ 28ರಂದು 16 ಜಿಲ್ಲೆಗಳ 71 ಕ್ಷೇತ್ರಗಳಿಗೆ 31,000 ಮತಗಟ್ಟೆಗಳಲ್ಲಿ ಮೊದಲ ಹಂತದಲ್ಲಿ ಚುನಾವಣೆ ನಡೆಸಲಾಯಿತು. ಶೇ 54ರಷ್ಟು ಮತದಾನ ದಾಖಲಾಗಿದೆ.

ಎಬಿಪಿ-ಸಿವೋಟರ್ ಸಮೀಕ್ಷೆ: ಬಿಹಾರದಲ್ಲಿ ಎನ್ಡಿಎ ಮತ್ತೆ ಅಧಿಕಾರಕ್ಕೆಎಬಿಪಿ-ಸಿವೋಟರ್ ಸಮೀಕ್ಷೆ: ಬಿಹಾರದಲ್ಲಿ ಎನ್ಡಿಎ ಮತ್ತೆ ಅಧಿಕಾರಕ್ಕೆ

 ಬಿಹಾರದಲ್ಲಿ ಪ್ರಾಣಭೀತಿ, ರೇಪ್ ಬೆದರಿಕೆ ಎದುರಿಸಿದೆ ಎಂದ ನಟಿ

ಬಿಹಾರದಲ್ಲಿ ಪ್ರಾಣಭೀತಿ, ರೇಪ್ ಬೆದರಿಕೆ ಎದುರಿಸಿದೆ ಎಂದ ನಟಿ

ನವೆಂಬರ್ 03ರಂದು ಎರಡನೆಯ ಹಂತದಲ್ಲಿ 17 ಜಿಲ್ಲೆಗಳಲ್ಲಿ 94 ಕ್ಷೇತ್ರಗಳಿಗೆ 42,000 ಮತಗಟ್ಟೆಗಳಲ್ಲಿ ಚುನಾವಣೆ ನಡೆಯಲಿದೆ. ನವೆಂಬರ್ 07ರಂದು ಮೂರನೇ ಹಂತದಲ್ಲಿ 78 ಕ್ಷೇತ್ರಗಳಿಗೆ 15 ಜಿಲ್ಲೆಗಳಲ್ಲಿ ಅಂದಾಜು 33,500 ಮತಗಟ್ಟೆಗಳಲ್ಲಿ ಚುನಾವಣೆ ನಡೆಯಲಿದೆ. ಅಂತಿಮವಾಗಿ ನವೆಂಬರ್10ರಂದು ಬಿಹಾರ ವಿಧಾನಸಭಾ ಚುನಾವಣೆ ಫಲಿತಾಂಶವು ಹೊರ ಬೀಳಲಿದೆ. ಮತ್ತೊಮ್ಮೆ ಬಿಹಾರಕ್ಕೆ ಪ್ರಚಾರಕ್ಕಾಗಿ ಬರುವುದಿಲ್ಲ, ಮುಂಬೈಗೆ ತೆರಳಿದ ಬಳಿಕ ಬಿಹಾರದ ನೈಜ ಚಿತ್ರವನ್ನು ಜಗತ್ತಿಗೆ ತಿಳಿಸಬೇಕಾದ್ದು ನನ್ನ ಕರ್ತವ್ಯ ಎನಿಸಿತು ಎಂದು ಅಮೀಶಾ ಹೇಳಿದ್ದಾರೆ

English summary
Actress Ameesha Patel has said that she feared for her life when she was in Bihar campaigning for an LJP candidate in the assembly election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X