ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಗ್ನಿಪಥ್‌ ಕ್ಷೋಭೆ: ಬಿಹಾರದಲ್ಲಿ ಬಿಜೆಪಿ ಅಧ್ಯಕ್ಷರ ಮನೆ ಧ್ವಂಸ

|
Google Oneindia Kannada News

ಪಾಟ್ನಾ, ಜೂ. 17: ಬಿಹಾರದ ಬಿಜೆಪಿ ಅಧ್ಯಕ್ಷ ಸಂಜಯ್ ಜೈಸ್ವಾಲ್ ಅವರ ಬೆಟ್ಟಿಯಾ ಪಟ್ಟಣದಲ್ಲಿರುವ ನಿವಾಸವನ್ನು ಶುಕ್ರವಾರದಂದು ಅಗ್ನಿಪಥ್ ಸೇನಾ ನೇಮಕಾತಿ ಯೋಜನೆಯ ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ ಧ್ವಂಸಗೊಳಿಸಲಾಗಿದೆ. ಇಂದು ರಾಜ್ಯದಲ್ಲಿ ಪಕ್ಷದ ಹಿರಿಯ ನಾಯಕರ ಮನೆಗಳ ಮೇಲೆ ದಾಳಿಯ ಎರಡನೇ ಘಟನೆಯಾಗಿದೆ.

ಪಶ್ಚಿಮ ಚಂಪಾರಣ್ ಜಿಲ್ಲೆಯ ಅದೇ ಬೆಟ್ಟಿಯಾ ಪಟ್ಟಣದಲ್ಲಿರುವ ಉಪಮುಖ್ಯಮಂತ್ರಿ ರೇಣು ದೇವಿ ಅವರ ನಿವಾಸದ ಮೇಲೆ ಗುಂಪೊಂದು ಮುಂಜಾನೆ ದಾಳಿ ನಡೆಸಿತ್ತು. ಈಗ ಬಿಜೆಪಿಯ ಹಿರಿಯ ನಾಯಕ ಮನೆ ಮೇಲೆ ಧ್ವಂಸಗೊಳಿಸಲಾಗಿದೆ. ಬೆಟ್ಟಿಯಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸ್ಥಳೀಯ ಸಂಸದ ಜೈಸ್ವಾಲ್, ದಾಳಿಕಾರರು ಸೇನಾ ಆಕಾಂಕ್ಷಿಗಳಲ್ಲ ಮತ್ತು ಅವರು ಕಟ್ಟಡವನ್ನು ಸ್ಫೋಟಿಸುವ ಉದ್ದೇಶದಿಂದ ಬಂದಿದ್ದರು ಎಂದು ಅವರು ಹೇಳಿದ್ದಾರೆ.

'ಅಗ್ನಿಪಥ್' ಆಕ್ರೋಶದ ಜ್ವಾಲೆಗೆ ಹೊತ್ತಿ ಉರಿದ ರಾಜ್ಯಗಳಲ್ಲಿ ಏನೇನಾಯ್ತು? 'ಅಗ್ನಿಪಥ್' ಆಕ್ರೋಶದ ಜ್ವಾಲೆಗೆ ಹೊತ್ತಿ ಉರಿದ ರಾಜ್ಯಗಳಲ್ಲಿ ಏನೇನಾಯ್ತು?

ಯೋಜಿತ ಪಿತೂರಿಯ ಭಾಗವಾಗಿ ನನ್ನ ಮನೆಯ ಮೇಲೆ ದಾಳಿ ಮಾಡಲಾಗಿದೆ. ಕಲ್ಲು ತೂರಾಟ ನಡೆಸಲಾಗಿದೆ. ಡೀಸೆಲ್ ಸುರಿದು ಬೆಂಕಿ ಹಚ್ಚಲು ಪ್ರಯತ್ನ ಸಹ ಮಾಡಲಾಗಿದ್ದು, ಸಿಲಿಂಡರ್ ಬಾಂಬ್ ಅನ್ನು ಗುಂಪು ಬಿಟ್ಟು ಹೋಗಿದೆ. ಇದು ಕಟ್ಟಡವನ್ನು ಸ್ಫೋಟಿಸುವ ಉದ್ದೇಶವಿತ್ತು ಎಂದು ಅವರು ಹೇಳಿದರು.

 ಅಗ್ನಿಪಥ್‌ ವಿರುದ್ಧದ ಹೋರಾಟ: ಬಿಜೆಪಿ ಕಚೇರಿಗೆ ಬೆಂಕಿ ಅಗ್ನಿಪಥ್‌ ವಿರುದ್ಧದ ಹೋರಾಟ: ಬಿಜೆಪಿ ಕಚೇರಿಗೆ ಬೆಂಕಿ

 ಮನೆಯಲ್ಲಿ ಸಿಸಿಟಿವಿ ಕ್ಯಾಮೆರಾ

ಮನೆಯಲ್ಲಿ ಸಿಸಿಟಿವಿ ಕ್ಯಾಮೆರಾ

ತಮ್ಮ ಬಿಜೆಪಿ ಪಕ್ಷವು ಸರ್ಕಾರದ ಪಾಲುದಾರರಾಗಿದ್ದರೂ ಸಹ ರಾಜ್ಯದಲ್ಲಿ ನಿತೀಶ್ ಕುಮಾರ್ ಸರ್ಕಾರದ ಕಟು ಟೀಕಾಕಾರರಾಗಿರುವ ಸಂಜಯ್‌ ಜೈಸ್ವಾಲ್ ಆಡಳಿತದ ಭಾಗವಾಗಿ ಸಾಕಷ್ಟು ಜಾಗರೂಕತೆಯ ಕೊರತೆಯನ್ನುಒತ್ತಿ ಹೇಳಿದ್ದಾರೆ. ಆದಾಗ್ಯೂ, ನನ್ನ ಮನೆಯಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಸರ್ಕಾರವು ಇವುಗಳನ್ನು ಪರಿಶೀಲಿಸುತ್ತಿದೆ. ಅಲ್ಲದೆ ಸೂಕ್ತ ಕ್ರಮ ತೆಗೆದುಕೊಳ್ಳುತ್ತದೆ ಎಂದು ಭಾವಿಸುತ್ತೇನೆ. ನಾನು ನನ್ನ ಮನೆಯೊಳಗೆ ಮತ್ತು ಕನಿಷ್ಠ 100 ದಾಳಿಕೋರರನ್ನು ನಾನು ಗುರುತಿಸಿದ್ದೇನೆ. ಅವುಗಳಲ್ಲಿ ಯಾರೋಬ್ಬರೂ ಕೂಡ ಸೈನ್ಯ ಸೇರಬೇಕು ಎಂದು ಬಂದಿದ್ದವರಲ್ಲ ಎಂದು ಹೇಳಿದರು.

 ಪೆಟ್ರೋಲ್ ಪಂಪ್ ಕೂಡ ಧ್ವಂಸ

ಪೆಟ್ರೋಲ್ ಪಂಪ್ ಕೂಡ ಧ್ವಂಸ

ಬೆಟ್ಟಿಯಾ ಪಟ್ಟಣದಲ್ಲಿರುವ ರೇಣುದೇವಿ ಅವರು ಪಾಟ್ನಾದಲ್ಲಿದ್ದಾಗ ಗುಂಪೊಂದು ಧ್ವಂಸ ಕಾರ್ಯ ನಡೆಸಿದ್ದಾರೆ. ಇಲ್ಲಿ ಪ್ರತಿಪಕ್ಷ ಪ್ರಾಯೋಜಿತ ಗೂಂಡಾಗಳ ಕೈವಾಡವಾಗಿದೆ. ನೊಂದ ವಿದ್ಯಾರ್ಥಿಗಳು ಬಿಜೆಪಿ ನಾಯಕರನ್ನು ಗುರಿಯಾಗಿಸಿಕೊಳ್ಳುವುದಿಲ್ಲ ಎಂದು ಸಂಜಯ್‌ ಜೈಸ್ವಾಲ್ ಅವರ ಹತ್ತಿರದ ಸಂಬಂಧಿ ಒಡೆತನದ ಪೆಟ್ರೋಲ್ ಪಂಪ್ ಅನ್ನು ಧ್ವಂಸಗೊಳಿಸಿರುವುದನ್ನು ಉಲ್ಲೇಖಿಸಿ ದೇವಿ ಆರೋಪಿಸಿದ್ದಾರೆ. ಪ್ರಮುಖವಾಗಿ ಬಿಜೆಪಿ ಶಾಸಕ ವಿನಯ್ ಬಿಹಾರಿ ಅವರ ವಾಹನದ ಮೇಲೂ ಶುಕ್ರವಾರ ಪಕ್ಕದ ಮೋತಿಹಾರಿ ಪಟ್ಟಣದಲ್ಲಿ ದಾಳಿ ನಡೆಸಲಾಗಿದೆ. ಶಾಸಕ ಪ್ರಾಣಾಪಾಯದಿಂದ ಪಾರಾಗಿದ್ದು, ಕಾರಿಗೆ ತೀವ್ರ ಹಾನಿಯಾಗಿದೆ. ಮಾಧೇಪುರ ಜಿಲ್ಲೆಯ ಬಿಜೆಪಿ ಕಚೇರಿಗೂ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದಾರೆ.

 ಶಾಸಕಿ ಅರುಣಾ ದೇವಿ ಅವರ ಕಾರಿಗೆ ಕಲ್ಲು

ಶಾಸಕಿ ಅರುಣಾ ದೇವಿ ಅವರ ಕಾರಿಗೆ ಕಲ್ಲು

ಹಿಂದಿನ ದಿನ, ನಾವಡಾದಲ್ಲಿ ಪಕ್ಷದ ಕಚೇರಿಗೆ ಬೆಂಕಿ ಹಚ್ಚಲಾಯಿತು, ಅಲ್ಲಿ ಶಾಸಕಿ ಅರುಣಾ ದೇವಿ ಅವರ ಕಾರಿಗೆ ಕಲ್ಲು ತೂರಿದ್ದರಿಂದ ಅವರು ಗಾಯಗೊಂಡಿದ್ದರು. ಸಶಸ್ತ್ರ ಪಡೆಗಳಲ್ಲಿ ನೇಮಕಾತಿಯ ಹೊಸ ಯೋಜನೆಯ ವಿರುದ್ಧದ ವದಂತಿಗಳ ಮೇಲೆ ಅಶಾಂತಿ ಉಂಟಾಗಿದೆ ಎಂದು ಸಂಜಯ್‌ ಜೈಸ್ವಾಲ್ ಆರೋಪಿಸಿ, ಇದು ಯುವಕರಿಗೆ ಅನೇಕ ಅವಕಾಶಗಳನ್ನು ಒದಗಿಸುತ್ತದೆ. ಏಕೆಂದರೆ ಅವರು ಮಿಲಿಟರಿ ತರಬೇತಿಯ ಸಮಯದಲ್ಲಿ ಗಳಿಸಿಕೊಂಡ ಕೌಶಲ್ಯಗಳೊಂದಿಗೆ ಶಸ್ತ್ರಸಜ್ಜಿತರಾಗುತ್ತಾರೆ ಎಂದಿದ್ದಾರೆ.

 ಪೊಲೀಸ್‌ ನೇಮಕಾತಿಯಲ್ಲಿಆದ್ಯತೆ

ಪೊಲೀಸ್‌ ನೇಮಕಾತಿಯಲ್ಲಿಆದ್ಯತೆ

"ಕೇಂದ್ರ ಅರೆಸೈನಿಕ ಪಡೆಗಳ ನೇಮಕಾತಿಯಲ್ಲಿ ಅವರಿಗೆ ಆದ್ಯತೆ ನೀಡಲಾಗುವುದು ಎಂದು ಈಗಾಗಲೇ ಸರ್ಕಾರ ಘೋಷಿಸಿದೆ. ಅನೇಕ ರಾಜ್ಯಗಳು ಪೊಲೀಸ್‌ ನೇಮಕಾತಿಯಲ್ಲಿ ಅದೇ ರೀತಿ ಆದ್ಯತೆ ನೀಡಿವೆ. ಬಿಹಾರದಲ್ಲಿ ಮಾಜಿ ಸೈನಿಕರನ್ನು ಒಳಗೊಂಡಿರುವ ವಿಶೇಷ ಸಶಸ್ತ್ರ ಪೊಲೀಸ್ ವ್ಯವಸ್ಥೆಯು ಈಗಾಗಲೇ ಇದೆ. ಪ್ರಪಂಚದಾದ್ಯಂತ ಸಶಸ್ತ್ರ ಪಡೆಗಳಲ್ಲಿ ಇದೇ ರೀತಿಯ ವ್ಯವಸ್ಥೆಗಳಿವೆ. ಭಾರತವೂ ಸಹ ಕಿರು ಸೇವೆಗಳ ಆಯೋಗವನ್ನು ಹೊಂದಿದೆ ಎಂದು ಜೈಸ್ವಾಲ್ ಹೇಳಿದ್ದಾರೆ.

English summary
Bihar BJP president Sanjay Jaiswal's residence in Bettiya town was vandalized during a protest against the Agnipath Army recruiting scheme on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X