• search
 • Live TV
ಪಟ್ನಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪಾಟ್ನಾ ಹೈಕೋರ್ಟ್ ಸೂಚನೆ; ಬಿಹಾರದಲ್ಲಿ ಲಾಕ್ ಡೌನ್ ಘೋಷಿಸಿದ ಸರ್ಕಾರ

|
Google Oneindia Kannada News

ಪಾಟ್ನಾ, ಮೇ 04; ಬಿಹಾರ ಸರ್ಕಾರ ಕೋವಿಡ್ ನಿರ್ವಹಣೆ ಮಾಡಲು ವಿಫಲವಾಗಿದೆ ಎಂದು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ರಾಜ್ಯದ ಒಟ್ಟು ಪ್ರಕರಣಗಳ ಸಂಖ್ಯೆ 5,09,047. ಸೋಮವಾರ ರಾಜ್ಯದಲ್ಲಿ 11,407 ಹೊಸ ಪ್ರಕರಣ ದಾಖಲಾಗಿದೆ.

ಪಾಟ್ನಾ ಹೈಕೋರ್ಟ್ ನ್ಯಾಯಮೂರ್ತಿ ಚಕ್ರಧಾರಿ ಶರಣ್ ಸಿಂಗ್, ಮೋಹಿತ್ ಕುಮಾರ್ ಶಾ ನೇತೃತ್ವದ ವಿಭಾಗೀಯ ಪೀಠ ಲಾಕ್ ಡೌನ್ ಜಾರಿಗೆ ತನ್ನಿ, ಇಲ್ಲವಾದಲ್ಲಿ ನಾವೇ ಆದೇಶ ನೀಡುತ್ತೇವೆ ಎಂದು ಬಿಹಾರ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.

ಕೋವಿಡ್ ಲಾಕ್ ಡೌನ್ ಮಾರ್ಗಸೂಚಿಯಲ್ಲಿ ಆಗಲೇ 4ನೇ ಬದಲಾವಣೆಕೋವಿಡ್ ಲಾಕ್ ಡೌನ್ ಮಾರ್ಗಸೂಚಿಯಲ್ಲಿ ಆಗಲೇ 4ನೇ ಬದಲಾವಣೆ

ರಾಜ್ಯದಲ್ಲಿ ಸಂಪೂರ್ಣ ಲಾಕ್ ಡೌನ್ ಜಾರಿಗೆ ತರುವ ಅಗತ್ಯವಿದೆ. ಈ ಕುರಿತು ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸಿ ಎಂದು ಅಡ್ವೊಕೇಟ್ ಜನರಲ್ ಲಲಿತ್ ಕಿಶೋರ್‌ಗೆ ಕೋರ್ಟ್ ಸೂಚನೆ ನೀಡಿದೆ. ರಾಜ್ಯ ಸರ್ಕಾರ ಲಾಕ್ ಡೌನ್ ಘೋಷಣೆ ಮಾಡಲಿದೆಯೇ? ಅಥವಾ ಕೋರ್ಟ್ ಈ ಕುರಿತು ಆದೇಶಿಸಬೇಕೆ? ಎಂದು ನ್ಯಾಯಾಲಯ ಪ್ರಶ್ನಿಸಿದೆ.

ಮಂತ್ರಾಲಯದಲ್ಲಿ ಸ್ಥಳೀಯ ಲಾಕ್ ಡೌನ್; ಭಕ್ತರಿಗೆ ಪ್ರವೇಶವಿಲ್ಲ ಮಂತ್ರಾಲಯದಲ್ಲಿ ಸ್ಥಳೀಯ ಲಾಕ್ ಡೌನ್; ಭಕ್ತರಿಗೆ ಪ್ರವೇಶವಿಲ್ಲ

ಲಾಕ್ ಡೌನ್ ಘೋಷಣೆ; ಸೋಮವಾರ ಪಾಟ್ನಾ ಹೈಕೋರ್ಟ್ ಸೂಚನೆ ನೀಡುತ್ತಿದ್ದಂತೆ ಮಂಗಳವಾರ ಲಾಕ್ ಡೌನ್ ಘೋಷಣೆ ಮಾಡಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಆದೇಶ ಹೊರಡಿಸಿದದ್ದಾರೆ. ಮೇ 15ರ ತನಕ ಲಾಕ್ ಡೌನ್ ಜಾರಿಯಲ್ಲಿರಲಿದೆ ಎಂದು ಹೇಳಿದ್ದಾರೆ.

ದೆಹಲಿಗೆ ಪ್ರಾಣವಾಯು ಒದಗಿಸಿದ ರೈಲ್ವೆಯ ಆಕ್ಸಿಜನ್ ಎಕ್ಸ್ ಪ್ರೆಸ್ ದೆಹಲಿಗೆ ಪ್ರಾಣವಾಯು ಒದಗಿಸಿದ ರೈಲ್ವೆಯ ಆಕ್ಸಿಜನ್ ಎಕ್ಸ್ ಪ್ರೆಸ್

ಪಾಟ್ನಾದ ಇಂದಿರಾ ಗಾಂಧಿ ಇನ್ಸ್‌ಟಿಟ್ಯೂಟ್‌ ಆಫ್ ಮೆಡಿಕಲ್ ಸೈನ್ಸ್ ಕೋವಿಡ್ ಆಸ್ಪತ್ರೆಯಲ್ಲಿ ಕೇವಲ 200 ಹಾಸಿಗೆ ಖಾಲಿ ಇದೆ. ಇವುಗಳಲ್ಲಿ 60 ಐಸಿಯು ಬೆಡ್‌ಗಳಿವೆ, ಆಕ್ಸಿಜನ್ ಕೊರತೆ ಕಾರಣ ಹೊಸ ರೋಗಿಳನ್ನು ದಾಖಲು ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿತ್ತು.

ಸರ್ಕಾರ ಕೋವಿಡ್ ಪರಿಸ್ಥಿತಿ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ ಎಂದು ಪಾಟ್ನಾ ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಕೆಯಾಗಿದೆ. ಅರ್ಜಿಯ ವಿಚಾರಣೆ ನಡೆಸುತ್ತಿರುವ ಕೋರ್ಟ್ ಸರ್ಕಾರ ಕೇವಲ ಕಾಗದದಲ್ಲಿ ಕೆಲಸ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿತ್ತು.

   ಮಂಡ್ಯದ ಜನ ಆಕ್ಸಿಜನ್ ನಿಂದ ಸಾಯಬಾರದು ಎಂದು ಧೃಡ ನಿರ್ಧಾರ ಮಾಡಿದ ಸುಮಲತಾ | Oneindia Kannada

   ಸೋಮವಾರ ಐಎಂಎ ಸಹ ಬಿಹಾರ ಸರ್ಕಾರವನ್ನು ಲಾಕ್ ಡೌನ್ ಘೋಷಣೆ ಮಾಡುವಂತೆ ಒತ್ತಾಯಿಸಿತ್ತು. ಸರ್ವಪಕ್ಷಗಳ ಸಭೆಯಲ್ಲಿ ಕೋವಿಡ್ ಹರಡುವಿಕೆ ತಡೆಯಲು ಲಾಕ್ ಡೌನ್ ಘೋಷಣೆ ಮಾಡಿ ಎಂದು ವಿವಿಧ ಪಕ್ಷದ ನಾಯಕರು ಮುಖ್ಯಮಂತ್ರಿಗಳಿಗೆ ಸಲಹೆ ನೀಡಿದ್ದರು.

   English summary
   Lockdown announced Bihar till May 15, 2021. Patna high court has observed that the government should enforce lockdown or the court will order it.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X