ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಕ್ ಡೌನ್ ಮುಗಿದರೂ ಬಿಹಾರ ಮುಂದಿದೆ ದೊಡ್ಡ ಸವಾಲು

|
Google Oneindia Kannada News

ಪಾಟ್ನಾ, ಏಪ್ರಿಲ್ 29 : ಬಿಹಾರ ಸರ್ಕಾರ ಲಾಕ್ ಡೌನ್ ವಿಸ್ತರಣೆ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿಗೆ ಮನವಿ ಮಾಡಿದೆ. ಲಾಕ್ ಡೌನ್ ಬಳಿಕ ಸರ್ಕಾರ ದೊಡ್ಡ ಸವಾಲನ್ನು ಎದುರಿಸಬೇಕಿದೆ. ಲಾಕ್ ಡೌನ್ ತೆರವು ಬಳಿಕ 6 ಲಕ್ಷ ವಲಸೆ ಕಾರ್ಮಿಕರು ರಾಜ್ಯಕ್ಕೆ ವಾಪಸ್ ಆಗಬಹುದು ಎಂದು ಅಂದಾಜಿಸಲಾಗಿದೆ.

Recommended Video

Nirbhaya convict Akshay’s wife ‘faints’ outside patiala house court | Oneindia kannada

ಬಿಹಾರದ ಡಿಜಿಪಿ ಗುಪ್ತೇಶ್ವರ ಪಾಂಡೆ ಮಾಧ್ಯಮಗಳ ಜೊತೆ ಮಾತನಾಡಿದ್ದು ವಲಸೆ ಕಾರ್ಮಿಕರ ಬಗ್ಗೆ ಮಾಹಿತಿ ನೀಡಿದ್ದಾರೆ. "ಲಾಕ್ ಡೌನ್ ಮುಗಿದ ಬಳಿಕ ಸುಮಾರು 6 ಲಕ್ಷ ಕಾರ್ಮಿಕರು ವಾಪಸ್ ಬರುವ ನಿರೀಕ್ಷೆ ಇದೆ. ಆಗ ನಾವು ಮನೆ-ಮನೆಗೆ ಹೋಗಿ ಸ್ಕ್ರೀನಿಂಗ್ ಮಾಡಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ.

ವಾವ್! ಕ್ವಾರಂಟೈನ್ ಕೇಂದ್ರದಲ್ಲಿ ಸುಮ್ಮನೆ ಕೂರಲಿಲ್ಲ ಈ ಕಾರ್ಮಿಕರುವಾವ್! ಕ್ವಾರಂಟೈನ್ ಕೇಂದ್ರದಲ್ಲಿ ಸುಮ್ಮನೆ ಕೂರಲಿಲ್ಲ ಈ ಕಾರ್ಮಿಕರು

ರಾಜ್ಯಕ್ಕೆ ವಾಪಸ್ ಬಂದ ವಲಸೆ ಕಾರ್ಮಿಕರಿಗೆ ಕ್ವಾರಂಟೈನ್ ಮಾಡಲಾಗುತ್ತದೆ. ಸ್ಥಳೀಯವಾಗಿ ಬ್ಲಾಕ್ ಮಟ್ಟದಲ್ಲಿ ಕ್ವಾರಂಟೈನ್‌ಗೆ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಶಾಲೆ, ಕಾಲೇಜು, ಸಮುದಾಯ ಭವನದಲ್ಲಿ ಕಾರ್ಮಿಕರಿಗೆ ವಸತಿ ವ್ಯವಸ್ಥೆ ಮಾಡಲಾಗುತ್ತದೆ.

ಪೌರ ಕಾರ್ಮಿಕರು, ಅಗತ್ಯ ಸೇವೆಗಾಗಿ ರಸ್ತೆಗಿಳಿದ ಕೆಎಸ್ಆರ್‌ಟಿಸಿ ಬಸ್ಪೌರ ಕಾರ್ಮಿಕರು, ಅಗತ್ಯ ಸೇವೆಗಾಗಿ ರಸ್ತೆಗಿಳಿದ ಕೆಎಸ್ಆರ್‌ಟಿಸಿ ಬಸ್

After Lockdown 6 Lakh Migrants May Return To Bihar

ಕಾರ್ಮಿಕರು ಬರುವಾಗ ಗಡಿ ಭಾಗದಲ್ಲಿ ಒಮ್ಮೆ, ಕ್ವಾರಂಟೈನ್‌ ಸೆಂಟರ್‌ನಲ್ಲಿ ಮತ್ತೊಮ್ಮೆ ಅವರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಕ್ವಾರಂಟೈನ್‌ನಲ್ಲಿರುವ ವ್ಯಕ್ತಿ ಮನೆಗೆ ಓಡಿ ಹೋಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

 ಲಾಕ್ಡೌನ್: ಕಾರ್ಮಿಕ, ವ್ಯಾಪಾರಿಗಳ ಕಷ್ಟಕ್ಕೆ ಏನಿದೆ ಪರಿಹಾರ ಲಾಕ್ಡೌನ್: ಕಾರ್ಮಿಕ, ವ್ಯಾಪಾರಿಗಳ ಕಷ್ಟಕ್ಕೆ ಏನಿದೆ ಪರಿಹಾರ

ಕ್ವಾರಂಟೈನ್‌ ಸೆಂಟರ್‌ನಲ್ಲಿ ಒಬ್ಬ ವೈದ್ಯರು ಇರಲಿದ್ದಾರೆ. ಪೊಲೀಸರು ದಿನಪೂರ್ತಿ ಸೆಂಟರ್‌ನ ಭದ್ರತೆಯ ನಿಗಾ ವಹಿಸಲಿದ್ದಾರೆ. ವಲಸೆ ಬಂದವರಿಗೆ ರಾಜ್ಯದಲ್ಲಿ ಕೊರೊನಾ ಸೋಂಕು ಹರಡಲು ಅವಕಾಶ ನೀಡುವುದಿಲ್ಲ ಎಂದು ಸರ್ಕಾರ ಹೇಳಿದೆ.

ಲಾಕ್ ಡೌನ್ ಜಾರಿಗೊಂಡ ಮೇಲೆ ಇದುವರೆಗೂ 3 ಲಕ್ಷ ವಲಸೆ ಕಾರ್ಮಿಕರು ಬಿಹಾರಕ್ಕೆ ವಾಪಸ್ ಆಗಿದ್ದಾರೆ. ಮಾರ್ಚ್ 17ರ ಬಳಿಕ ರಾಜ್ಯಕ್ಕೆ ಬಂದವರನ್ನು ಕ್ವಾರಂಟೈನ್‌ ಮಾಡಿ ಬಳಿಕ ಮನೆಗಳಿಗೆ ಕಳಿಸಲಾಗಿದೆ. ಈಗ ರಾಜ್ಯಕ್ಕೆ ಯಾರೇ ವಾಪಸ್ ಬಂದರೂ ಕ್ವಾರಂಟೈನ್‌ನಲ್ಲಿರುವುದು ಕಡ್ಡಾಯವಾಗಿದೆ.

ಆರೋಗ್ಯ ಇಲಾಖೆ ಕೊರೊನಾ ಹಾಟ್ ಸ್ಪಾಟ್‌ಗಳಲ್ಲಿ ಸ್ಕ್ರೀನಿಂಗ್ ವ್ಯವಸ್ಥೆ ಮಾಡಿದೆ. ವಲಸೆ ಬಂದ ಕಾರ್ಮಿಕರ ಪ್ರವಾಸದ ಇತಿಹಾಸವನ್ನು ನೋಂದಣಿ ಮಾಡಿಕೊಳ್ಳಲಾಗುತ್ತಿದೆ. ಬಿಹಾರದಲ್ಲಿ ಪ್ರಸ್ತುತ ಕೊರೊನಾ ಸೋಂಕಿತ ಸಂಖ್ಯೆ 383.

English summary
Over 3 lakh migrants returned to Bihar during the lockdown. 6 lakh may return after lifted of lockdown. Those who returned to state were quarantined in schools.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X