ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಮ್ ಹುಡುಗಿಗೆ ಹುಡುಗ ಬೇಕಾ: ಇಲ್ಲಿದೆ ವರರ ಮಾರುಕಟ್ಟೆ!

|
Google Oneindia Kannada News

ಪಾಟ್ನಾ, ಆಗಸ್ಟ್ 11: ಜಗತ್ತಿನಲ್ಲಿ ಪ್ರತಿಯೊಬ್ಬ ತಂದೆ ತಾಯಿ ತಮ್ಮ ಮಗಳಿಗೆ ಉತ್ತಮ ಗಂಡು ಹುಡುಕಬೇಕು ಅನ್ನೋ ಕನಸು ಕಟ್ಟಿಕೊಂಡಿರುತ್ತಾರೆ. ಅಂಥ ಪೋಷಕರಿಗೆ 21ನೇ ಶತಮಾನದಲ್ಲಿ ಸಾಕಷ್ಟು ಮಾರ್ಗಗಳು ಕಣ್ಣು ಎದುರಿಗಿವೆ. ಇಂಥದರ ಮಧ್ಯೆಯೂ ಅದೊಂದು ವರರ ಮಾರುಕಟ್ಟೆ ಸಖತ್ ಫೇಮಸ್ ಆಗಿದೆ.

ನಿಮ್ಮ ಮಗಳಿಗೆ ಸೂಟ್ ಆಗುವ ವರರನ್ನು ನೀವು ಈ ಮಾರುಕಟ್ಟೆಯಲ್ಲಿ ಸೆಲೆಕ್ಟ್ ಮಾಡಿಕೊಳ್ಳಬಹುದು. 700 ವರ್ಷಗಳ ಇತಿಹಾಸವನ್ನು ಹೊಂದಿರುವ ಈ ಮಾರುಕಟ್ಟೆ ಇಂದಿಗೂ ಹೇಗೆ ಕೆಲಸ ಮಾಡುತ್ತದೆ? ಎಂಬುದೇ ಕುತೂಹಲಕಾರಿಯಾಗಿದೆ.

30ರ ತರುಣಿ ಎಂದು 54ರ ಅಂಟಿ ಮದುವೆಯಾಗಿ ಮೋಸ ಹೋದ ವರ30ರ ತರುಣಿ ಎಂದು 54ರ ಅಂಟಿ ಮದುವೆಯಾಗಿ ಮೋಸ ಹೋದ ವರ

ಬಿಹಾರದ ಮಧುಬಾನಿ ಜಿಲ್ಲೆಯ ಸೌರಥ್ ಗ್ರಾಮದಲ್ಲೇ ಇಂಥದೊಂದು ಸ್ಪೆಷಲ್ ವರರ ಮಾರುಕಟ್ಟೆಯಿದೆ. ಈ ಮಾರುಕಟ್ಟೆಯಲ್ಲಿ ಒಬ್ಬೊಬ್ಬ ವರನಿಗೆ ಒಂದೊಂದು ಬೆಲೆ ಫಿಕ್ಸ್ ಮಾಡಿರಲಾಗುತ್ತದೆ. ವಿದ್ಯಾಭ್ಯಾಸ, ಉದ್ಯೋಗ ಮತ್ತು ಕೌಟುಂಬಿಕ ಹಿನ್ನೆಲೆ ಮೇಲೆ ವರನಿಗೆ ಬೆಲೆ ಕಟ್ಟಲಾಗಿರುತ್ತದೆ. ಓದುಗರಲ್ಲಿ ಆಸಕ್ತಿಯ ಜೊತೆಗೆ ಆಶ್ಚರ್ಯವನ್ನು ಹುಟ್ಟಿಸುವ ವಿಶೇಷ ಮಾರುಕಟ್ಟೆ ಕಥೆಯಿದು.

35 ವರ್ಷದ ವರನಿಗೆ 50,000 ರೂಪಾಯಿ ಬೆಲೆ

35 ವರ್ಷದ ವರನಿಗೆ 50,000 ರೂಪಾಯಿ ಬೆಲೆ

ಮಗಳಿಗೆ ವರನನ್ನು ಹುಡುಕುವ ಪೋಷಕರು ಈ ಮಾರುಕಟ್ಟೆಯಲ್ಲಿ ಪರಿಶೋಧಕರಾಗಿ ಇರುತ್ತಾರೆ. ಬಿಹಾರದ ವರರ ಮಾರುಕಟ್ಟೆಯಲ್ಲಿ ಭಾಗಿಯಾದ 35 ವರ್ಷದ ನಿರ್ಭಯ್ ಚಂದ್ರ ಝಾಗೆ 50,000 ರೂಪಾಯಿ ಬೆಲೆ ಫಿಕ್ಸ್ ಮಾಡಲಾಗಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ತಮ್ಮ ವಯಸ್ಸು ಸ್ವಲ್ಪ ಕಡಿಮೆಯಾಗಿದ್ದರೆ 2 ರಿಂದ 3 ಲಕ್ಷ ರೂಪಾಯಿ ಬೆಲೆ ಸಿಗುತ್ತಿತ್ತು ಎಂದು ಹೇಳಿಕೊಂಡಿದ್ದಾರೆ.

ಗುಪ್ತ್ ಗುಪ್ತ್ ಆಗಿ ನಡೆಯುವುದು ವರದಕ್ಷಿಣೆ ವಹಿವಾಟು!

ಗುಪ್ತ್ ಗುಪ್ತ್ ಆಗಿ ನಡೆಯುವುದು ವರದಕ್ಷಿಣೆ ವಹಿವಾಟು!

ಬಿಹಾರದಲ್ಲಿನ ವರರ ಮಾರುಕಟ್ಟೆ ಆಯೋಜಕ ಶೇಖರ್ ಚಂದ್ರ ಮಿಶ್ರಾ ವರದಕ್ಷಿಣೆ ಬಗ್ಗೆ ಮಾತನಾಡಿದ್ದಾರೆ. "ಈಗಿನ ಕಾಲದಲ್ಲಿ ವರದಕ್ಷಿಣೆ ಸಂಪೂರ್ಣ ನಿರ್ಮೂಲನೆಯಾಗಿದೆ ಎಂದು ಹೇಳುತ್ತಾರೆ. ಆದರೆ ಇಂದಿಗೂ ವರದಕ್ಷಿಣೆ ನೀಡುವ ಮತ್ತು ತೆಗೆದುಕೊಳ್ಳುವ ಪದ್ಧತಿ ಗೌಪ್ಯವಾಗಿಯೇ ಮುಂದುವರಿದಿದೆ. ತಂದೆ-ತಾಯಿಯರು ತಮ್ಮ ಮಗನನ್ನು ಇಂಜಿನಿಯರ್ ಮತ್ತು ಡಾಕ್ಟರ್ ಮಾಡುವುದಕ್ಕಾಗಿ ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಿರುತ್ತಾರೆ. ಹೀಗೆ ಹೂಡಿಕೆ ಮಾಡಿದ ಹಣವನ್ನು ವರದಕ್ಷಿಣೆ ಮೂಲಕ ವಸೂಲಿ ಮಾಡುವ ಯೋಜನೆ ಹಾಕಿಕೊಂಡಿರುತ್ತಾರೆ," ಮಿಶ್ರಾ ಹೇಳಿದ್ದಾರೆ.

ಲವ್ ಮ್ಯಾರೇಜ್ ಮೂಲಕ ವರದಕ್ಷಿಣೆಗೆ ಕಡಿವಾಣ!

ಲವ್ ಮ್ಯಾರೇಜ್ ಮೂಲಕ ವರದಕ್ಷಿಣೆಗೆ ಕಡಿವಾಣ!

ದೇಶದಲ್ಲಿ ಇಂದಿಗೂ ವರದಕ್ಷಿಣೆ ಕಾಟದಿಂದ ಸಾವಿರಾರು ಮಹಿಳೆಯರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ವರದಕ್ಷಿಣೆ ಪದ್ಧತಿಯನ್ನು ಕಾನೂನು ಪ್ರಕಾರ, ನಿರ್ಮೂಲನೆ ಮಾಡಬೇಕಿದೆ. ಅದಕ್ಕಾಗಿ ಕಠಿಣ ಕಾನೂನುಗಳನ್ನು ಜಾರಿಗೊಳಿಸಬೇಕಿದೆ. ಈ ವರದಕ್ಷಿಣೆ ಪಿಡುಗನ್ನು ತೊಡೆದು ಹಾಕುವುದಕ್ಕೆ ಲವ್ ಮ್ಯಾರೇಜ್ ಮಂತ್ರವೊಂದೇ ಬೆಸ್ಟ್ ಎಂದು ವರರ ಮಾರುಕಟ್ಟೆ ಆಯೋಜಕ ಮಿಶ್ರಾ ಅಭಿಪ್ರಾಯಪಟ್ಟಿದ್ದಾರೆ.

ಡೈವೋರ್ಸ್ ಅಪಾಯ ಹೆಚ್ಚಿಸುವ ಆನ್ ಲೈನ್ ಮದುವೆ!

ಡೈವೋರ್ಸ್ ಅಪಾಯ ಹೆಚ್ಚಿಸುವ ಆನ್ ಲೈನ್ ಮದುವೆ!

ಬಿಹಾರದಲ್ಲಿ ವರ್ಷಕ್ಕೊಮ್ಮೆ ನಡೆಯುವ ಈ ವರರ ಮಾರುಕಟ್ಟೆಯು ಇಂದಿಗೂ ಪೋಷಕರ ಪಾಲಿಗೆ ಸುರಕ್ಷಿತ ಎಂದೆನಿಸಿದೆ. ಆನ್ ಲೈನ್ ಮೂಲಕ ವಧು-ವರರನ್ನು ಹುಡುಕಿ ಮದುವೆ ಆಗುವುದರಿಂದ ಡೈವೋರ್ಸ್ ಮತ್ತು ಪ್ರತ್ಯೇಕವಾಗುವ ಅಪಾಯಗಳು ಹೆಚ್ಚಾಗಿರುತ್ತದೆ. ಆದರೆ ಈ ಸಾಂಪ್ರದಾಯಿಕ ಪದ್ಧತಿಯನ್ನು ಅನುಸರಿಸುವುದರಿಂದ ಯಾವುದೇ ರೀತಿ ಅಪಾಯ ಇರುವುದಿಲ್ಲ ಎಂದು ಮುಕ್ತಿನಾಥ್ ಪಠಾಕ್ ಹೇಳಿದ್ದಾರೆ.

English summary
50,000 rupee to one groom in matrimonial market: How This Market Works.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X