• search
  • Live TV
ಪಟ್ನಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಿಹಾರ: 2 ಹಂತದ ಚುನಾವಣೆಯ 389 ಕಲಿಗಳ ವಿರುದ್ಧ ಕ್ರಿಮಿನಲ್ ಕೇಸ್!

|

ಪಾಟ್ನಾ, ಅಕ್ಟೋಬರ್.29: ಬಿಹಾರದ ಎರಡನೇ ಹಂತದ ಚುನಾವಣಾ ಕಣದಲ್ಲಿ ಸ್ಪರ್ಧಿಸಿರುವ 389 ಅಭ್ಯರ್ಥಿಗಳು ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿದ್ದಾರೆ. ಈ ಪೈಕಿ ಇಬ್ಬರ ವಿರುದ್ಧ ಗಂಭೀರ ಆರೋಪದ ಪ್ರಕರಣ ದಾಖಲಾಗಿದೆ ಎಂದು ಎಡಿಆರ್ ವರದಿ ಮಾಡಿದೆ.

ರಾಜ್ಯದ 243 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದು, ಮೊದಲ ಹಂತದಲ್ಲಿ 71 ಕ್ಷೇತ್ರಗಳಲ್ಲಿ ಶೇ.55.69ರಷ್ಟು ಮತದಾನ ನಡೆದಿದೆ. ನವೆಂಬರ್.03ರಂದು ಎರಡನೇ ಹಂತದಲ್ಲಿ 17 ಜಿಲ್ಲೆಗಳ 94 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ಪ್ರಕ್ರಿಯೆ ನಡೆಯಲಿದೆ. ಅಂತಿಮವಾಗಿ ನವೆಂಬರ್.07ರಂದು ಮೂರನೇ ಹಂತದಲ್ಲಿ 15 ಜಿಲ್ಲೆಗಳ 78 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ನವೆಂಬರ್.10ರಂದು ಎಲ್ಲ ವಿಧಾನಸಭಾ ಕ್ಷೇತ್ರಗಳ ಚುನಾವಣಾ ಫಲಿತಾಂಶವು ಹೊರ ಬೀಳಲಿದೆ.

"ಜಂಗಲ್ ರಾಜ್ ಕಾ ಯುವರಾಜ್": ಪ್ರಧಾನಿಗೆ ತೇಜಸ್ವಿ ಯಾದವ್ ತಿರುಗೇಟು

ಎರಡನೇ ಹಂತದ ಮತದಾನಕ್ಕೆ ಐದು ದಿನಗಳಷ್ಟೇ ಬಾಕಿ ಉಳಿದಿರುವ ಬೆನ್ನಲ್ಲೇ ಕಣದಲ್ಲಿರುವ ಅಭ್ಯರ್ಥಿಗಳ ಇತಿಹಾಸ ಸಾಕಷ್ಟು ಸುದ್ದಿಯಾಗಿದೆ. 94 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ 389 ಅಭ್ಯರ್ಥಿಗಳು ಕ್ರಿಮಿನಲ್ ಅಪರಾಧದ ಆರೋಪ ಎದುರಿಸುತ್ತಿದ್ದಾರೆ ಎಂದು ಎಡಿಆರ್ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಯಾವ ಪಕ್ಷದ ಎಷ್ಟು ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಕೇಸ್ ಗಳಿವೆ ಎನ್ನುವುದರ ಕುರಿತು ಮಾಹಿತಿ ಇಲ್ಲಿದೆ ನೋಡಿ.

ಪಕ್ಷವಾರು ಅಪರಾಧ ಪ್ರಕರಣ ಸಂಖ್ಯೆ:

ಬಿಹಾರ ವಿಧಾನಸಭಾ ಚುನಾವಣೆಯ 2ನೇ ಹಂತದ 94 ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ಒಟ್ಟು 389 ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಕೇಸ್ ಗಳಿವೆ. ಈ ಪೈಕಿ ರಾಷ್ಟ್ರೀಯ ಜನತಾ ಪಕ್ಷ(RJD)ದ ಒಟ್ಟು 56 ಅಭ್ಯರ್ಥಿಗಳ ಪೈಕಿ 28 ಅಭ್ಯರ್ಥಿಗಳು ಕ್ರಿಮಿನಲ್ ಆರೋಪ ಎದುರಿಸುತ್ತಿದ್ದಾರೆ. ಲೋಕಜನಶಕ್ತಿ ಪಕ್ಷ(LJP)ದ 52 ಅಭ್ಯರ್ಥಿಗಳಲ್ಲಿ 24 ಜನರ ವಿರುದ್ಧ ಕ್ರಮಿನಲ್ ಕೇಸ್ ಗಳಿವೆ. ಬಿಜೆಪಿ 46 ಅಭ್ಯರ್ಥಿಗಳ ಪೈಕಿ 20 ಅಭ್ಯರ್ಥಿಗಳ ವಿರುದ್ಧ ಅಪರಾಧ ಮೊಕದ್ದಮೆಗಳು ದಾಖಲಾಗಿವೆ. ಬಿಎಸ್ ಪಿ 33 ಜನರ ಪೈಕಿ 12 ಅಭ್ಯರ್ಥಿಗಳ ವಿರುದ್ಧ ಕೇಸ್ ಗಳು ದಾಖಲಾಗಿವೆ. ಕಾಂಗ್ರೆಸ್ ಪಕ್ಷದ 24 ಅಭ್ಯರ್ಥಿಗಳ ಪೈಕಿ 10 ಜನರ ವಿರುದ್ಧ ಕ್ರಮಿನಲ್ ಕೇಸ್ ಗಳಿವೆ. ಜೆಡಿಯು ಪಕ್ಷದ 43 ಅಭ್ಯರ್ಥಿಗಳ ಪೈಕಿ 15 ಅಭ್ಯರ್ಥಿಗಳು ಕ್ರಿಮಿನಲ್ ಆರೋಪ ಎದುರಿಸುತ್ತಿದ್ದಾರೆ.

ಮಹಿಳೆಯರ ಮೇಲೆ ನಡೆಸಿದ ದೌರ್ಜನ್ಯಕ್ಕೆ ಸಂಬಂಧಿಸಿದಂತೆ 49 ಅಭ್ಯರ್ಥಿಗಳ ವಿರುದ್ಧ ಅಪರಾಧ ಪ್ರಕರಣಗಳು ಬಾಕಿ ಉಳಿದುಕೊಂಡಿವೆ. ಈ ಪೈಕಿ ನಾಲ್ವರು ಅಭ್ಯರ್ಥಿಗಳ ವಿರುದ್ಧ ಅತ್ಯಾಚಾರ ಪ್ರಕರಣ ಕೂಡಾ ದಾಖಲಾಗಿರುವುದು ಬೆಳಕಿಗೆ ಬಂದಿದೆ.

English summary
389 Candidates Have Facing Criminal Cases, Who Contesting In 2 Phase Election In Bihar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X