ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

40 ರೊಟ್ಟಿ, 10 ಪ್ಲೇಟ್ ಅನ್ನ: ಕ್ವಾರಂಟೈನ್‌ನಲ್ಲಿರುವ ವ್ಯಕ್ತಿ ಮಾಡುವ ಊಟವಿದು

|
Google Oneindia Kannada News

ಮೇ 29: ಬಿಹಾರದದ ಕೊರೊನಾ ಕ್ವಾರಂಟೈನ್‌ ಕೇಂದ್ರದಲ್ಲಿರುವ ವ್ಯಕ್ತಿ ಬರೋಬ್ಬರಿ 40 ರೊಟ್ಟಿ ಹಾಗೂ 10 ಪ್ಲೇಟ್ ಅನ್ನ ಊಟ ಮಾಡುತ್ತಿದ್ದು, ಅಡುಗೆ ಮಾಡುವವರು ಸುಸ್ತೆದ್ದು ಹೋಗಿದ್ದಾರೆ.

ಈತ ವಲಸೆ ಕಾರ್ಮಿಕನಾಗಿದ್ದು, ರಾಜಸ್ಥಾನದಿಂದ ಬಿಹಾರಕ್ಕೆ ಬಂದಿದ್ದು ಅಲ್ಲಿನ ಬುಕ್ಸಾರ್‌ನಲ್ಲಿರುವ ಕ್ವಾರಂಟೈನ್ ಸೆಂಟರ್‌ನಲ್ಲಿ ಆತನನ್ನು ಇರಿಸಲಾಗಿದೆ.

ಆತ ಎಷ್ಟು ಊಟ ಮಾಡುತ್ತಾನೋ ಅಷ್ಟು ಆಹಾರವನ್ನು ಒದಗಿಸುವಂತೆ ತಿಳಿಸಲಾಗಿದೆ ಎಂದು ಬ್ಲಾಕ್ ಡೆವಲಾಪ್‌ಮೆಂಟ್ ಅಧಿಕಾರಿ ಎಕೆ ಸಿಂಗ್ ತಿಳಿಸಿದ್ದಾರೆ.

ಎಂಥಾ ನಿರ್ಲಕ್ಷ್ಯ: ಕ್ವಾರಂಟೈನ್ ನಲ್ಲಿರುವ ವಲಸೆ ಕಾರ್ಮಿಕರಿಗಿಲ್ಲ ಕೋವಿಡ್-19 ಪರೀಕ್ಷೆ.!ಎಂಥಾ ನಿರ್ಲಕ್ಷ್ಯ: ಕ್ವಾರಂಟೈನ್ ನಲ್ಲಿರುವ ವಲಸೆ ಕಾರ್ಮಿಕರಿಗಿಲ್ಲ ಕೋವಿಡ್-19 ಪರೀಕ್ಷೆ.!

ಸುಮಾರು ಹತ್ತು ದಿನಗಳ ಹಿಂದೆ ಕ್ವಾರಂಟೈನ್‌ ಕೇಂದ್ರಕ್ಕೆ ಬಂದಿದ್ದು, ಇನ್ನು ಕೆಲವೇ ದಿನಗಳಲ್ಲಿ ವಾಪಸ್ ತೆರಳಲಿದ್ದಾರೆ. ಆತನಿಗೆ ಆಹಾರವನ್ನು ಒದಗಿಸಲು ಸಾಧ್ಯವೇ ಇಲ್ಲ ಎಂದು ಕ್ವಾರಂಟೈನ್ ಕೇಂದ್ರದ ಅಡುಗೆ ತಯಾರಿಕರಿಂದ ದೂರು ಬಂದಿತ್ತು.

23 Year Old Eats 40 Rotis 10 Plate Rice At Quarantine Centre

ಹೀಗಾಗಿ ಖುದ್ದಾಗಿ ಅಧಿಕಾರಿಗಳು ಕ್ವಾರಂಟೈನ್ ಕೇಂದ್ರಕ್ಕೆ ತೆರಳಿದಾಗಿ ಅವರೇ ನೋಡಿ ಆಶ್ಚರ್ಯಚಕಿತರಾದರು. ಈತನಿಂದಾಗಿ ಕ್ವಾರಂಟೈನ್ ಕೇಂದ್ರದಲ್ಲಿ ಆಹಾರ ಸಾಮಗ್ರಿಗಳ ಕೊರತೆ ಎದುರಿಸಬೇಕಾಗಿದೆ ಎಂದು ಹೇಳಲಾಗಿದೆ.

ಸಾವಿರಾರು ಮಂದಿ ವಲಸೆ ಕಾರ್ಮಿಕರು ಬಿಹಾರಕ್ಕೆ ಆಗಮಿಸಿದ್ದಾರೆ. 14 ದಿನಗಳ ಕ್ವಾರಂಟೈನ್‌ನಲ್ಲಿದ್ದಾರೆ. ಕ್ವಾರಂಟೈನ್ ಕೇಂದ್ರದ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಅತಿಯಾದ ಒತ್ತಡ ಕೂಡ ಮನುಷ್ಯ ಹೆಚ್ಚು ಆಹಾರವನ್ನು ಸೇವಿಸುವಂತೆ ಮಾಡುತ್ತದೆ ಎಂದು ಹಾರ್ವರ್ಡ್ ಮೆಡಿಕಲ್ ಸ್ಕೂಲ್ ಹೇಳಿದೆ.

English summary
A man in quarantine centre in Bihar's Buxar left officials perplexed after they found that the man eats 40 rotis (Chapatis) and 10 plates of rice in a day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X