ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: 10 ಲಕ್ಷ ಉದ್ಯೋಗ, 20 ಲಕ್ಷ ಉದ್ಯೋಗವಕಾಶ: ಬಿಹಾರ ಸಿಎಂ ಘೋಷಣೆ

|
Google Oneindia Kannada News

ಪಾಟ್ನಾ, ಆಗಸ್ಟ್ 15: ಬಿಹಾರದ ಯುವಕರಿಗೆ 10 ಲಕ್ಷ ಉದ್ಯೋಗಗಳನ್ನು ಒದಗಿಸುವ ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರ ಮಹತ್ವಾಕಾಂಕ್ಷೆಯ ಭರವಸೆಯನ್ನು ಬೆಂಬಲಿಸಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್ ಉದ್ಯೋಗವಕಾಶಗಳ ಬಗ್ಗೆ ಸೋಮವಾರ ಮಹತ್ತರ ಘೋಷಣೆ ಮಾಡಿದ್ದಾರೆ.

ಉದ್ಯೋಗವಕಾಶಗಳ ಬಗ್ಗೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಒಂದು ಹೆಜ್ಜೆ ಮುಂದೆ ಹೋಗಿದ್ದು, ಕನಿಷ್ಠ 10 ಲಕ್ಷ ಉದ್ಯೋಗಗಳನ್ನು ಮತ್ತು ಹೆಚ್ಚುವರಿ 10 ಲಕ್ಷ ಉದ್ಯೋಗವಕಾಶಗಳನ್ನು ಮೈತ್ರಿ ಸರಕಾರ ಒದಗಿಸಲಿದೆ ಎಂದು ಸೂಚಿಸಿದ್ದಾರೆ.

ಬಿಹಾರದಲ್ಲಿ 10 ಲಕ್ಷ ಉದ್ಯೋಗ ಸೃಷ್ಟಿಸುತ್ತೇವೆ: ಡಿಸಿಎಂ ತೇಜಸ್ವಿ ಯಾದವ್ಬಿಹಾರದಲ್ಲಿ 10 ಲಕ್ಷ ಉದ್ಯೋಗ ಸೃಷ್ಟಿಸುತ್ತೇವೆ: ಡಿಸಿಎಂ ತೇಜಸ್ವಿ ಯಾದವ್

ಪಾಟ್ನಾದ ಗಾಂಧಿ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ನಿತೀಶ್ ಕುಮಾರ್, 'ರಾಷ್ಟ್ರೀಯ ಜನತಾ ದಳ ಮತ್ತು ಜನತಾ ದಳ (ಯುನೈಟೆಡ್) ಮೈತ್ರಿ ಸರ್ಕಾರವು ಸರ್ಕಾರದಲ್ಲಿ ಕನಿಷ್ಠ 10 ಲಕ್ಷ ಉದ್ಯೋಗಗಳನ್ನು ಮತ್ತು ವಿವಿಧ ಕ್ಷೇತ್ರಗಳಲ್ಲಿ ಹೆಚ್ಚುವರಿ 10 ಲಕ್ಷ ಉದ್ಯೋಗವಕಾಶಗಳನ್ನು ಒದಗಿಸುವ ಪರಿಕಲ್ಪನೆಯನ್ನು ಹೊಂದಿದೆ' ಎಂದು ಹೇಳಿದರು.

10 lakh jobs, 10 lakh employment opportunities: Bihar Chief Minister Nitish Kumar Announcement

"ರಾಜ್ಯದ ಮಕ್ಕಳಿಗೆ ಸರ್ಕಾರ ಮತ್ತು ಹೊರಗಡೆಯೂ ಉದ್ಯೋಗ ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ನಾವು ತುಂಬಾ ಕೆಲಸ ಮಾಡುತ್ತೇವೆ. ಈ ಪ್ರಯತ್ನದಲ್ಲಿ ನಾವು ಯಶಸ್ವಿಯಾದರೆ, ಈ ಸಂಖ್ಯೆಯನ್ನು 20 ಲಕ್ಷಕ್ಕೆ ಕೊಂಡೊಯ್ಯೂತ್ತೇವೆ. ಇದನ್ನು ಜಾರಿಗೆ ತರಲು ಸರ್ಕಾರ ಎಲ್ಲೆಡೆ ಶ್ರಮಿಸುತ್ತದೆ" ಎಂದು ತಿಳಿಸಿದರು.

ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ಪ್ರತಿಪಕ್ಷದಲ್ಲಿದ್ದಾಗ 2020 ರ ವಿಧಾನಸಭಾ ಚುನಾವಣೆಯಲ್ಲಿ ನೀಡಿದ 10 ಲಕ್ಷ ಉದ್ಯೋಗಗಳ ಚುನಾವಣಾ ಭರವಸೆಯ ಮೇಲೆ ಪದೇ ಪದೇ ಟೀಕೆಗೆ ಒಳಗಾಗುತ್ತಿದ್ದಾರೆ. ಪ್ರತಿಪಕ್ಷಗಳು ತೇಜಸ್ವಿ ಅವರನ್ನು ಇದೇ ವಿಷಯದಲ್ಲಿ ಹಲವು ಬಾರಿ ವ್ಯಂಗ್ಯವಾಡಿದೆ. ಅದಕ್ಕೆಲ್ಲ ಇಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ತಿಲಾಂಜಲಿ ಹಾಡಿದ್ದು. ಆರ್‌ಜೆಡಿ ನಾಯಕನ ಈ ಹಿಂದಿನ ಉದ್ಯೋಗ ಭರವಸೆಗೆ ಬೆಂಬಲವಾಗಿದ್ದಾರೆ.

ನಿತೀಶ್ ಕುಮಾರ್‌ ಘೋಷಣೆ ಬೆನ್ನಲ್ಲೇ ಟ್ವೀಟ್ ಮಾಡಿರುವ ತೇಜಸ್ವಿ ಯಾದವ್, "ಗಾಂಧಿ ಮೈದಾನದಲ್ಲಿ ನಿರುದ್ಯೋಗಿಗಳು ಮತ್ತು ಯುವಕರ ನಿರೀಕ್ಷೆ ಮತ್ತು ಕನಸುಗಳಂತೆಯೇ ಬಿಹಾರದಲ್ಲಿ 10 ಲಕ್ಷ ಉದ್ಯೋಗಗಳು ಮತ್ತು ಇತರ 10 ಲಕ್ಷ ಉದ್ಯೋಗವಕಾಶಗಳನ್ನು ನೀಡುವ ಐತಿಹಾಸಿಕ ಘೋಷಣೆ ಮಾಡಿದ ಮುಖ್ಯಮಂತ್ರಿಗಳಿಗೆ ಧನ್ಯವಾದಗಳು" ಎಂದರು.

10 lakh jobs, 10 lakh employment opportunities: Bihar Chief Minister Nitish Kumar Announcement

ಜೊತೆಗೆ "ನಾನು ಮತ್ತು ನೀವು ಬಿಹಾರದ ಅಭಿವೃದ್ಧಿ ಮತ್ತು ಪ್ರಗತಿಯ ಹಾದಿಗಾಗಿ ತೆಗೆದುಕೊಳ್ಳುತ್ತೀರುವ ಪ್ರಮಾಣ ವಚನ ಇದು" ಎಂದಿದ್ದಾರೆ.

10 ಲಕ್ಷ ಉದ್ಯೋಗಗಳ ಭರವಸೆಯ ಬಗ್ಗೆ ಪದೇ ಪದೇ ಗೇಲಿಗೆ ಒಳಗಾಗಿದ್ದ ತೇಜಸ್ವಿ ಯಾದವ್ ಅವರು ಬಿಜೆಪಿಯ ಮೇಲೆ ಕಿಡಿಕಾರಿದ್ದರು.

"2014 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿ ವರ್ಷ ಭರವಸೆ ನೀಡಿದ 2 ಕೋಟಿ ಉದ್ಯೋಗಗಳು ಏನಾಯಿತು ಎಂದು ಅವರನ್ನು ಕೇಳಿ. ಬಿಜೆಪಿ ಅವರು ಸುಮಾರು ಎರಡು ವರ್ಷಗಳ ಕಾಲ ಅಧಿಕಾರದಲ್ಲಿದ್ದರು, ಅವರು ಭರವಸೆ ನೀಡಿದ 19 ಲಕ್ಷ ಉದ್ಯೋಗಗಳಲ್ಲಿ 19 ಉದ್ಯೋಗಗಳನ್ನಾದರೂ ನೀಡಿದೆಯೇ?" ಎಂದು ಟೀಕಿಸಿದ್ದರು.

English summary
10 lakh jobs, 10 lakh employment opportunities in Bihar: Chief Minister Nitish Kumar Announcement in Independence Day. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X