ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನವನ್ನು ಚೆಕ್ ಮೇಟ್ ಮಾಡಿದ ವಿದೇಶಾಂಗ ಸಚಿವ ಜೈಶಂಕರ್!

|
Google Oneindia Kannada News

ನವದೆಹಲಿ, ನವೆಂಬರ್ 16: "ಪಾಕಿಸ್ತಾನಕ್ಕೆ ಭಾರತದೊಂದಿಗೆ ಉತ್ತಮ ಸಂಬಂಧ ಬೇಕು ಎಂದಾದರೆ ಮೋಸ್ಟ್ ವಾಂಟೆಡ್ ಉಗ್ರರನ್ನು ಭಾರತಕ್ಕೆ ಹಸ್ತಾಂತರಿಸಲಿ" ಎನ್ನುವ ಮೂಲಕ ಪಾಕಿಸ್ತಾನವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ ವಿದೇಶಾಂಗ ಸಚಿವ ಎಸ್ ಜೈಶಂಕರ್.

ಫ್ರಾನ್ಸ್ ರಾಜಧಾನಿ ಪ್ಯಾರಿಸ್ ನಲ್ಲಿ ನಡೆಯುತ್ತಿರುವ ಶಾಂತಿ ಸಭೆಯಲ್ಲಿ ಭಾಗವಹಿಸಿದ್ದ ಜೈಶಂಕರ್, ಫ್ರೆಂಚ್ ದಿನಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ರೀತಿ ಹೇಳಿದರು.

"ಭಾರತದೊಂದಿಗೆ ಸ್ನೇಹಯುತ ಸಂಬಂಧವನ್ನು ಇಟ್ಟುಕೊಳ್ಳುವ ಬಗ್ಗೆ ಪಾಕಿಸ್ತಾನ ಗಂಭೀರವಾಗಿ ಯೋಚಿಸುತ್ತದೆ ಎಂದಾದರೆ ಅದು ದಾವೂದ್ ಇಬ್ರಾಹಿಂ, ಹಫೀಜ್ ಸಯ್ಯದ್ ರಂಥ ಮೋಸ್ಟ್ ವಾಂಟೆಡ್ ಉಗ್ರರನ್ನು ಭಾರತಕ್ಕೆ ಹಸ್ತಾಂತರಿಸಬೇಕು" ಎಂದು ಅವರು ಹೇಳಿದರು.

ಪಾಕ್ DNA ಯಲ್ಲೇ ಭಯೋತ್ಪಾದನೆ: ಯುನೆಸ್ಕೋದಲ್ಲೂ ಮುಖಭಂಗಪಾಕ್ DNA ಯಲ್ಲೇ ಭಯೋತ್ಪಾದನೆ: ಯುನೆಸ್ಕೋದಲ್ಲೂ ಮುಖಭಂಗ

S Jaishankar Says, Pakistan Should Hand Over Most Wanted Terrorists

ಲ್ಯಾಡೆನ್ ಪಾಕಿಸ್ತಾನದ ಹೀರೋ: ಪರ್ವೇಜ್ ಮುಷರಫ್

"ಉಭಯ ದೇಶಗಳ ನಡುವೆ ಸೌಹಾರ್ದಯು ಸಂಬಂಧ ನೆಲೆಗೊಳ್ಳದಿರುವುದಕ್ಕೆ ಮುಖ್ಯ ಕಾರಣವೆಂದರೆ ಪಾಕಿಸ್ತಾನ ತನ್ನ ನೆಲದಲ್ಲಿ ಒಂದು ಉಗ್ರ ಕಾರ್ಖಾನೆಯನ್ನು ಸ್ಥಾಪಿಸಿದೆ. ಮತ್ತು ಭಾರತದ ವಿರುದ್ಧ ದಾಳಿ ನಡೆಸಲು ಅವರನ್ನು ಕಳಿಸುತ್ತಿದೆ. ತನ್ನ ಈ ಸ್ಥಿತಿಯನ್ನು ಪಾಕಿಸ್ತಾನವೇ ಒಪ್ಪಿಕೊಂಡಿದೆ. ಹೀಗಿರುವಾಗ ಸ್ನೇಹಕ್ಕೆ ಕೈಚಾಚಲು ಅದರ ಬಳಿ ಯಾವ ನೈತಿಕತೆ ಇದೆ?" ಎಂದು ಅವರು ಪ್ರಶಸ್ನಿಸಿದರು.

ಜಾಗತಿಕ ಉಗ್ರ ಮಸೂದ್ ಅಜರ್, ಹಫೀಜ್ ಸಯ್ಯದ್ ಮತ್ತು ಭೂಗತ ದೊರೆ ದಾವೂದ್ ಇಬ್ರಾಹಿಂ ಈ ಮೂವರೂ ಉಗ್ರರೂ ಪಾಕಿಸ್ತಾನದಲ್ಲೇ ಇದ್ದಾರೆ ಎಂಬುದಕ್ಕೆ ಸಾಕ್ಷ್ಯಗಳಿದ್ದರೂ ಪಾಕಿಸ್ತಾನ ಅವರಿಗೆ ರಕ್ಷನೆ ನೀಡುತ್ತಿದ್ದು, ಅವರನ್ನು ಭಾರತಕ್ಕೆ ಹಸ್ತಾಂತರಿಸಲು ಹಿಂದೇಟು ಹಾಕುತ್ತಿರುವುದನ್ನು ಇಲ್ಲಿ ಸ್ಮರಿಸಬಹುದು.

English summary
Foriegn affairs Minister S Jaishakar Said, If Pakistan Wants Better Ties, It Should Hand Over Most Wanted People
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X