ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫ್ರಾನ್ಸ್ ನಲ್ಲಿ ಕಾಶ್ಮೀರದ ಬಗ್ಗೆ ಕೇಳಿದ ಟ್ರಂಪ್ ಗೆ ಮೋದಿ ಕೊಟ್ಟ ಉತ್ತರ...

|
Google Oneindia Kannada News

ಪ್ಯಾರಿಸ್, ಆಗಸ್ಟ್ 26: ಒಂದಲ್ಲ, ಎರಡಲ್ಲ, ಮೂರು ಬಾರಿ ಕಾಶ್ಮೀರದ ವಿಷಯದಲ್ಲಿ ಮೂಗು ತೂರಿಸಲು ಬಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಭಾರತ ಸೂಕ್ತ ಪ್ರತಿಕ್ರಿಯೆ ನೀಡಿದೆ.

"ಕಾಶ್ಮೀರಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಪಾಕಿಸ್ತಾನದ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸುವ 'ತೊಂದರೆ'ಯನ್ನು ಯಾವ ಮೂರನೇ ದೇಶವೂ ತೆಗೆದುಕೊಳ್ಳುವುದು ನಮಗೆ ಇಷ್ಟವಿಲ್ಲ" ಎಂದು ಅಧ್ಯಕ್ಷ ಟ್ರಂಪ್ ಗೆ ಮೋದಿ ಹೇಳಿದರು. ಈ ಮೂಲಕ 'ನಿಮ್ಮ ಅಗತ್ಯ ನಮಗಿಲ್ಲ' ಎಂದು ಪರೋಕ್ಷವಾಗಿ ಅಮೆರಿಕಕೆ ಬಿಸಿ ಮುಟ್ಟಿಸಿದರು.

ಕಾಶ್ಮೀರ ವಿಚಾರದಲ್ಲಿ ಮಧ್ಯಸ್ಥಿಕೆ: ಮತ್ತೆ ಮೂಗು ತೂರಿಸಿದ ಟ್ರಂಪ್ ಕಾಶ್ಮೀರ ವಿಚಾರದಲ್ಲಿ ಮಧ್ಯಸ್ಥಿಕೆ: ಮತ್ತೆ ಮೂಗು ತೂರಿಸಿದ ಟ್ರಂಪ್

Recommended Video

ಮೋದಿ ಹಿಂದಿಯಲ್ಲಿ ಮಾತನಾಡಿದಾಗ ಟ್ರಂಪ್ ಕಿಚಾಯಿಸಿದ್ದು ಹೀಗೆ | Oneindia Kannada

ಫ್ರಾನ್ಸ್ ನಲ್ಲಿ ನಡೆಯುತ್ತಿರುವ ಜಿ7 ಶೃಂಗಸಭೆಯಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಚರ್ಚೆ ನಡೆಸಿದರು. ಉಭಯ ರಾಷ್ಟ್ರಗಳ ವಾಣಿಜ್ಯ ವ್ಯವಹಾರಕ್ಕೆ ಸಂಬಂಧಿಸಿದಂತೆ ಆರಂಭವಾದ ಮಾತುಕತೆ ನಂತರ ಕಾಶ್ಮೀರ ವಿಷಯಕ್ಕೆ ಸಂಬಂಧಿಸಿದಂತೆಯೂ ತಿರುಗಿತ್ತು. ಕಾಶ್ಮೀರಕ್ಕೆ ಸಂಬಂಧಿಸಿದಂತೆ ಮೊದಲಿನಿಂದಲೂ ಉತ್ಸುಕತೆ ತೋರುತ್ತಲೇ ಇದ್ದ ಟ್ರಂಪ್ ಈ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸಲು ಅಮೆರಿಕ ಸಿದ್ಧ ಎಂದರು. ಆದರೆ ಅದಕ್ಕೆ ಮೋದಿ ನೀಡಿದ್ದು ಹೀಗೆ... (ಚಿತ್ರಗಳು: ಪಿಟಿಐ ಕೃಪೆ)

ಇದು ದ್ವಿಪಕ್ಷೀಯ ವಿಚಾರ

ಇದು ದ್ವಿಪಕ್ಷೀಯ ವಿಚಾರ

"ಭಾರತ ಮತ್ತು ಪಾಕಿಸ್ತಾನದ ನಡುವೆ ಸಾಕಷ್ಟು 'ದ್ವಿಪಕ್ಷೀಯ' ವಿಚಾರಗಳಿವೆ. ಅದು ಸ್ವಾತಂತ್ರ್ಯ ಸಿಕ್ಕಾಗಿನಿಂದಲೂ ಅಂದರೆ 1947 ರಿಂದಲೂ ಇದೆ. ಆದ್ದರಿಂದ ಈ ವಿಷಯದ ಕುರಿತಂತೆ ಮೂರನೇ ದೇಶ ಮಧ್ಯಸ್ಥಿಕೆ ವಹಿಸುವ ತೊಂದರೆ ತೆಗೆದುಕೊಳ್ಳುವುದನ್ನು ಭಾರತ ಎಂದಿಗೂ ಬಯಸುವುದಿಲ್ಲ. ನಾವು ಈ ವಿಷಯವನ್ನು ಚರ್ಚಿಸಿ ದ್ವಿಪಕ್ಷೀಯವಾಗಿಯೇ ಪರಿಹಾರ ಕಂಡುಕೊಳ್ಳುತ್ತೇವೆ" ಎಂದು ಪ್ರಧಾನಿ ಮೋದಿ ಟ್ರಂಪ್ ಗೆ ತಿಳಿಸಿದರು.

ಉದ್ವಿಗ್ನತೆ ಶಮನಗೊಳಿಸಿ: ಮೋದಿ, ಇಮ್ರಾನ್‌ಗೆ ಟ್ರಂಪ್ ಕರೆಉದ್ವಿಗ್ನತೆ ಶಮನಗೊಳಿಸಿ: ಮೋದಿ, ಇಮ್ರಾನ್‌ಗೆ ಟ್ರಂಪ್ ಕರೆ

ಕಾಶ್ಮೀರಕ್ಕಿಂತ ಬೇರೆ ವಿಷಯವಿದೆ!

ಕಾಶ್ಮೀರಕ್ಕಿಂತ ಬೇರೆ ವಿಷಯವಿದೆ!

"ನಮ್ಮ ಎರಡು ದೇಶಗಳಲ್ಲಿ ಬಡತನ, ಅನಕ್ಷರತೆ ಮತ್ತು ರೋಗಗಳು ಎಲ್ಲ ಸಮಸ್ಯೆಗಳಿಗಿಂತ ದೊಡ್ಡ ಸಮಸ್ಯೆಗಳಾಗಿವೆ. ಅವುಗಳ ಬಗ್ಗೆ ಉಭಯ ದೇಶಗಳೂ ಚಿಂತಿಸಬೇಕಿದೆ. ಮಿಕ್ಕ ವಿಷಯ ಆನಂತರ. ಭಾರತ ಮತ್ತು ಪಾಕಿಸ್ತಾನ ತನ್ನದೇಶದ ಜನರ ಒಳಿತಿಗಾಗಿ ಕೆಲಸ ಮಾಡಬೇಕು" ಎಂದು ಮೋದಿ ಹೇಳಿದರು.

ಠುಸ್ ಅಂತು 'ಸ್ಫೋಟಕ'!

ಠುಸ್ ಅಂತು 'ಸ್ಫೋಟಕ'!

ಜಮ್ಮು ಮತ್ತು ಕಾಶ್ಮೀರದ ವಿಷಯವನ್ನು 'ಸ್ಫೋಟಕ' ಎಂದು ವ್ಯಾಖ್ಯಾನಿಸಿದ್ದ ಟ್ರಂಪ್, ಈ 'ಸ್ಫೋಟಕ' ವಿಷಯದ ಬಗ್ಗೆ ನಾನು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಚರ್ಚಿಸುತ್ತೇನೆ ಎಂದಿದ್ದರು. ಆದರೆ ಅವರ 'ಮಧ್ಯಸ್ಥಿಕೆಯ ಉತ್ಸಾಹಕ್ಕೆ' ಶಾಂತವಾಗಿಯೇ ಉತ್ತರಿಸಿ, ತಣ್ಣೀರೆರಚುವ ಮೂಲಕ ಮೋದಿ ಅವರು 'ಸ್ಫೋಟಕ'ವನ್ನು ಠುಸ್ ಗೊಳಿಸಿದ್ದಾರೆ!

ಪದೇ ಪದೇ ಮುಖಭಂಗ

ಪದೇ ಪದೇ ಮುಖಭಂಗ

ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಾನವನ್ನು ಭಾರತ ವಾಪಸ್ ಪಡೆದ ನಂತರ ಇದು ಮೂರನೇ ಬಾರಿ ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆಯ ಉತ್ಸಾಹ ತೋರಿದ್ದಾರೆ. ಆದರೆ ಪ್ರತಿ ಬಾರಿಯೂ ಭಾರತ ಟ್ರಂಪ್ ಉತ್ಸಾಹಕ್ಕೆ ಪ್ರೋತ್ಸಾಹ ನೀಡದೆ, ಪರೋಕ್ಷವಾಗಿಯೇ ಮುಖಭಂಗ ಮಾಡಿದೆ.

ಭಾರತ-ಚೀನಾಕ್ಕೆ ಎಚ್ಚರಿಕೆ ನೀಡಿದ ಟ್ರಂಪ್ ಎದೆಯಲ್ಲಿ ವಿಲವಿಲ!ಭಾರತ-ಚೀನಾಕ್ಕೆ ಎಚ್ಚರಿಕೆ ನೀಡಿದ ಟ್ರಂಪ್ ಎದೆಯಲ್ಲಿ ವಿಲವಿಲ!

English summary
PM Narendra Modi to US President Donald Trump repeats that Kashmir i a bilateral issue between India and Pakistan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X